ಸಂತರ (ಗುರುಗಳ) ಆಜ್ಞಾಪಾಲನೆ ಸಾಧನೆಯಲ್ಲಿ ಮಹತ್ವದ್ದು !

ತಮ್ಮ ಕೃತಿಯಿಂದ ಕಲಿಸುವ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ

೧. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಇವರು ‘ಸಂತರು ಹೇಳಿದ್ದನ್ನು ಕೇಳಬೇಕು’, ಎಂದು ಓರ್ವ ಸಾಧಕಿಗೆ ಹೇಳುವುದು

ಓರ್ವ ಸಾಧಕಿಯು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರಿಗೆ, ”ಪೂ. ರೇಖಾ ಅಕ್ಕನವರು (ಸನಾತನದ ೬೦ ನೇ ಸಂತ ಪೂ. ರೇಖಾ ಕಾಣಕೋಣಕರ (ವಯಸ್ಸು ೪೬ ವರ್ಷಗಳು) ಇವರು ನನಗೆ ನಿಮ್ಮ ಭೇಟಿಗಾಗಿ ಅವರೊಂದಿಗೆ ಬರಲು ಹೇಳಿದ್ದರು. ಆ ಸಮಯದಲ್ಲಿ ನಾನು, ‘ಪ.ಪೂ. ಡಾಕ್ಟರರು ಯಾವಾಗ ನನ್ನನ್ನು ಕರೆಯುತ್ತಾರೆಯೋ, ಆಗಲೇ ನಾನು ಹೋಗುವೆನು’, ಎಂದು ಹೇಳಿದೆನು’’ ಎಂದು ಹೇಳಿದಳು. ಇದಕ್ಕೆ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಅವಳಿಗೆ, ”ಪೂ ರೇಖಾ ಅಕ್ಕನವರು ಸಂತರಾಗಿದ್ದಾರೆ. ಸಂತರು ಹೇಳಿದ್ದನ್ನು ಕೇಳಬೇಕು. ಎಷ್ಟೇ ಮಹತ್ವದ ಸೇವೆ ಇರಲಿ, ನಿನಗೆ ನನ್ನ ಬಗ್ಗೆ ಎಷ್ಟೇ ಭಾವವಿರಲಿ; ಸಂತರು ಹೇಳಿದ್ದನ್ನೇ ಕೇಳಬೇಕು. ಅವರು ಹೇಳಿದ್ದನ್ನೇ ಮಾಡಬೇಕು’’, ಎಂದು ಹೇಳಿದರು.

೨. ಪ.ಪೂ. ಭಕ್ತರಾಜ ಮಹಾರಾಜರ ಆಜ್ಞಾಪಾಲನೆಯನ್ನು ಮಾಡುವ ಪ.ಪೂ. ಡಾ. ಆಠವಲೆಯವರು

ಪ.ಪೂ. ಡಾ. ಆಠವಲೆಯವರ ಮಾರ್ಗದರ್ಶನವನ್ನು ಕೇಳಿ ನನಗೆ ಅವರ ಶಿಷ್ಯಾವಸ್ಥೆಯ ಒಂದು ಪ್ರಸಂಗ ನೆನಪಾಯಿತು. ಪ.ಪೂ. ಗುರುದೇವರು ಆಗ ಅನೇಕ ಊರುಗಳಿಗೆ ಹೋಗಿ ಅಧ್ಯಾತ್ಮದ ಅಭ್ಯಾಸವರ್ಗಗಳನ್ನು ತೆಗೆದುಕೊಳ್ಳುತ್ತಿದ್ದರು. ಒಂದು ಅಭ್ಯಾಸವರ್ಗದ ಹಿಂದಿನ ದಿನ, ಸದ್ಗುರು ಸಂತ ಭಕ್ತರಾಜ ಮಹಾರಾಜರು (ಪ.ಪೂ. ಬಾಬಾ) ಪ.ಪೂ. ಗುರುದೇವರಿಗೆ ದೂರವಾಣಿ ಕರೆ ಮಾಡಿ ಕೂಡಲೇ ತಮ್ಮನ್ನು ಭೇಟಿಯಾಗಬೇಕೆಂದು ಕರೆದರು. ಆದುದರಿಂದ ಪ.ಪೂ. ಗುರುದೇವರು ಅಭ್ಯಾಸವರ್ಗವನ್ನು ರದ್ದು ಪಡಿಸಿದರು ಮತ್ತು ಅವರು ಪ.ಪೂ. ಬಾಬಾರವರ ಬಳಿಗೆ ಹೋದರು. ಆಗ ಪ.ಪೂ. ಬಾಬಾ ರವರು ಪ.ಪೂ. ಗುರುದೇವರಿಗೆ, ”ಇಂದಿನ ನಿನ್ನ ಈ ಕೃತಿಯಿಂದ ಸಾಧಕರಿಗೆ ಬಹಳ ಕಲಿಯಲು ಸಿಗುತ್ತದೆ’’, ಎಂದು ಹೇಳಿದರು.

೩. ಗುರುಗಳ ಆಜ್ಞಾಪಾಲನೆಯು ಸಾಧನೆಯ ದೃಷ್ಟಿಯಿಂದ ಎಲ್ಲಕ್ಕಿಂತ ಮಹತ್ವದ್ದು !

ಸಚ್ಚಿದಾನಂದ ಪರಬ್ರಹ್ಮ ಗುರುದೇವರು, ಗುರುಗಳ ಆಜ್ಞಾಪಾಲನೆಯ ಆದರ್ಶವನ್ನು ಹಾಕಿಕೊಟ್ಟಿದ್ದಾರೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಮಾರ್ಗದರ್ಶನಕ್ಕನುಸಾರ ಸನಾತನದ ಸಾಧಕರು ಸಂತ ಪದವಿಯಲ್ಲಿ ವಿರಾಜಮಾನರಾಗಿದ್ದಾರೆ. ಆದುದರಿಂದ ಅವರ ಆಜ್ಞಾಪಾಲನೆಯು ಸಾಧನೆಯ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಅವರ ಮಾರ್ಗದರ್ಶನದಿಂದ ಗಮನಕ್ಕೆ ಬಂದಿತು.’

– ಶ್ರೀ. ಧೈವತ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೬.೭.೨೦೨೪)

ಹಣ ಇಲ್ಲದಿರುವಾಗ ಅನುಭವಿಸುವ ದುಃಖಕ್ಕಿಂತ ಹಣ ಗಳಿಸಲು ಪ್ರಯತ್ನಿಸುವಾಗ ಜೀವವು ಹೆಚ್ಚು ದುಃಖ ಅನುಭವಿಸಬೇಕಾಗುತ್ತದೆ

ಕಳೆದ ವರ್ಷವಿಡಿ ನನ್ನ ಮನಸ್ಸಿನಲ್ಲಿ ‘ನನ್ನ ಬಳಿ ಬಹಳಷ್ಟು ಹಣ ಇರಬೇಕು, ನಾನು ಬಯಸಿದ ರೀತಿಯಲ್ಲಿ ನನಗೆ ಸುಖ ಪಡಲು ಸಾಧ್ಯವಾಗಬೇಕು’, ಎಂಬ ವಿಚಾರಗಳು ಬರುತ್ತಿದ್ದವು. ಇದರಿಂದ ನನ್ನ ಒಲವು ವ್ಯಾವಹಾರಿಕ ವಿಷಯಗಳಲ್ಲಿ ಹೆಚ್ಚಾಗಿತ್ತು. ಅದಕ್ಕಾಗಿ ನಾನು ಬಹಳಷ್ಟು ಪ್ರಯತ್ನವನ್ನೂ ಮಾಡಿದೆನು. ಈ ಕಾಲಾವಧಿಯು ನನಗಾಗಿ ಬಹಳ ತೊಂದರೆದಾಯಕವಾಗಿತ್ತು; ಆದರೆ ಭಗವಂತನು ನನಗೆ, ‘ಹಣವಿಲ್ಲದಿದ್ದರೆ, ಸುಖಸೌಲಭ್ಯಗಳಿಲ್ಲದಿದ್ದರೆ, ಜೀವಕ್ಕೆ ಎಷ್ಟು ದುಃಖವಾಗುತ್ತದೆಯೋ, ಅದಕ್ಕಿಂತಲೂ ಎಷ್ಟೋ ಪಟ್ಟು ಹೆಚ್ಚು ದುಃಖ ಹಣವನ್ನು ಸಂಪಾದಿಸುವಾಗ ಮತ್ತು ಅದನ್ನು ಸಂಗ್ರಹಿಸುವಾಗ ಆಗುತ್ತದೆ’, ಎಂಬ ಒಂದು ಅಮೂಲ್ಯ ಪಾಠವನ್ನು ಕಲಿಸಿದನು.

– ಶ್ರೀ. ಧೈವತ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೫.೭.೨೦೨೪)