|
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಸಾತಖೀರಾದಲ್ಲಿರುವ ಜೆಶೋರೇಶ್ವರಿ ದೇವಸ್ಥಾನದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅವರ ಮೇಲೆ ಶ್ಯಾಮನಗರದ ಜೇಶೋರೇಶ್ವರಿ ದೇವಸ್ಥಾನದ ಶ್ರೀ ಕಾಳಿದೇವಿ ವಿಗ್ರಹದ ಕಿರೀಟವನ್ನು ಕದ್ದಿರುವ ಆರೋಪ ಇದೆ. ಮಾರ್ಚ್ 2021 ರಲ್ಲಿ ಬಾಂಗ್ಲಾದೇಶದ ಪ್ರವಾಸದಲ್ಲಿರುವಾಗ ಪ್ರಧಾನಿ ನರೇಂದ್ರ ಮೋದಿಯವರು ಈ ಕಿರೀಟವನ್ನು ನೀಡಿದ್ದರು. ಈ ಚಿನ್ನದಿಂದ ಲೇಪಿತವಾದ ಬೆಳ್ಳಿಯ ಕಿರೀಟವನ್ನು ಅಕ್ಟೋಬರ್ 10 ರಂದು ಕಳವು ಮಾಡಲಾಗಿತ್ತು.
ಈ ದೇವಾಲಯದ ಅರ್ಚಕ ಜ್ಯೋತಿ ಪ್ರಕಾಶ್ ಚಟ್ಟೋಪಾಧ್ಯಾಯ ಅವರು ಕಿರೀಟ ಕಳ್ಳತನವಾದ ಬಗ್ಗೆ ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಕಳ್ಳತನದ ದೃಶ್ಯ ‘ಸಿಸಿಟಿವಿಯಲ್ಲಿ’ಯೂ ಸೆರೆಯಾಗಿದೆ. ಈ ಕಳ್ಳತನ ಪ್ರಕರಣದಲ್ಲಿ ಬಂಧಿತರಾಗಿರುವ 4 ಜನರ ತನಿಖೆ ನಡೆಯುತ್ತಿದೆ; ಆದರೆ ದೇವಿಯ ಕಳ್ಳತನವಾದ ಕಿರೀಟ ಇನ್ನೂ ಪತ್ತೆಯಾಗಿಲ್ಲ.