Nijjar Case: ಪ್ರಧಾನಿ ಟ್ರುಡೊ ಇವರು ರಾಜಕೀಯ ಸ್ವಾರ್ಥಕ್ಕಾಗಿ ಭಾರತದೊಂದಿಗಿನ ಸಂಬಂಧ ಹಾಳು ಮಾಡಿದರು ! – ಸಂಜಯ ವರ್ಮಾ

ಕೆನಡಾದ ಭಾರತದ ಮಾಜಿ ಹೈಕಮೀಷನರ ಸಂಜಯ ವರ್ಮಾ ಇವರ ಆರೋಪ

ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೋ ಮತ್ತು ಮಾಜಿ  ಹೈಕಮೀಷನರ ಸಂಜಯ ವರ್ಮಾ

ಒಟಾವಾ (ಕೆನಡಾ) – ಕೆನಡಾ ನಿಜ್ಜರ್ ಹತ್ಯೆಯ ಪ್ರಕರಣದಲ್ಲಿ ಇದುವರೆಗೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಇದನ್ನು ಕೆನಡಾ ಪ್ರಧಾನಿ ಸ್ವತಃ ತಮ್ಮ ಬಳಿ ಯಾವುದೇ ದೃಢವಾದ ಪುರಾವೆಗಳಿಲ್ಲ ಎಂದು ಒಪ್ಪಿಕೊಂಡಿದ್ದಾರೆ. ಅದು ಕೇವಲ ಗುಪ್ತಚರರಿಂದ ಪಡೆದ ಮಾಹಿತಿಯಾಗಿತ್ತು. ಇದರ ಆಧಾರದಲ್ಲಿ ನಿಮಗೆ ಸಂಬಂಧವನ್ನು ಕೆಡಿಸಿಕೊಳ್ಳುವುದಿದ್ದರೆ, ಹಾಗೆ ಮಾಡಬಹುದು. ಟ್ರುಡೋ ತಮ್ಮ ರಾಜಕೀಯ ಸ್ವಾರ್ಥಕ್ಕಾಗಿ ಹಾಗೆ ಮಾಡಿದ್ದಾರೆ, ಎಂದು ಕೆನಡಾದ ಭಾರತದ ಮಾಜಿ ಹೈಕಮೀಷನರ ಆಗಿರುವ ಸಂಜಯ ವರ್ಮಾ ಇವರು ಆರೋಪಿಸಿದ್ದಾರೆ. ಭಾರತಕ್ಕೆ ಮರಳುವ ಮೊದಲು ಅವರು ಕೆನಡಾದ ಸುದ್ದಿವಾಹಿನಿ `ಸಿಟಿವಿ’ಗೆ ನೀಡಿರುವ ಸಂದರ್ಶನದಲ್ಲಿ ಅವರು ಈ ಆರೋಪವನ್ನು ಮಾಡಿದ್ದಾರೆ. ಕೆನಡಾದ ಪ್ರಧಾನಿ ಜಸ್ಟಿನ ಟ್ರುಡೋ ಇವರು ಭಾರತದ ವಿರುದ್ಧ ಮತ್ತೊಮ್ಮೆ ಆರೋಪ ಮಾಡಿದ ಬಳಿಕ ಭಾರತವು ಕೆನಡಾದಲ್ಲಿರುವ ರಾಯಭಾರ ಕಚೇರಿಯ ಹೈಕಮೀಷನರ ಸಂಜಯ ವರ್ಮಾ ಸೇರಿದಂತೆ 6 ಅಧಿಕಾರಿಗಳನ್ನು ಭಾರತಕ್ಕೆ ಮರಳಿ ಕರೆಸಿಕೊಂಡಿದೆ.

ಕೆನಡಾದ ಗುಪ್ತಚರ ಸಂಸ್ಥೆಗಳು ಖಲಿಸ್ತಾನಿ ಕಟ್ಟರವಾದಿಗಳು ಮತ್ತು ಭಯೋತ್ಪಾದಕರನ್ನು ಪ್ರೋತ್ಸಾಹಿಸುತ್ತಿದೆ !

ವರ್ಮಾ ಮಾತನ್ನು ಮುಂದುವರಿಸಿ, ಹರದೀಪ ಸಿಂಗ ನಿಜ್ಜರ ಹತ್ಯೆಗೆ ಸಂಬಂಧಿಸಿದ ಎಲ್ಲ ಆರೋಪಗಳು ರಾಜಕೀಯ ಉದ್ದೇಶದಿಂದ ಕೂಡಿದೆ. ಕೆನಡಾ ಸರಕಾರವು ಇಲ್ಲಿಯವರೆಗೆ ಯಾವುದೇ ಸಾಕ್ಷಿಗಳನ್ನು ನೀಡಿಲ್ಲ. ಕೆನಡಾದ ವಿದೇಶಾಂಗ ಸಚಿವೆ (ಮೆಲಾನಿಯಾ ಜೊಲಿ) ಯಾವ ನಿರ್ದಿಷ್ಟ ಪುರಾವೆಗಳ ಬಗ್ಗೆ ಹೇಳುತ್ತಿದ್ದಾರೆಂದು ನನಗೆ ನೋಡುವುದಿದೆ. ಕೆನಡಾದ ಗುಪ್ತಚರ ಸಂಸ್ಥೆ ಖಲಿಸ್ತಾನಿ ಕಟ್ಟರವಾದಿಗಳು ಮತ್ತು ಭಯೋತ್ಪಾದಕರನ್ನು ಪ್ರೋತ್ಸಾಹಿಸುತ್ತಿದೆ ಎಂದು ಹೇಳಿದರು.

ಕೆನಡಾದಲ್ಲಿ ನೆಲೆಸಿರುವ ಖಲಿಸ್ತಾನಿ ಭಯೋತ್ಪಾದಕರು ಕೆನಡಾದ ಪ್ರಜೆಗಳು !

ಮಾಜಿ ಹೈಕಮಿಷನರ್ ವರ್ಮಾ ಮಾತು ಮುಂದುವರಿಸುತ್ತಾ, ಕೆನಡಾದಲ್ಲಿ ವಾಸಿಸುತ್ತಿರುವ ಖಲಿಸ್ತಾನಿ ಭಯೋತ್ಪಾದಕರು ಕೆನಡಾದ ನಾಗರಿಕರೇ ಹೊರತು ಭಾರತೀಯರಲ್ಲ ಎಂದು ಹೇಳಿದ್ದಾರೆ. ಈ ಜನರು ಕೆನಡಾದಲ್ಲಿದ್ದುಕೊಂಡು ಭಾರತದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ಕೆನಡಾ ಸರಕಾರ ಇಂತಹ ಜನರೊಂದಿಗೆ ಕೆಲಸ ಮಾಡಬಾರದು ಎನ್ನುವುದು ನಮ್ಮ ಇಚ್ಛೆಯಾಗಿದೆ. ಅವರು ಭಾರತದ ಸಾರ್ವಭೌಮತ್ವ ಮತ್ತು ಅಖಂಡತೆಗೆ ಸವಾಲು ಹಾಕುತ್ತಿದ್ದಾರೆ. ಕೆನಡಾದ ನಾಯಕರಿಗೆ, `ನಮ್ಮ ಶತ್ರು ಅಲ್ಲಿ ಏನು ಮಾಡುತ್ತಿದ್ದಾನೆ, ಎನ್ನುವ ಕಲ್ಪನೆ ನಮಗಿಲ್ಲ’ ಎಂದು ಅನಿಸುತ್ತಿರಬಹುದು ಇದು ಖೇದಕರವಾಗಿದೆ. ಬಹುಶಃ ಅವರಿಗೆ ಅಂತರರಾಷ್ಟ್ರೀಯ ಸಂಬಂಧವೇನು ಎನ್ನುವುದು ತಿಳಿದಿಲ್ಲ ಎಂದು ಅನಿಸುತ್ತದೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಇವರು ರಾಜಕೀಯ ಸ್ವಾರ್ಥದಿಂದ ಆರೋಪ ಮಾಡಿದ್ದರಿಂದ ಭಾರತ ಎಷ್ಟೇ ತಪರಾಕಿ ನೀಡಿದರೂ, ಪ್ರಧಾನಿ ಟ್ರುಡೊ ಅವರ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಮತ್ತು ಅವರು ಆರೋಪಗಳನ್ನು ಮಾಡಿ ರಾಜಕೀಯ ಬೇಳೆ ಬೇಯಿಸುವರು ! ಕೆನಡಾ ಜನತೆಯೇ ಟ್ರುಡೋರವರನ್ನು ಈ ವಿಷಯದಲ್ಲಿ ಪ್ರಶ್ನಿಸುವುದು ಆವಶ್ಯಕವಿದೆ !