Mc D Food Infection: ಅಮೇರಿಕಾ : ಮ್ಯಾಕ್ಡೊನಾಲ್ಡ್ ನ ಬರ್ಗರ್ ತಿಂದ ೪೯ ಜನರಿಗೆ ‘ಈ- ಕೋಲಾಯಿ’ ರೋಗದ ಸೋಂಕು !

ಓರ್ವ ಮೃತ

ವಾಷಿಂಗ್ಟನ್ (ಅಮೇರಿಕಾ) – ಮ್ಯಾಕ್ಡೊನಾಲ್ಡ್ ದ ‘ಕ್ವಾರ್ಟರ್ ಫೌಂಡರ್ ಹ್ಯಾಂಬರ್ಗರ್’ ತಿಂದ ಅಮೆರಿಕದಲ್ಲಿನ ಕನಿಷ್ಠ ೪೯ ಜನರಿಗೆ ‘ಈ-ಕೋಲಾಯಿ’ ಈ ರೋಗದ ಲಕ್ಷಣಗಳು ಕಂಡು ಬಂದಿದ್ದು ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಓರ್ವ ವ್ಯಕ್ತಿ ಸಾವನ್ನಪ್ಪಿರುವ ಸಮಾಚಾರವಿದೆ.

೧. ಅಮೇರಿಕಾದಲ್ಲಿ ಕನಿಷ್ಠ ೧೦ ರಾಜ್ಯಗಳಲ್ಲಿ ಈ ರೋಗದ ಸಂಕ್ರಮಣ ಆಗಿದ್ದು ಎಲ್ಲಕ್ಕಿಂತ ಹೆಚ್ಚಿನ ೨೭ ಪ್ರಕರಣಗಳು ಕೋಲೋರಾಡೋ ರಾಜ್ಯದಲ್ಲಿ ಹಾಗೂ ೯ ಪ್ರಕರಣಗಳು ನೇಬ್ರಾಸ್ಕಾ ರಾಜ್ಯದಲ್ಲಿ ಕಂಡುಬಂದಿವೆ.

೨. ಸ್ಥಳೀಯ ಪ್ರಸಾರ ಮಾಧ್ಯಮಗಳ ಪ್ರಕಾರ, ಸಪ್ಟೆಂಬರ್ ಕೊನೆಯಿಂದಲೇ ನಾಗರೀಕರಲ್ಲಿ ಈ-ಕೋಲಾಯಿ ರೋಗದ ಲಕ್ಷಣಗಳು ಕಂಡುಬಂದಿವೆ. ಇದರಲ್ಲಿ ಅನೇಕರು ಮ್ಯಾಕ್ಡೊನಾಲ್ಡ್ ನ ‘ಕ್ವಾರ್ಟರ್ ಫೌಂಡರ್ ಹ್ಯಾಂಬರ್ಗರ್’ ತಿಂದಿರುವುದು ಬೆಳಕಿಗೆ ಬಂದಿದೆ.

೩. ಅಮೇರಿಕಾದ ‘ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ ‘(ಸಿಡಿಸಿ) ಇಲಾಖೆಯಿಂದ ಸಮೀಕ್ಷೆ ನಡೆಯುತ್ತಿದ್ದು ‘ಕ್ವಾರ್ಟರ್ ಫೌಂಡರ್ ಹ್ಯಾಂಬರ್ಗರ್’ ನಲ್ಲಿ ಸಿಲ್ವರ್ ಅನಿಯನ್ ಮತ್ತು ಬಿಫ್ (ಗೋಮಾಂಸ), ಇದರಿಂದ ಈ ರೋಗ ಕಾಣಿಸಿಕೊಂಡಿರಬಹುದು, ಎಂದು ಪ್ರಾಥಮಿಕ ನಿರೀಕ್ಷಣೆಯಿಂದ ಹೇಳಲಾಗುತ್ತಿದೆ. ಈ ಪ್ರಕರಣಗಳು ಬೆಳಕಿಗೆ ಬಂದಿರುವ ರಾಜ್ಯಗಳಲ್ಲಿ ಈ ಪದಾರ್ಥಗಳ ಮಾರಾಟದ ಮೇಲೆ ತಾತ್ಕಾಲಿಕ ನಿಷೇಧ ಕೂಡ ಹೇರಲಾಗಿದೆ.

‘ಈ-ಕೊಲಾಯಿ’ ರೋಗಗಳ ಲಕ್ಷಣಗಳು !

ಜ್ವರ, ವಾಂತಿ, ಗಂಟಲು ಒಣಗುವುದು, ಮೂತ್ರ ವಿಸರ್ಜನೆ ಆಗದಿರುವುದು, ತಲೆ ಸುತ್ತುವುದು ಇಂತಹ ಲಕ್ಷಣಗಳ ಸಮಾವೇಶವಿದೆ. ಇದರ ಜೊತೆಗೆ ಕೆಲವು ಜನರಲ್ಲಿ ಮೂತ್ರಪಿಂಡದ ಸಮಸ್ಯೆಗಳು ಕೂಡ ಉದ್ಭವಿಸಬಹುದು. ಸೋಂಕಿನ ನಂತರ ೩- ೪ ದಿನದ ನಂತರ ಈ ಲಕ್ಷಣಗಳು ಕಂಡು ಬರುತ್ತವೆ.

ಸಂಪಾದಕೀಯ ನಿಲುವು

ಭಾರತದ ಓಣಿಗಳಲ್ಲಿ ಮ್ಯಾಕ್ಡೊನಾಲ್ಡ್ ನ ದೊಡ್ಡ ದೊಡ್ಡ ಅಂಗಡಿಗಳಿದ್ದು ಸತರ್ಕತೆಯ ಉಪಾಯವೆಂದು ಸರಕಾರವು ಇಲ್ಲಿಯ ಪದಾರ್ಥಗಳ ಪರಿಶೀಲನೆ ಮಾಡುವುದು ಆವಶ್ಯಕವಾಗಿದೆ !