‘ಬಾಂಗ್ಲಾದೇಶದ ಪ್ರಗತಿಗಾಗಿ ಎಲ್ಲಾ ಧರ್ಮದ ಜನರು ಧಾರ್ಮಿಕ ಮೌಲ್ಯದ ಉಪಯೋಗ ರಾಷ್ಟ್ರದ ಉನ್ನತಿಗಾಗಿ ಮಾಡಬೇಕಂತೆ ! – ಮಹಮ್ಮದ್ ಶಹಬುದ್ದಿನ, ರಾಷ್ಟ್ರಪತಿ, ಬಾಂಗ್ಲಾದೇಶ

ಹಿಂದೂ ಧರ್ಮದವರ ಮೇಲಿನ ದೌರ್ಜನ್ಯದ ಕುರಿತು ಚಕಾರ ಶಬ್ದವು ತೆಗೆಯದ ರಾಷ್ಟ್ರಪತಿ ಮಹಮ್ಮದ್ ಶಹಬುದ್ದಿನ ಇವರ ಹುರುಳಿಲ್ಲದ ಹೇಳಿಕೆ

ಢಾಕಾ – ಬಾಂಗ್ಲಾದೇಶದ ರಾಷ್ಟ್ರಪತಿ ಮೊಹಮ್ಮದ್ ಶಾಬುದ್ದೀನ್ ಇವರು ಇತ್ತೀಚಿಗೆ ಬಾಂಗ್ಲಾದೇಶದ ಪ್ರಗತಿಗಾಗಿ ಎಲ್ಲಾ ಧರ್ಮದ ಜನರು ಒಟ್ಟಾಗಿ ಸೇರಿ ಕೆಲಸ ಮಾಡಲು ಕರೆ ನೀಡಿದರು. ದುರ್ಗಾ ಪೂಜೆ ಉತ್ಸವ ಮತ್ತು ಮೂರ್ತಿ ವಿಸರ್ಜನೆ ಕಾರ್ಯಕ್ರಮದ ಪ್ರಯುಕ್ತ ಅವರು ಈ ಕರೆ ನೀಡಿದರು. ಧಾರ್ಮಿಕ ಮೌಲ್ಯದ ಉಪಯೋಗ ರಾಷ್ಟ್ರದ ಉನ್ನತಿಗಾಗಿ ಮಾಡಬೇಕು, ಹೀಗೆ ಅವರು ಈ ಸಮಯದಲ್ಲಿ ಹೇಳಿದರು. (ಬಾಂಗ್ಲಾದೇಶದ ರಾಷ್ಟ್ರಪತಿಗಳು ಕೇವಲ ಕರೆ ನೀಡಿ ಅಷ್ಟಕ್ಕೇನಿಲ್ಲದೆ ದುರ್ಗಾ ಪೂಜೆ ಮಂಟಪಗಳ ಮೇಲೆ ದಾಳಿ ಮಾಡುವ ದುರ್ಗಾದೇವಿಯ ಮೂರ್ತಿಯನ್ನು ಧ್ವಂಸಗೊಳಿಸುವ ಮತಾಂಧರ ವಿರುದ್ಧ ಕಠಿಣ ಕ್ರಮ ಕೈಗೊಂಡು ಧಾರ್ಮಿಕ ಮೌಲ್ಯವನ್ನು ಕಾಪಾಡಬೇಕು ! – ಸಂಪಾದಕರು)

ಬಂಗಭವನ ಇಲ್ಲಿ ದುರ್ಗ ಪೂಜಾ ಸಮಾರಂಭದ ಸಮಯದಲ್ಲಿ ಅವರು ಜಾತಿ ಧರ್ಮದ ವಿಚಾರ ಮಾಡದೆ ಎಲ್ಲಾ ನಾಗರಿಕರು ಒಟ್ಟಾಗಿ ಸೇರಿ ವಿಕಸಿತ ಮತ್ತು ಸಮೃದ್ಧ ರಾಷ್ಟ್ರ ನಿರ್ಮಾಣ ಮಾಡುವುದಕ್ಕಾಗಿ ಕೆಲಸ ಮಾಡುವ ಕರೆ ನೀಡಿದರು, ಅವರು, ನಾವೆಲ್ಲರೂ ಬಾಂಗ್ಲಾದೇಶಿಗರಾಗಿದ್ದೇವೆ. ನಮ್ಮ ದೇಶದಲ್ಲಿ ಬಹುಸಂಖ್ಯಾತ ಅಥವಾ ಅಲ್ಪಸಂಖ್ಯಾತರೆಂಬ ಭೇದಭಾವವಿಲ್ಲ. ಬಾಂಗ್ಲಾದೇಶವನ್ನು ಅಭಿವೃದ್ಧಿ, ಸಮೃದ್ಧ ಮತ್ತು ಭೇದಭಾವ ಮುಕ್ತ ದೇಶ ರೂಪಿಸುವುದಕ್ಕಾಗಿ ಸಹಿಷ್ಣುತೆ, ಪರಸ್ಪರ ವಿಶ್ವಾಸ ಮತ್ತು ಸಹಕಾರದ ಆವಶ್ಯಕತೆ ಇದೆ. ದುರ್ಗಾ ಪೂಜೆ ಇದು ಬಂಗಾಲಿ ಪರಂಪರೆ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟಿದೆ. ಇದು ಕೇವಲ ಧಾರ್ಮಿಕ ಹಬ್ಬ ಅಷ್ಟೇ ಅಲ್ಲದೆ ಇದು ಸಾಮಾಜಿಕ ಉತ್ಸವ ಕೂಡ ಆಗಿದೆ. ಎಲ್ಲರೂ ಸಾಮೂಹಿಕ ಸಹಭಾಗದಿಂದ ಈ ಉತ್ಸವ ಸಾರ್ವಜನಿಕವಾಗಿದೆ.” ಎಂದು ಹೇಳಿದರು.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಮುಸಲ್ಮಾನರು ಅವರ ಧಾರ್ಮಿಕ ಮೌಲ್ಯದ ಉಪಯೋಗ ಹಿಂದುಗಳನ್ನು ಮುಗಿಸುವುದಕ್ಕಾಗಿ ಮಾಡುತ್ತಿದ್ದಾರೆ. ಈ ಕುರಿತು ಬಾಂಗ್ಲಾದೇಶದ ರಾಷ್ಟ್ರಪತಿ ಏಕೆ ಬಾಯಿ ತೆರೆಯುವುದಿಲ್ಲ ?