ಪ್ರತಿಭಟನಾಕಾರರ ಮೇಲೆ ಪೊಲೀಸರಿಂದ ಲಾಠಿಚಾರ್ಜ್; ಇದನ್ನು ಖಂಡಿಸಿ ಬಂದ್ ಗೆ ಕರೆ !
ಉತ್ತರಕಾಶಿ (ಉತ್ತರಾಖಂಡ) – ಅಕ್ರಮ ಮಸೀದಿ ತೆರವುಗೊಳಿಸುವಂತೆ ಆಗ್ರಹಿಸಿ ಹಿಂದೂ ಸಂಘಟನೆಗಳು ರಸ್ತೆಗಿಳಿದವು. ಸ್ಥಳೀಯ ಹಿಂದೂ ಮತ್ತು ಧಾರ್ಮಿಕ ಸಂಘಟನೆಗಳಿಗೆ ಸಂಬಂಧಿಸಿದವರು ಅಕ್ಟೋಬರ್ ೨೪ ರಂದು ಪ್ರತಿಭಟನೆ ನಡೆಸಿದರು. ಪ್ರತಿಭಟನೆ ವೇಳೆ ಕಲ್ಲುತೂರಾಟ ನಡೆದ ಕಾರಣ ಬಿಗುವಿನ ವಾತಾವರಣ ನಿರ್ಮಾಣವಾಯಿತು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿಚಾರ್ಜ್ ನಡೆಸಿದ ಪರಿಣಾಮ ೨೭ ಜನರು ಗಾಯಗೊಂಡಿದ್ದಾರೆ.
ಪೊಲೀಸರು ನಡೆಸಿದ ಲಾಠಿಚಾರ್ಜ್ ಖಂಡಿಸಿ ಹಿಂದೂ ಸಂಘಟನೆಗಳು ಅಕ್ಟೋಬರ್ ೨೫ ರಂದು ಬಂದಗೆ ಕರೆ ನೀಡಿದ್ದರು. ಈ ಬಂದ್ ಗೆ ಅಭೂತಪೂರ್ವ ಸ್ಪಂದನ ದೊರೆತಿದೆ.
೧. ಉತ್ತರಕಾಶಿಯ ಬರಾಹತ ಪ್ರದೇಶದಲ್ಲಿನ ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಸೀದಿ ಕಟ್ಟಲಾಗಿದೆಯೆಂದು ಹಿಂದೂ ಸಂಘಟನೆಗಳು ಆರೋಪಿಸಿವೆ. ಮಸೀದಿ ನೆಲಸಮ ಮಾಡುವಂತೆ ಪದೇ-ಪದೇ ಆಗ್ರಹಿಸಲಾಗಿದ್ದು ಅಕ್ಟೋಬರ್ ೨೪ ರಂದು ಪ್ರತಿಭಟನಾಕಾರರು ಅಲ್ಲಿನ ಹನುಮಾನ ವೃತ್ತದಿಂದ ಮೋರ್ಚಾ ನಡೆಸಿದರು.
೨. ಈ ಮೋರ್ಚಾದಿಂದ ಉತ್ತರಕಾಶಿ, ದುಂಡ, ಬಟವಾಡಿ, ಜೋಶಿಯಾರ ನ ಮಾರುಕಟ್ಟೆಗಳು ಸಂಪೂರ್ಣವಾಗಿ ಮುಚ್ಚಿದ್ದವು. ಪ್ರತಿಭಟನಾಕಾರರು ಹನುಮಾನ ವೃತ್ತದಿಂದ ಮಸೀದಿಯ ಕಡೆಗೆ ಹೋಗುವಾಗ, ಅವರನ್ನು ತಡೆಯುವದಕ್ಕಾಗಿ ಜಿಲ್ಲಾ ಆಡಳಿತದಿಂದ ಗಂಗೋತ್ರಿ ರಾಷ್ಟ್ರೀಯ ಮಹಾಮಾರ್ಗದಲ್ಲಿ ಬಡವಡಿಯಲ್ಲಿ ಬ್ಯಾರಿಕೆಡ್ಸ ಹಾಕಲಾದವು. ಪ್ರತಿಭಟನಾಕಾರರು ಬ್ಯಾರಿಕೆಡ್ಸ್ ತೆರವುಗೊಳಿಸಲು ಆರಂಭಿಸಿದಾಗ ಪೊಲೀಸರ ಜೊತೆ ವಾಗ್ವಾದ ನಡೆಯಿತು. ಪ್ರತಿಭಟನಾಕಾರರನ್ನು ಪೊಲೀಸರು ಮುಂದೆ ಹೋಗದಂತೆ ತಡೆದಿದ್ದಕ್ಕಾಗಿ ಪ್ರತಿಭಟನಾಕಾರರು ಧರಣಿ ನಡೆಸಿ ಹನುಮಾನ ಚಾಲಿಸಾ ಪಠಣೆ ಆರಂಭಿಸಿದರು.
೩. ಇದರ ನಂತರ ಪ್ರತಿಭಟನಾಕಾರರು ಬ್ಯಾರಿಕೆಡ್ಸ ತೆಗೆಯಲು ಪ್ರಯತ್ನ ಮಾಡಿದಾಗ ಪೊಲೀಸರ ಜೊತೆಗೆ ಮಾರಾಮಾರಿ ನಡೆಯಿತು. ಪೊಲೀಸರು ಪ್ರತಿಭಟನಾಕಾರರ ಮೇಲೆ ಲಾಠಿ ಚಾರ್ಜ್ ಹಾಗೂ ಆಶ್ರುವಾಯುವಿನ ಪ್ರಯೋಗ ಕೂಡ ಮಾಡಿದರು. ಈ ಮಾರಾಮಾರಿಯಲ್ಲಿ ೭ ಪೊಲೀಸರ ಸಹಿತ ೨೭ ಜನರು ಗಾಯಗೊಂಡರು.
ಪರಿಸ್ಥಿತಿ ಕೈ ಮೀರಿ ಹೋಗುವಂತೆ ಮಾಡುವುದೇ ಈ ಷಡ್ಯಂತ್ರದ ಭಾಗವಾಗಿತ್ತು ಹಾಗಾಗಿ ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಲಾಯಿತು ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.
೪. ಉತ್ತರಕಾಶಿಯ ಪೊಲೀಸ ಅಧಿಕಾರಿ ಅಮಿತ ಶ್ರೀವಾಸ್ತವ ಅವರು, ಕಲ್ಲುತೂರಾಟದ ಘಟನೆ ಗಂಭೀರವೆಂದು ಪರಿಗಣಿಸಿರುವುದರಿಂದ ಅದರ ವಿಚಾರಣೆ ನಡೆಸಲಾಗುವುದು. ಆರೋಪಿಗಳ ಗುರುತು ಪತ್ತೆ ಹಚ್ಚಿ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಈಗ ನಗರದಲ್ಲಿನ ಪರಿಸ್ಥಿತಿ ಸಾಮಾನ್ಯ ಮತ್ತು ಶಾಂತಿಯುತವಾಗಿದೆ. ನಗರದ ಸುರಕ್ಷಗಾಗಿ ಸಾಕಷ್ಟು ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ ಎಂದು ಹೇಳಿದರು.
೫. ಪ್ರತಿಭಟನೆಯ ನಂತರ ಮಸೀದಿಯ ಸುತ್ತಲಿನ ಸುರಕ್ಷೆಯನ್ನು ಬಿಗಿಗೊಳಿಸಲಾಗಿದೆ. ಈ ಪ್ರದೇಶದಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ .
Hindu organisations’ protest demanding action against the illegal mosque in #Uttarkashi, #Uttarakhand
A bandh was observed in protest against the police lathicharge on the protestors!
Why did the protest arise regarding the illegal mosque construction?
Even after repeated… pic.twitter.com/fo85RNT0TM
— Sanatan Prabhat (@SanatanPrabhat) October 25, 2024
ಏನಿದು ಪ್ರಕರಣ ?
ಸರಕಾರಿ ಭೂಮಿಯಲ್ಲಿ ಅಕ್ರಮವಾಗಿ ಮಸೀದಿ ಕಟ್ಟಲಾಗಿದೆ ಎಂದು ಹಿಂದುಗಳ ಆರೋಪವಾಗಿದೆ; ಆದರೆ ಈ ಮಸೀದಿ ಹಳೆಯದಾಗಿದ್ದು ಮುಸಲ್ಮಾನ ಜನಾಂಗದ ಜಾಗದಲ್ಲಿಯೇ ಕಟ್ಟಲಾಗಿದೆ ಎಂದು ಜಿಲ್ಲಾ ಆಡಳಿತ ಹೇಳಿದೆ. ಮೇ ೨೦.೧೯೮೭ ರಂದು ಉತ್ತರ ಪ್ರದೇಶದ ಮುಸ್ಲಿಂ ವಕ್ಫ್ ಮಂಡಳಿಯು ಪ್ರಕಾಶಿತಗೊಳಿಸಿದ ಸರಕಾರಿ ರಾಜಪತ್ರದಲ್ಲಿ ಈ ಮಸೀದಿಯ ಉಲ್ಲೇಖವಿದೆ. ೨೦೦೫ ರಲ್ಲಿ ತಹಸೀಲದಾರರ ಸುತ್ತೋಲೆಯಲ್ಲಿ ಈ ಮಸೀದಿ ಸಂಬಂಧಿತ ಜಾಗದಲ್ಲಿ ಕಟ್ಟಲಾಗಿದೆ. ಸಂಯುಕ್ತ ಸನಾತನ ಧರ್ಮ ರಕ್ಷಕ ಸಂಘದಿಂದ ಮಾಹಿತಿ ಅಧಿಕಾರದ ಅಡಿ ಮಸೀದಿಯ ಮಾಹಿತಿ ಕೇಳಿದ ನಂತರ ಈ ವಿವಾದ ಆರಂಭವಾಯಿತು. ಈ ಮಾಹಿತಿಯ ಪ್ರಕಾರ ಜಿಲ್ಲಾ ಆಡಳಿತವು ಈ ಬಗ್ಗೆ ಸ್ಪಷ್ಟ ಮಾಹಿತಿ ನೀಡುತ್ತಿಲ್ಲ, ಅವರ ಬಳಿ ಅಗತ್ಯ ದಾಖಲೆಗಳು ಇಲ್ಲವೆಂದು ಹೇಳಲಾಗಿದೆ.
ಇದರ ನಂತರ ಸಪ್ಟೆಂಬರ್ ೬.೨೦೨೪ ರಂದು ಹಿಂದೂ ಸಂಘಟನೆಗಳು ಮಸೀದಿ ನೆಲ ಸಮ ಮಾಡಲು ಆಗ್ರಹಿಸುತ್ತಾ ಜಿಲ್ಲಾಧಿಕಾರಿ ಕಾರ್ಯಾಲಯದ ಹೊರಗೆ ಪ್ರತಿಭಟನೆ ನಡೆಸಿ ಸರಕಾರಕ್ಕೆ ಮೂರು ದಿನಗಳ ಗಡುವು ನೀಡಿದ್ದವು. ‘ಬೇಡಿಕೆ ಪೂರ್ಣವಾಗದಿದ್ದರೆ ನಾವು ಸ್ವತಃ ಮಸೀದಿಯನ್ನು ಕೆಡವುತ್ತೇವೆ’ ಎಂದು ಸಂಘಟನೆಗಳು ಎಚ್ಚರಿಕೆ ನೀಡಿದ್ದವು. ಅದರ ನಂತರ ಉತ್ತರ ಕಾಶಿಯ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಈ ಪ್ರಕರಣದ ವಿಚಾರಣೆಗಾಗಿ ಒಂದು ಸಮಿತಿ ರಚಿಸಿದರು. ಮಸೀದಿ ಅಕ್ರಮ ಕಟ್ಟಡವಲ್ಲ ಮತ್ತು ಅದು ಸರಕಾರಿ ಜಾಗದಲ್ಲಿಲ್ಲ ಎಂದು ಸಮಿತಿ ಹೇಳಿದೆ.
ಪೊಲೀಸ ಅಧಿಕಾರಿ ಅಮಿತ್ ಶ್ರೀವಾಸ್ತವ ಅವರು ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ, ನಮ್ಮ ನೋಂದಣಿಯ ಪ್ರಕಾರ ಈ ಮಸೀದಿಯು ನೋಂದಣಿಕೃತ ಜಾಗದಲ್ಲಿಯೇ ಕಟ್ಟಲಾಗಿದೆ. ಈ ಜಾಗ ೪ ಜನರ ಹೆಸರಿನಲ್ಲಿದೆ. ಸರ್ಕಾರವು ಈ ಬಗ್ಗೆ ಹಿಂದೂ ಸಂಘಟನೆಗಳಿಗೆ ಮಾಹಿತಿ ನೀಡಿತ್ತು ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವು
|