ಟರ್ಕಿಯಿಂದ ಪ್ರತೀಕಾರವಾಗಿ ಇರಾಕ್ ಮತ್ತು ಸಿರಿಯಾ ದೇಶದ ಕುರ್ದಿಶ ಬಂಡುಖೋರರ 30 ನೆಲೆಗಳ ಮೇಲೆ ದಾಳಿ
ಅಂಕಾರಾ (ಟರ್ಕಿ) – ಟರ್ಕಿ ರಾಜಧಾನಿ ಅಂಕಾರಾದಲ್ಲಿ ಅಕ್ಟೋಬರ 23ರ ರಾತ್ರಿ ಭಯೋತ್ಪಾದಕ ದಾಳಿ ನಡೆದಿದೆ. 2 ಭಯೋತ್ಪಾದಕರು `ಟರ್ಕಿ ಏರೋಸ್ಪೇಸ ಇಂಡಸ್ಟ್ರೀಸ’ ನ ಕೇಂದ್ರ ಕಚೇರಿಯನ್ನು ಗುರಿಯಾಗಿಸಿಕೊಂಡಿದ್ದರು. ಆ ಸ್ಥಳದಲ್ಲಿ ಬಾಂಬ್ ಸ್ಫೋಟ ಹಾಗೂ ಗುಂಡಿನದಾಳಿ ನಡೆಸಿದರು. ಇದರಲ್ಲಿ 10 ಜನರು ಸಾವನ್ನಪ್ಪಿದರು ಹಾಗೂ 14 ಜನರು ಗಾಯಗೊಂಡರು. ಟರ್ಕಿ ಗೃಹಸಚಿವ ಅಲಿ ಯೆರಲಿಕಾಯಾ ಇವರು ಈ ಮಾಹಿತಿಯನ್ನು ನೀಡಿದರು. ಮೃತರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಇದುವರೆಗೆ ಯಾವುದೇ ಸಂಘಟನೆಯು ಈ ದಾಳಿಯ ಹೊಣೆಯನ್ನು ಸ್ವೀಕರಿಸಿಲ್ಲದಿದ್ದರೂ ಟರ್ಕಿ ದಾಳಿಯ ಕೆಲವು ಗಂಟೆಗಳ ಬಳಿಕ ಉತ್ತರ ಇರಾಕ ಮತ್ತು ಸಿರಿಯಾದ ದೇಶದ ‘ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ’ (ಪಿಕೆಕೆ) ಈ ಕುರ್ದಿಶ ಬಂಡುಕೋರ ಸಂಘಟನೆಯ ನೆಲೆಗಳನ್ನು ಗುರಿಯಾಗಿಸಿಕೊಂಡವು. ಸುಮಾರು 30 ಸ್ಥಳಗಳಲ್ಲಿ ವೈಮಾನಿಕ ದಾಳಿ ನಡೆಸಲಾಯಿತು. ಟರ್ಕಿಯ ಈ ದಾಳಿಯ ನಂತರ ಇದುವರೆಗೂ ‘ಪಿ.ಕೆ.ಕೆ’ ಯಿಂದ ಯಾವುದೇ ಅಧಿಕೃತ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ.
‘ನ್ಯಾಟೋ’ (‘ನ್ಯಾಟೋ’ ಅಂದರೆ ‘ನಾರ್ಥ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್’, ಹೆಸರಿನ ವಿಶ್ವದ 29 ದೇಶಗಳನ್ನು ಒಳಗೊಂಡಿರುವ ಒಂದು ಸೇನಾ ಸಂಘಟನೆ) ಪ್ರಧಾನ ಕಾರ್ಯದರ್ಶಿ ಮಾರ್ಕ್ ರೂಟ ಇವರು ಈ ದಾಳಿಯನ್ನು ಖಂಡಿಸಿದರು. ಅವರು, ಟರ್ಕಿ ಮೇಲಿನ ಈ ದಾಳಿ ಗಂಭೀರವಾಗಿದೆ. ನಾವು ಟರ್ಕಿಯೊಂದಿಗೆ ಇದ್ದೇವೆ ಮತ್ತು ಈ ಘಟನೆಯ ಬಗ್ಗೆ ನಿಗಾವಹಿಸಿದ್ದೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುಇಸ್ಲಾಮಿಕ್ ದೇಶಗಳಲ್ಲಿ ಭಯೋತ್ಪಾದಕ ದಾಳಿಗಳು ನಡೆದಾಗ, ಅವರು ತಕ್ಷಣವೇ ಸಂಬಂಧಿಸಿದ ಭಯೋತ್ಪಾದಕರ ನೆಲೆಗಳ ಮೇಲೆ ಇತರ ದೇಶಗಳ ಸ್ಥಳಗಳ ಮೇಲೆ ದಾಳಿ ಮಾಡುತ್ತಾರೆ; ಹೀಗಿರುವಾಗ ಭಾರತವು ಪಾಕಿಸ್ತಾನದ ಮೇಲೆ ಏಕೆ ಈ ರೀತಿ ದಾಳಿ ಮಾಡುವುದಿಲ್ಲ ? |