|
ಓಟಾವಾ (ಕೆನಡಾ)/ನವದೆಹಲಿ – ಕೆನಡಾದಲ್ಲಿನ ಖಲಿಸ್ತಾನಿ ಭಯೋತ್ಪಾದಕ ಹರದೀಪ ಸಿಂಹ ನಿಜ್ಜರ್ ಇವನ ಹತ್ಯೆಯ ಪ್ರಕರಣದಲ್ಲಿ ಕೆನಡಾದಲ್ಲಿನ ಭಾರತೀಯ ಉಚ್ಚಾಯುಕ್ತ ಸಂಜಯ ಕುಮಾರ್ ಮತ್ತು ಇತರ ಕೆಲವು ಮುತ್ಸದ್ದಿಗಳನ್ನು ಶಂಕಿತರೆಂದು ಹೇಳಿದ್ದರಿಂದ ಭಾರತವು ಸಂಜಯ ಕುಮಾರ್ ವರ್ಮಾ ಇವರನ್ನು ಭಾರತಕ್ಕೆ ವಾಪಸ್ ಕರೆಸಿಕೊಂಡಿದೆ. ಹಾಗೂ ಕೆನಡಾದ ಭಾರತದಲ್ಲಿನ ರಾಯಭಾರಿ ಕಚೇರಿಯಲ್ಲಿನ ೬ ಅಧಿಕಾರಿಗಳಿಗೆ ಭಾರತ ತೊರೆಯುವಂತೆ ಆದೇಶ ನೀಡಿದೆ. ಭಾರತದ ಈ ಕೃತಿಯ ನಂತರ ಕೆನಡಾದಿಂದ ಕೂಡ ಅಲ್ಲಿಯ ಭಾರತೀಯ ರಾಯಭಾರಿ ಕಚೇರಿಯಲ್ಲಿನ ೭ ಅಧಿಕಾರಿಗಳಿಗೆ ಕೆನಡಾ ತೊರೆಯುವಂತೆ ಆದೇಶ ನೀಡಿದೆ. ಭಾರತದಿಂದ ಕೆನಡಾದ ಅಧಿಕಾರಿಗಳಿಗೆ ಅಕ್ಟೋಬರ್ ೧೯ ರ ವರೆಗೆ ಕಾಲಾವಕಾಶ ನೀಡಿದೆ. ಕೆನಡಾದಿಂದ ಹೊರಿಸಲಾಗಿರುವ ಆರೋಪವನ್ನು ಭಾರತ ದೃಢವಾಗಿ ತಳ್ಳಿ ಹಾಕುತ್ತಾ ಭಾರತವು, ಇದರ ಹಿಂದೆ ಟ್ರುಡೋ ಸರಕಾರದ ರಾಜಕೀಯ ನೀತಿ ಆಗಿದೆ, ಅದು ಖಲಿಸ್ತಾನಿಗಳ ಮತಗಳಿಂದ ಕೂಡಿದೆ ಎಂದು ಹೇಳಿದೆ. ಕೆನಡಾ ಬಹಳಷ್ಟು ಸಮಯದಿಂದ ಇದೇ ಮಾಡುತ್ತಾ ಬಂದಿದೆ. ಅದರ ಸಚಿವ ಸಂಪುಟದಲ್ಲಿ ಭಾರತದ ವಿರುದ್ಧ ಚಟುವಟಿಕೆ ನಡೆಸುವ ಭಯೋತ್ಪಾನೆ ಮತ್ತು ಪ್ರತ್ತೇಕವಾದಿಗಳ ನೀತಿಗಳಿಗೆ ಸಂಬಂಧಪಟ್ಟ ವ್ಯಕ್ತಿಗಳ ಸಮಾವೇಶವಿದೆ ಎಂದು ಹೇಳಿದೆ.
Canada’s Justin Trudeau Government’s accusations inspired by Khalistani vote bank. – India responds staunchly to #Canada‘s allegations that India’s High Commissioner in Canada was behind the killing of #Khalistani terrorist Nijjar.
👉 This absurdity by Canada to secure… pic.twitter.com/dyvrJdTwyl
— Sanatan Prabhat (@SanatanPrabhat) October 15, 2024
ಪ್ರಧಾನಮಂತ್ರಿ ಟ್ರುಡೋ ಇವರು ಸಪ್ಟೆಂಬರ್ ೨೦೨೩ ರಲ್ಲಿ ಕೆಲವು ಆರೋಪ ಮಾಡಿದ್ದರು, ಆದರೆ, ಭಾರತ ಸರಕಾರವು ಕೆನಡಾದ ಸರಕಾರದ ಬಳಿ ಅನೇಕ ಬಾರಿ ಕೇಳಿದರು ಒಂದು ಸಾಕ್ಷಿ ಕೂಡ ನೀಡಲಿಲ್ಲ. ಈ ಹೊಸ ಆರೋಪ ಕೂಡ ಈ ರೀತಿಯಲ್ಲೇ ಮಾಡಲಾಗಿದೆ.
ವಿದೇಶಾಂಗ ಸಚಿವಾಲಯವು ಮನವಿಯಲ್ಲಿ, ಟ್ರುಡೋ ಸರಕಾರಕ್ಕೆ ಮಾಹಿತಿ ಇದ್ದರೂ ಕೂಡ ಅದು ಕೆನಡಾದಲ್ಲಿನ ಭಾರತೀಯ ಮುತ್ಸದ್ದಿ ಮತ್ತು ಜನಾಂಗದ ನಾಯಕರನ್ನು ಬೆದರಿಸುವ ಹಿಂಸಕ ಕಟ್ಟರವಾದಿ ಮತ್ತು ಭಯೋತ್ಪಾದಕರಿಗೆ ಆಶ್ರಯ ನೀಡಿದೆ. ಇದರಲ್ಲಿ ಭಾರತೀಯ ನಾಯಕರಿಗೆ ನೀಡಿರುವ ಜೀವ ಬೆದರಿಕೆಯ ಸಮಾವೇಶ ಕೂಡ ಇದೆ. ಅಕ್ರಮವಾಗಿ ಕೆನಡಾದಲ್ಲಿ ಪ್ರವೇಶಿಸಿರುವ ಕೆಲವು ಜನರಿಗೆ ಪೌರತ್ವ ಕೂಡ ಬೇಗನೆ ನೀಡಲಾಗಿದೆ. ಕೆನಡಾದಲ್ಲಿನ ಭಯೋತ್ಪಾದಕರು ಮತ್ತು ಸಂಘಟಿತ ಅಪರಾಧ ನಡೆಸುವವರ ಪ್ರತ್ಯರ್ಪಣಕ್ಕಾಗಿ ಭಾರತ ಸರಕಾರದ ಅನೇಕ ಬಾರಿ ಮನವಿಗಳನ್ನೂ ಕೂಡ ತಳ್ಳಿ ಹಾಕಿದೆ.
ಭಾರತದಲ್ಲಿನ ಕೆನಡಾದ ರಾಯಭಾರಿಗಳಿಗೆ ಭಾರತದಿಂದ ತಪರಾಕಿ !
ಕೆನಡಾದಿಂದ ಭಾರತಕ್ಕೆ ಕಳುಹಿಸಿರುವ ಪತ್ರದಲ್ಲಿ ಹರದೀಪ ಸಿಂಹ ನಿಜ್ಜರ್ ಇವನ ಹೆಸರು ಉಲ್ಲೇಖಿಸದೆ ‘ಕೆನಡಾದ ನಾಗರಿಕ’ ಎಂದು ಉಲ್ಲೇಖಿಸಲಾಗಿದೆ. ಕೆನಡಾದ ಪತ್ರ ದೊರೆಯುತ್ತಲೇ ಭಾರತವು ಅಕ್ಟೋಬರ್ ೧೪ ರ ಸಂಜೆ ಭಾರತದಲ್ಲಿನ ಕೆನಡಾದ ರಾಯಭಾರಿಗಳಿಗೆ ವಿದೇಶಾಂಗ ಸಚಿವಾಲಯದ ಕಾರ್ಯಾಲಯಕ್ಕೆ ಕರೆಸಿದರು, ಕೆನಡಾದಿಂದ ಹೊರಿಸಲಾದ ಆರೋಪ ನಿರಾಧಾರವಾಗಿದೆ’, ಎಂದು ಛೀಮಾರಿ ಹಾಕಿದರು. ಅದರ ನಂತರ ಭಾರತವು ಕೆನಡಾದಲ್ಲಿನ ಉಚ್ಚಾಯುಕ್ತ ಮತ್ತು ಇತರ ಅಧಿಕಾರಿಗಳನ್ನು ವಾಪಸ್ ಕರೆಸಿಕೊಳ್ಳುತ್ತಿರುವುದರ ಮಾಹಿತಿ ನೀಡಿದರು.
ನಾವು ಸಾಕ್ಷಿಗಳು ನೀಡಿದ್ದೆವೆ (ಅಂತೆ) ! – ಕೆನಡಾ
ಭಾರತದಲ್ಲಿನ ಕೆನಡಾದ ಉಪ ಉಚ್ಚಾಯುಕ್ತ ಟುವರ್ಡ್ಸ್ ವೀಲರ್ ಇವರು ವಿದೇಶಾಂಗ ಸಚಿವಾಲಯದಿಂದ ಹೊರಗೆ ಬಂದ ನಂತರ, ಭಾರತವು ಅನೇಕ ದಿನಗಳಿಂದ ಏನು ಬೇಡಿಕೆ ಸಲ್ಲಿಸಿತ್ತು, ಅದನ್ನು ಕೆನಡಾ ಸರಕಾರ ಪೂರ್ಣಗೊಳಿಸಿದೆ. ಕೆನಡಾದಲ್ಲಿ ಕೆನಡಾದ ನಾಗರೀಕರ ಹತ್ಯೆಗೆ ಸಂಬಂಧಿತ ಭಾರತೀಯ ಏಜೆಂಟ್‌ಗಳೊಂದಿಗೆ ಸಂಬಂಧ ಹೊಂದಿರುವ ದೃಢವಾದ ಸಾಕ್ಷಿಗಳು ನಾವು ಭಾರತಕ್ಕೆ ನೀಡಿದ್ದೇವೆ. ಈಗ ಈ ಆರೋಪಗಳ ಮೇಲೆ ಭಾರತ ಏನು ಕ್ರಮ ಕೈಗೊಳ್ಳುತ್ತದೆ, ಇದು ನೋಡುವುದಿದೆ. ಇದು ಎರಡು ದೇಶದ ಹಿತದಲ್ಲಿದೆ. ಕೆನಡಾ ಸಹಕಾರ ನೀಡಲು ಸಿದ್ಧವಿದೆ ಎಂದು ಹೇಳಿದರು.
ಕೆನಡಾದ ಮೇಲೆ ನಮಗೆ ವಿಶ್ವಾಸವಿಲ್ಲ ! – ಭಾರತ
ಈ ಸಂದರ್ಭದಲ್ಲಿ ಭಾರತದ ವಿದೇಶಾಂಗ ಸಚಿವಾಲಯವು, ಕೆನಡಾದಲ್ಲಿನ ಭಾರತದ ಉಚ್ಚಾಯುಕ್ತ ವರ್ಮ ಇವರಿಗೆ ಸುರಕ್ಷಣೆ ನೀಡುವುದಕ್ಕಾಗಿ ಕೆನಡಾದ ಸರಕಾರದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದು ಹೇಳಿದೆ.
ಭಾರತೀಯ ಏಜೆಂಟ್‌ಗಳಿಗೆ ಬಿಶ್ನೋಯಿ ತಂಡದಿಂದ ಸಹಾಯ ! – ಕೆನಡಾದ ಪೊಲೀಸರು
ಕೆನಡಾದ ಪೊಲೀಸರು ಅಕ್ಟೋಬರ್ ೧೪ ರಂದು ಪತ್ರಕರ್ತರ ಸಭೆ ಕೂಡ ನಡೆಸಿದರು. ಇದರಲ್ಲಿ ಪೊಲೀಸ ಅಧಿಕಾರಿ ಮೈಕ್ ದುಹೆಮೇ ಇವರು, ಕೆನಡಾದಲ್ಲಿನ ಭಾರತೀಯ ಮುತ್ಸದಿ ಮತ್ತು ಅಧಿಕಾರಿಗಳು ಅವರ ಹುದ್ದೆಗಳ ದುರ್ಬಳಕೆ ಮಾಡಿಕೊಂಡು ಭಾರತ ಸರಕಾರಕ್ಕಾಗಿ ರಹಸ್ಯ ಮಾಹಿತಿ ಸಂಗ್ರಹಿಸಿದರು. ಅದಕ್ಕಾಗಿ ಭಾರತೀಯ ಅಧಿಕಾರಿಗಳು ಏಜೆಂಟ್‌ಗಳನ್ನು ಉಪಯೋಗಿಸಿದರು. ಇದರಲ್ಲಿ ಕೆಲವು ಏಜೆಂಟ್‌ಗಳಿಗೆ ಬೆದರಿಸಲಾಗಿತ್ತು ಮತ್ತು ಭಾರತ ಸರಕಾರದ ಜೊತೆಗೆ ಕೆಲಸ ಮಾಡುವುದಕ್ಕಾಗಿ ಅವರ ಮೇಲೆ ಒತ್ತಡ ಕೂಡ ಹೇರಲಾಗಿತ್ತು. ಭಾರತವು ಸಂಗ್ರಹಿಸಿರುವ ಮಾಹಿತಿಯ ಉಪಯೋಗ ದಕ್ಷಿಣ ಏಷ್ಯಾದ ಜನರನ್ನು ಗುರಿ ಮಾಡುವುದಕ್ಕಾಗಿ ಮಾಡಲಾಗುತ್ತಿದೆ. ಇದರ ಸಾಕ್ಷಿಗಳು ನಾವು ಭಾರತ ಸರಕಾರದ ಅಧಿಕಾರಿಗಳಿಗೆ ನೀಡಿದ್ದೆವು ಮತ್ತು ಅವರಿಗೆ ಹಿಂಸಾಚಾರ ನಿಲ್ಲಿಸಿ ಸಹಕಾರ ನೀಡಲು ಕರೆ ನೀಡಿದ್ದೆವು ಎಂದು ಹೇಳಿದ್ದರು.
ಸಹಾಯಕ ಅಧಿಕಾರಿ ಬ್ರಿಜಿಟ್ ಗೌವಿನ್ ಇವರು, ನಮ್ಮ ತನಿಖೆಯಲ್ಲಿ ಕಂಡು ಬಂದಿರುವುದು ಏನೆಂದರೆ, ಈ ಏಜೆಂಟ್ ಸಂಘಟಿತ ಅಪರಾಧಿ ಗ್ಯಾಂಗ್‌ಗಳನ್ನು ಉಪಯೋಗಿಸುತ್ತಾರೆ. ಈ ಗುಂಪಿನಲ್ಲಿ ವಿಶೇಷವಾಗಿ ಬಿಶ್ನೋಯಿ ತಂಡದ ಸಮಾವೇಶವಿದೆ. ನಮಗೆ ವಿಶ್ವಾಸವಿದೆ ಏನೆಂದರೆ, ಈ ಗುಂಪು ಭಾರತ ಸರಕಾರದ ಏಜೆಂಟ್‌ಗಳ ಜೊತೆಗೆ ಸಂಬಂಧ ಹೊಂದಿದೆ ಎಂದು ಹೇಳಿದರು.
ಈಗ ಏನು ನಡೆಯುತ್ತಿದೆಯೋ, ಅದನ್ನು ನಾವು ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ ! – ಪ್ರಧಾನಿ ಟ್ರುಡೊ
ಒಟಾವಾದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಭಾರತದ ವಿರುದ್ಧ ಆರೋಪಿಸುವಾಗ, ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತೀಯ ಅಧಿಕಾರಿಗಳು ವೈಯಕ್ತಿಕವಾಗಿ ಭಾಗಿಯಾಗಿದ್ದಾರೆ, ಅದು ನಮಗೆ ತಿಳಿದಿದೆ. ನಾವು ಆಗಾಗ ಭಾರತ ಸರಕಾರಕ್ಕೆ ಈ ಮಾಹಿತಿಯನ್ನು ನೀಡಿದ್ದೇವೆ. ಇದರ ಸಾಕ್ಷಿಗಳನ್ನು ಭಾರತ ಸರಕಾರಕ್ಕೆ ನೀಡಿದ್ದೇವೆ. ಈ ಸಾಕ್ಷಿಗಳನ್ನು ನಾವು ಕಳೆದ ವಾರ ಭಾರತ ಸರಕಾರದ ಬಳಿ ನೀಡಿದ್ದೆವು. ಹಾಗೆಯೇ ನಾವು `ಈ ಪ್ರಕರಣದ ತನಿಖೆಗೆ ಸಹಕರಿಸುವಂತೆ’ ಅವರಿಗೆ ವಿನಂತಿಸಿದ್ದೆವು; ಆದರೆ ಭಾರತವು ನಮಗೆ ಯಾವುದೇ ಸಹಕಾರ ನೀಡಲಿಲ್ಲ. ಅಷ್ಟೇ ಅಲ್ಲ, ನಾನು ಸ್ವತಃ ಈ ಪ್ರಕರಣದ ಕುರಿತು ನೇರವಾಗಿ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಚರ್ಚಿಸಿದ್ದೇನೆ. ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಭಾರತವು ಪ್ರತಿ ಬಾರಿಯೂ ತಿರಸ್ಕರಿಸಿತು. ಬದಲಾಗಿ ಭಾರತ ನನ್ನ ಮೇಲೆ ವೈಯಕ್ತಿಕ ಆರೋಪ ಮಾಡಿದೆ, ಎಂದೂ ಟ್ರುಡೋ ಆರೋಪಿಸಿದ್ದಾರೆ.
ಅವರು ಮಾತನಾಡುತ್ತಾ, ಉಭಯ ದೇಶಗಳ ನಡುವಿನ ಸಂಬಂಧಗಳು ಮಹತ್ವದ್ದಾಗಿದೆ. ಎನ್ನುವ ಅರಿವು ನಮಗಿದೆ. ಎರಡೂ ದೇಶಗಳ ಸಂಬಂಧ ಕದಡಬೇಕು ಎನ್ನುವ ಉದ್ದೇಶದಿಂದ ನಾವು ಆರೋಪಿಸುತ್ತಿಲ್ಲ; ಆದರೆ ಸಧ್ಯ ಏನು ನಡೆದಿದೆಯೋ, ಅದನ್ನು ನಾವು ಬರಿಗಣ್ಣಿನಿಂದ ನೋಡಲಾಗುವುದಿಲ್ಲ. ನಾವು ಭಾರತದ ಸಾರ್ವಭೌಮತ್ವದ ಮತ್ತು ಅಖಂಡತೆಯನ್ನು ಗೌರವಿಸುತ್ತೇವೆ. ಹಾಗೆಯೇ ಭಾರತವೂ ಕೆನಡಾದ ಸಾರ್ವಭೌಮತ್ವವನ್ನು ಮತ್ತು ಅಖಂಡತೆಯನ್ನು ಗೌರವಿಸಬೇಕು ಎಂದು ನಾವು ಅಪೇಕ್ಷಿಸುತ್ತೇವೆ. ಒಂದು ದೇಶದ ಪ್ರಧಾನ ಮಂತ್ರಿಯಾಗಿ, ದೇಶದ ಅಸುರಕ್ಷಿತ ವರ್ಗಗಳನ್ನು ಬೆಂಬಲಿಸುವುದು ನನ್ನ ಕರ್ತವ್ಯವಾಗಿದೆ ಎಂದು ಹೇಳಿದರು.
ನಿಜ್ಜರ್ ಹತ್ಯೆ ಪ್ರಕರಣ
1. ಜೂನ್ 18, 2023 ರಂದು ಕೆನಡಾದ ಸರ್ರೆಯ ಗುರುದ್ವಾರದ ಬಳಿ ಖಲಿಸ್ತಾನಿ ಭಯೋತ್ಪಾದಕ ಹರ್ದೀಪ್ ಸಿಂಗ್ ನಿಜ್ಜರ್ ಇವನ ಹತ್ಯೆ ಮಾಡಲಾಗಿತ್ತು.
2. ಸೆಪ್ಟೆಂಬರ್ 18, 2023 ರಂದು, ಕೆನಡಾದ ಪ್ರಧಾನ ಮಂತ್ರಿ ಟ್ರುಡೊ ಇವರು ನಿಜ್ಜರ್ ಹತ್ಯೆಯಲ್ಲಿ ಭಾರತ ಸರಕಾರದ ಕೈವಾಡವಿದೆಯೆಂದು ಆರೋಪಿಸಿತ್ತು, ಅದನ್ನು ಭಾರತವು ತಿರಸ್ಕರಿಸಿತ್ತು.
3. ಇದಾದ ನಂತರ ಈ ವರ್ಷದ ಮೇ 3 ರಂದು ನಿಜ್ಜರ ಹತ್ಯೆಯ 3 ಆರೋಪಿಗಳನ್ನು ಬಂಧಿಸಲಾಗಿತ್ತು. ಮೂವರು ಆರೋಪಿಗಳೂ ಭಾರತೀಯರಾಗಿದ್ದಾರೆ. ಕೆನಡಾ ಪೊಲೀಸರು, ಹಲವು ತಿಂಗಳುಗಳಿಂದ ಅವರ ಮೇಲೆ ನಿಗಾವಹಿಸಲಾಗಿತ್ತು ಎಂದು ತಿಳಿಸಿದ್ದಾರೆ. ನಿಜ್ಜರನನ್ನು ಹತ್ಯೆ ಮಾಡಲು ಭಾರತವು ಅವರ ಮೇಲೆ ಒಪ್ಪಿಸಿತ್ತು ಎಂದು ಅವರ ಅಭಿಪ್ರಾಯವಾಗಿದೆ. ಆಗ ಭಾರತವು ಈ ಪ್ರಕರಣದ ಬಗ್ಗೆ ಇದು ಕೆನಡಾದ ಆಂತರಿಕ ಪ್ರಶ್ನೆಯಾಗಿದೆಯೆಂದು ಹೇಳಿತ್ತು.
ಟ್ರೂಡೊಗೆ ಈ ಪ್ರಕರಣ ಏಕೆ ಮಹತ್ವದ್ದಾಗಿದೆ ?
ಕೆನಡಾದಲ್ಲಿ ಅಕ್ಟೋಬರ್ 2025 ರಲ್ಲಿ ಸಂಸತ್ತಿನ ಚುನಾವಣೆಗಳು ನಡೆಯಲಿವೆ. ಖಲಿಸ್ತಾನ್ ಬೆಂಬಲಿಗರನ್ನು ಕೆನಡಾದ ಪ್ರಧಾನ ಮಂತ್ರಿ ಜಸ್ಟಿನ್ ಟ್ರುಡೊ ಅವರ ಪಕ್ಷದ ದೊಡ್ಡ ವೋಟ ಬ್ಯಾಂಕ ಎಂದು ಪರಿಗಣಿಸಲಾಗಿದೆ. ಕಳೆದ ತಿಂಗಳು ಖಲಿಸ್ತಾನ್ ಬೆಂಬಲಿಗ ಜಗಮೀತ ಸಿಂಗ್ ಅವರ ಎನ್.ಡಿ.ಪಿ. ಪಕ್ಷವು ಟ್ರುಡೊ ಸರಕಾರಕ್ಕೆ ನೀಡಿದ್ದ ತನ್ನ ಬೆಂಬಲವನ್ನು ಹಿಂತೆಗೆದುಕೊಂಡಿತು. ಆಗ ಟ್ರುಡೊ ಅಲ್ಪಮತಕ್ಕೆ ಇಳಿಯಿತು; ಆದರೆ ಅಕ್ಟೋಬರ್ 1 ರಂದು ನಡೆದ ಬಹುಮತ ಪರೀಕ್ಷೆಯಲ್ಲಿ ಟ್ರುಡೊ ಅವರ ಪಕ್ಷಕ್ಕೆ ಇತರ ಪಕ್ಷದ ಬೆಂಬಲ ಸಿಕ್ಕಿತು. ಇದರಿಂದಾಗಿ ಅವರ ಸರಕಾರ ಉಳಿಯಿತು.
2021 ರ ಜನಗಣತಿಯ ಪ್ರಕಾರ, ಕೆನಡಾದ ಒಟ್ಟು ಜನಸಂಖ್ಯೆ 3 ಕೋಟಿ 89 ಲಕ್ಷ ಇದೆ. ಇದರಲ್ಲಿ 18 ಲಕ್ಷ ಮಂದಿ ಭಾರತೀಯರಿದ್ದಾರೆ. ಇದು ಕೆನಡಾದ ಒಟ್ಟು ಜನಸಂಖ್ಯೆಯ ಶೇ. 5 ರಷ್ಟು ಇದೆ. ಇವರಲ್ಲಿ 7 ಲಕ್ಷಕ್ಕೂ ಹೆಚ್ಚು ಸಿಖ್ಖರಿದ್ದಾರೆ, ಇದು ಒಟ್ಟು ಜನಸಂಖ್ಯೆಯ ಶೇ.2 ರಷ್ಟು ಇದೆ. ಇದರಲ್ಲಿ ದೊಡ್ಡ ಸಂಖ್ಯೆಯ ಖಲಿಸ್ತಾನ್ ಬೆಂಬಲಿಗರಿದ್ದಾರೆ.
ಸಂಪಾದಕೀಯ ನಿಲುವುಖಲಿಸ್ತಾನಿಗಳ ಮತ ಪಡೆಯಲು ಟ್ರುಡೋ ಸರಕಾರ ಖಲಿಸ್ತಾನಿ ಭಯೋತ್ಪಾದಕರನ್ನು ರಕ್ಷಿಸಿ ಭಾರತದ ಮೇಲೆ ಸುಳ್ಳು ಆರೋಪ ಹೊರೆಸುತ್ತಿದೆ. ಆದ್ದರಿಂದ ಭಾರತವು ಕೆನಡಾವನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಬಣ್ಣ ಬಯಲು ಮಾಡಬೇಕು ! |