(ಮಕಬರಾ ಎಂದರೆ ಮುಸಲ್ಮಾನ ವ್ಯಕ್ತಿಯನ್ನು ಹುಳಿದ ನಂತರ ಆ ಸ್ಥಳದಲ್ಲಿ ಕಟ್ಟಲಾದ ಕಟ್ಟಡ)
ಹರಿದ್ವಾರ (ಉತ್ತರಾಖಂಡ) – ಇಲ್ಲಿಯ ಒಂದು ಅಕ್ರಮ ಮಕಬರಾವನ್ನು ಆಡಳಿತವು ಧ್ವಂಸ ಮಾಡಿದೆ. ಜಲ ಸಂಪನ್ಮೂಲ ಇಲಾಖೆಯ ಜಾಗದಲ್ಲಿ ಅತಿಕ್ರಮಣ ನಡೆಸಿ ಇದನ್ನು ಕಟ್ಟಿದ್ದರು. ಆಡಳಿತವು ಸಂಬಂಧಿತರಿಗೆ ನೋಟಿಸ್ ವಿಧಿಸಿದರೂ ಅತಿಕ್ರಮಣ ತೆರವುಗೊಳಿಸಿರಲಿಲ್ಲ. ಆದ್ದರಿಂದ ಈ ಕ್ರಮ ಕೈಗೊಳ್ಳಲಾಗಿದೆ. ಆ ಸಮಯದಲ್ಲಿ ಅಲ್ಲಿ ದೊಡ್ಡ ಪ್ರಮಾಣದಲ್ಲಿ ಪೊಲೀಸ್ ಬಂದೋಬಸ್ತು ಇರಿಸಲಾಗಿತ್ತು. ಈ ಮಕಬರಾದ ಬಗ್ಗೆ ಗ್ರಾಮಸ್ಥರು ದೂರು ಕೂಡ ನೀಡಿದ್ದರು.
The Haridwar district administration demolished an illegal ‘Mazar’ built on Rehabilitation Department land in Mirpur village, Bahadarabad area🚜👷
Was the administration sleeping when the illegal Mazar was constructed ?#BulldozerAction #Uttarakhandpic.twitter.com/tkb78otn8b
— Sanatan Prabhat (@SanatanPrabhat) October 19, 2024
ಉತ್ತರಾಖಂಡ ಸರಕಾರವು ಸುಮಾರು ಒಂದು ಸಾವಿರ ಅಕ್ರಮ ಗೋರಿಗಳ ಪಟ್ಟಿ ನಿರ್ಮಿಸಿ ಇದರ ಕುರಿತು ಒಂದರ ನಂತರ ಒಂದು ಕ್ರಮ ಕೈಗೊಳ್ಳಲಾಗುತ್ತಿದೆ. ಉತ್ತರಾಖಂಡದ ಮುಖ್ಯಮಂತ್ರಿ ಪುಷ್ಕರ ಸಿಂಹ ಧಾಮಿ ಇವರು ಈ ಹಿಂದೆಯೇ ಅವರ ರಾಜ್ಯದಲ್ಲಿ ‘ಲ್ಯಾಂಡ್ ಜಿಹಾದ್’ ನಡೆಯುವುದಿಲ್ಲ ಎಂದು ಹೇಳಿದ್ದರು.
ಸಂಪಾದಕೀಯ ನಿಲುವುದೇಶದಲ್ಲಿ ಅಕ್ರಮವಾಗಿ ಕಟ್ಟಡ ಕಟ್ಟುತ್ತಿರುವಾಗ ಆಡಳಿತ ನಿದ್ರಿಸಿರುತ್ತದೆಯೇ ? ಈಗ ಕ್ರಮ ಕೈಗೊಂಡ ನಂತರ ಅಲ್ಲಿ ಮತ್ತೆ ಅಕ್ರಮ ಕಟ್ಟಡ ಆಗುವುದಿಲ್ಲ, ಸರಕಾರ ಇದರ ಕಾಳಜಿ ವಹಿಸುವುದೇ ? |