(‘ಬ್ಯಾಲೆಟ್ ಪೇಪರ್’ ಎಂದರೆ ಮತದಾನ ಮಾಡಲು ಉಪಯೋಗಿಸುವ ಕಾಗದದ ಚೀಟಿ)
ಪೇನಸಿಲ್ವೆನಿಯ (ಅಮೆರಿಕ) – ‘ಈವಿಎಂ’ ಯಂತ್ರದ ಬಳಸಿ ಚುನಾವಣೆಯಲ್ಲಿ ವಂಚನೆ ಮಾಡಲಾಗುತ್ತಿರುವುದರಿಂದ ಚುನಾವಣೆಗಳು ‘ಬ್ಯಾಲೆಟ್ ಪೇಪರ್’ ಮೂಲಕ ನಡೆಸಬೇಕು, ಎಂದು ಅಮೇರಿಕಾದ ಉದ್ಯಮಿ ಎಲ್ಯಾನ್ ಮಸ್ಕ ಇವರು ಅಭಿಪ್ರಾಯ ವ್ಯಕ್ತಪಡಿಸಿದರು.
ಮಸ್ಕ್ ಇವರು ‘ಡೊಮಿನಿಯನ್’ ಕಂಪನಿಯ ಮತದಾನಯಂತ್ರದ ಕಾರ್ಯಕ್ಷಮತೆಯ ಕುರಿತು ಪ್ರಶ್ನಿಸಿದ್ದರು. ಅದಕ್ಎ ಅವರು, ಫಿಲಾಡೇಲ್ಫಿಯಾ ಮತ್ತು ಏರಿಝೊನಾ ಅಲ್ಲದೆ ಈ ಮತದಾನ ಯಂತ್ರಗಳು ಬೇರೆ ಎಲ್ಲಿಯೂ ಕೂಡ ಉಪಯೋಗಿಸುವುದಿಲ್ಲ. ಈ ಎರಡು ಸ್ಥಳದಲ್ಲಿ ರಿಪಬ್ಲಿಕನ್ ಪಕ್ಷ ಸೋತಿದೆ. ಇದೊಂದು ವಿಚಿತ್ರ ಕಾಕತಾಳೀಯಾಗಿದೆ. ಕಂಪ್ಯೂಟರ್ ‘ಪ್ರೋಗ್ರಾಮ್ ಹ್ಯಾಕ್ ‘ಮಾಡುವುದು ಸುಲಭವಾಗಿರುತ್ತದೆ, ಆದ್ದರಿಂದ ಅದರ ಮೇಲೆ ವಿಶ್ವಾಸ ಇಡಲು ಸಾಧ್ಯವಿಲ್ಲ ಎಂದು ಹೇಳಿದರು.
ಮತದಾನಯಂತ್ರಗಳು ತಯಾರಿಸುವ ಕಂಪನಿಗಳು ಮಸ್ಕ ಅವರ ಆರೋಪ ತಳ್ಳಿ ಹಾಕಿವೆ !
ಮತದಾನಯಂತ್ರಗಳು ತಯಾರಿಸಿರುವ ‘ಡೊಮಿನಿಯನ್’ ಈ ಕಂಪನಿಯು ಮಸ್ಕ್ ಇವರ ಆರೋಪವನ್ನು ತಳ್ಳಿ ಹಾಕಿದೆ. ಕಂಪನಿಯ ವಕ್ತಾರರು, ‘ಡೊಮಿನಿಯನ್’ ಫಿಲಾಡೇಲ್ಫಿಯಾ ರಾಜ್ಯಗಳಿಗೆ ಸೇವೆ ನೀಡುವುದಿಲ್ಲ, ನಾವು ಹಲವಾರು ಬಾರಿ ಮತದಾನ ಯಂತ್ರಗಳ ಮೂಲಕ ನಡೆಸಿರುವ ಮತದಾನ ಮತ್ತು ‘ಬ್ಯಾಲೆಟ್ ಪೇಪರ್’ ಮೂಲಕ ನಡೆಸಿರುವ ಮತದಾನ, ಇದರ ಎಣಿಕೆ ಒಟ್ಟಿಗೆ ಮಾಡಿ ‘ಎಡಿಟ್’ ಮಾಡಿದ್ದೇವೆ. ಅದರಲ್ಲಿ ಮತದಾನಯಂತ್ರ ಯೋಗ್ಯ ಎಣಿಕೆ ಮಾಡುತ್ತಿರುವುದು ಸಾಬೀತಾಗಿದೆ ಎಂದು ಹೇಳಿದರು.
ಚುನಾವಣೆಗೆ ಕೇವಲ ೧೫ ದಿನಗಳು ಬಾಕಿ !
ಅಮೇರಿಕಾದಲ್ಲಿ ನವಂಬರ್ ೫ ರಂದು ರಾಷ್ಟ್ರಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುತ್ತಿದೆ. ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಮೂರನೆಯ ಬಾರಿಗೆ ಚುನಾವಣೆ ಅಖಾಡಾಕ್ಕೆ ಇಳಿದಿದ್ದಾರೆ ಹಾಗೂ ಡೆಮೊಕ್ರಟಿಕ್ ಪಕ್ಷದ ಅಭ್ಯರ್ಥಿ ಕಮಲ ಹ್ಯಾರಿಸ್ ಇವರು ಅವರ ಎದುರಾಳಿ ಅಭ್ಯರ್ಥಿ ಆಗಿದ್ದಾರೆ. ಈ ಚುನಾವಣೆಯಲ್ಲಿ ಎಲ್ಯಾನ್ ಮಸ್ಕ್ ಇವರು ಬಹಿರಂಗವಾಗಿ ಟ್ರಂಪ್ ಇವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ.
ಸಂಪಾದಕೀಯ ನಿಲುವು
|