ಮುತ್ಯಾಲಮ್ಮ ದೇವಸ್ಥಾನದಲ್ಲಿ ಮುಸಲ್ಮಾನರು ಮೂರ್ತಿ ಧ್ವಂಸಗೊಳಿಸಿದ ಪ್ರಕರಣ
ಸಿಕಂದರಾಬಾದ (ತೆಲಂಗಾಣ) – ಇಲ್ಲಿ ಅಕ್ಟೋಬರ್ 14 ರಂದು ಮುತ್ಯಾಲಮ್ಮ ದೇವಸ್ಥಾನದ ಮೂರ್ತಿಯನ್ನು ಸಲ್ಮಾನ ಸಲೀಂನು ಧ್ವಂಸಗೊಳಿಸಿದ್ದನು. ಅವನನ್ನು ಪೊಲೀಸರು ಬಂಧಿಸಿದ್ದರು; ಆದರೆ ಪೊಲೀಸರು ಈ ಘಟನೆಯ ಹಿಂದಿರುವ ಇತರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುತ್ತಿಲ್ಲವೆಂದು ಹಿಂದೂಗಳು ಪ್ರತಿಭಟನೆ ಮಾಡುತ್ತಿದ್ದರು. ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ಪೊಲೀಸರು ಲಾಠಿಚಾರ್ಜ ಮಾಡಿದ್ದಾರೆ. ಭಾಜಪ ಪ್ರಖರ ಹಿಂದುತ್ವನಿಷ್ಠ ಶಾಸಕ ಟಿ. ರಾಜಾ ಸಿಂಗ್ ಅವರು ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ಹಿಂದೂಗಳ ಮೇಲೆ ಲಾಠಿಚಾರ್ಜ ಮಾಡಿದ ಪೊಲೀಸರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
1. ದೇವಸ್ಥಾನಗಳ ಮೇಲಿನ ದಾಳಿಯನ್ನು ಖಂಡಿಸಿ, ವಿಶ್ವ ಹಿಂದೂ ಪರಿಷತ್ತು ತೆಲಂಗಾಣ ಬಂದ್‌ಗೆ ಕರೆ ನೀಡಿತ್ತು. ವಿಶ್ವ ಹಿಂದೂ ಪರಿಷತ್ತಿನ ರಾಷ್ಟ್ರೀಯ ವಕ್ತಾರ ವಿನೋದ ಬನ್ಸಲ ಇವರು ಮಾತನಾಡಿ, ದೇವಸ್ಥಾನ ಮೇಲಿನ ಜಿಹಾದಿ ದಾಳಿ ಮತ್ತು ಈಗ ಹಿಂದೂಗಳ ಮೇಲೆ ಪೊಲೀಸರ ಲಾಠಿ ಚಾರ್ಜ್ ಆಘಾತಕಾರಿ, ಖಂಡನೀಯ ಮತ್ತು ಅಮಾನವೀಯತೆಯ ಎಲ್ಲಾ ಮಿತಿಗಳನ್ನು ಮೀರಿದ್ದಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯವಾಗಿದೆ.
2. ಕೇಂದ್ರ ಸಚಿವ ಜಿ. ಕಿಶನ ರೆಡ್ಡಿಯವರು ಮಾತನಾಡಿ, ಯಾರು ಮೂರ್ತಿಗಳನ್ನು ಧ್ವಂಸ ಮಾಡಿದ್ದಾರೆಯೋ, ಆ ವ್ಯಕ್ತಿ ಅಲ್ಲಿ ಕಳ್ಳತನ ಮಾಡಲು ಬಂದಿರದೇ ಹಿಂದೂ ಸಮಾಜವನ್ನು ಅವಮಾನಿಸಲು ಬಂದಿದ್ದನು. ಭಾಗ್ಯನಗರದಲ್ಲಿ ಉದ್ವಿಗ್ನತೆಯನ್ನು ಸೃಷ್ಟಿಸಲು ಮತ್ತು ಗಲಭೆಯನ್ನು ನಡೆಸಲು ಕೆಲವು ಜನರು ಇದನ್ನು ಉದ್ದೇಶಪೂರ್ವಕವಾಗಿ ಮಾಡುತ್ತಿದ್ದಾರೆ. ಇಂದು ಸರಕಾರ ಕ್ರಮ ಕೈಕೊಳ್ಳುವಂತೆ ಕೋರುವ ಪ್ರತಿಭಟನಾಕಾರರಿಗೆ ಥಳಿಸುತ್ತಿದ್ದಾರೆ ಮತ್ತು ಇನ್ನೊಂದೆಡೆ ಶ್ರೀ ಮುತ್ಯಾಲಮ್ಮಾ ದೇವಸ್ಥಾನದಲ್ಲಿ ನುಗ್ಗಿ ಮುಖ್ಯ ಮೂರ್ತಿಯ ವಿಡಂಬನೆ ಮಾಡಿರುವ ಸಲ್ಮಾನ ಸಲೀಂಗೆ ಕಾಂಗ್ರೆಸ ಸರಕಾರ ಜೈಲಿನಲ್ಲಿ ಬಿರ್ಯಾನಿ ತಿನ್ನಿಸುತ್ತಿದೆ. ತೇಲಂಗಾಣದ ಕಾಂಗ್ರೆಸ್ಸಿನ ರೇವಂತ ರೆಡ್ಡಿ ಸರಕಾರವು ಲಾಠಿಚಾರ್ಜ ಮಾಡಿರುವುದು ಯಾವ ನ್ಯಾಯ ? ಅವರು ಈಗ ಇತರೆ ಆರೋಪಿಗಳನ್ನು ಬಂಧಿಸಬೇಕಾಗಿತ್ತು ಎಂದು ಹೇಳಿದರು.
ಸಂಪಾದಕೀಯ ನಿಲುವುಕಾಂಗ್ರೆಸ್ನ ರಾಜ್ಯದಲ್ಲಿ ಹಿಂದೂಗಳ ಮೇಲೆ ಅನ್ಯಾಯ ಮತ್ತು ಮುಸಲ್ಮಾನರಿಗೆ `ನೆಮ್ಮದಿ’(ಕ್ಷೇಮ?) ಇಂತಹುದೇ ಕೃತ್ಯ ನಡೆಯುತ್ತದೆಯೆನ್ನುವುದು ಮತ್ತೊಮ್ಮೆ ಕಂಡು ಬಂದಿತು ! |