ಖಲಿಸ್ತಾನಿ ಭಯೋತ್ಪಾದಕರ ಕುರಿತು ವರದಿ ಮಾಡಿದ ಪತ್ರಕರ್ತರ ಮೇಲೆ ದಾಳಿ : ಕೆನಡಾದಲ್ಲಿನ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರಿಂದ ಆತಂಕ !

ಓಟಾವಾ (ಕೆನಡಾ) – ಕೆನಡಾದಲ್ಲಿನ ಭಾರತೀಯ ಮೂಲದ ಸಂಸದ ಚಂದ್ರ ಆರ್ಯ ಇವರು ಖಲಿಸ್ತಾನಿ ಭಯೋತ್ಪಾದಕರ ವರದಿ ಮಾಡುವ ಪತ್ರಕರ್ತರ ಮೇಲೆ ನಡೆಯುವ ದಾಳಿಯ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಅವರು ಕಾನೂನಿನ ಕ್ರಮ ಕೈಗೊಳ್ಳುವ (ಇಡಿ) ವ್ಯವಸ್ಥೆಯ ಅಧಿಕಾರಿಗಳ ಬಳಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹಿಸಿದ್ದಾರೆ. ಅವರು ಇತ್ತೀಚೆಗೆ ಹೌಸ್ ಆಫ್ ಕಾಮನ್ಸ್ ಗೆ ಉದ್ದೇಶಿಸಿ ಮಾತನಾಡಿದ್ದರು. ಆಗ ಅವರು ಇದನ್ನು ಆಗ್ರಹಿಸಿದ್ದರು.

೧. ಸಂಸದ ಆರ್ಯ ಇವರು ಮಾರ್ಚ್ ೨೦೨೩ ರಲ್ಲಿ ‘ರೇಡಿಯೋ ಎ ಎಂ ೬೦೦’ ನ ಸಮೀರ್ ಕೌಶಲ್ ಇವರ ಮೇಲೆ ಖಲಿಸ್ತಾನಿಗಳು ದಾಳಿ ನಡೆಸಿದ್ದರು. ಫೆಬ್ರವರಿ ೨೦೨೨ ರಲ್ಲಿ ಖಲಿಸ್ತಾನಿಗಳಿಗೆ ಸಂಬಂಧಿತ ಹಿಂಸಾಚಾರದ ಕುರಿತು ವಾಗ್ದಾಳಿ ನಡೆಸಿರುವ ಕುರಿತು ಬ್ರಮ್ಪ್ಟನ ರೇಡಿಯೋದ ನಿರೂಪಕ ದೀಪಕ ಪೂಂಜ ಇವರ ಮೇಲೆ ಅವರ ಸ್ಟುಡಿಯೋದಲ್ಲಿ ದಾಳಿ ಮಾಡಲಾಗಿತ್ತು.

೨. ಕಳೆದ ವರ್ಷ ಸಪ್ಟೆಂಬರನಲ್ಲಿ ಕೆನಡಾದ ಪ್ರಧಾನಮಂತ್ರಿ ಜಸ್ಟಿನ್ ಇವರು ಬ್ರಿಟಿಷ್ ಕೊಲಂಬಿಯಾದಲ್ಲಿ ಖಲಿಸ್ತಾನಿ ಬೆಂಬಲಿಗ ಹರದೀಪ ಸಿಂಹ ನಿಜ್ಜರನ ಹತ್ಯೆಯಲ್ಲಿ ಭಾರತದ ಕೈವಾಡ ಇರುವುದೆಂದು ಆರೋಪಿಸಿದ್ದರು. ಅದರ ನಂತರ ಭಾರತ ಮತ್ತು ಕೆನಡಾದ ಸಂಬಂಧದಲ್ಲಿ ಗಂಭೀರವಾದ ಬಿಗುವಿನ ವಾತಾವರಣ ನಿರ್ಮಾಣವಾಯಿತು; ಆದರೆ ಭಾರತವು ಬ್ರಿಟಾನಿನ ಪ್ರಧಾನಮಂತ್ರಿ ಟ್ರೂಡೋ ಇವರ ಆರೋಪಗಳನ್ನು ತಳ್ಳಿ ಹಾಕಿತ್ತು.

ಸಂಪಾದಕೀಯ ನಿಲುವು

ಕೆನಡಾದ ಪ್ರಧಾನಮಂತ್ರಿಯವರೇ ಖಲಿಸ್ತಾನಿಗಳನ್ನು ಬಹಿರಂಗವಾಗಿಯೇ ರಕ್ಷಿಸುತ್ತಾರೆ, ಅಲ್ಲಿ ಅವರ ದೇಶದಲ್ಲಿ ಖಲಿಸ್ತಾನಿ ವಿರೋಧಿ ಪತ್ರಕರ್ತರ ಮೇಲೆ ದಾಳಿ ನಡೆದರೆ ಅದರಲ್ಲಿ ಆಶ್ಚರ್ಯವೇ ಇಲ್ಲ, ವಿಶ್ವಸಂಸ್ಥೆ ಈಗ ಇಂತಹ ದೇಶಗಳಿಗೆ ‘ಭಯೋತ್ಪಾದಕರ ಬೆಂಬಲಿಗರು’ ಎಂದು ನಿರ್ಧರಿಸಿ ಕಠಿಣ ಕ್ರಮ ಕೈಗೊಳ್ಳಬೇಕು !