ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆಯಲ್ಲಿ ಮುಸಲ್ಮಾನ ಯುವಕರಿಂದ ಇಸ್ಲಾಮಿ ಕ್ರಾಂತಿಯ ಹಾಡು; ೬ ಮುಸಲ್ಮಾನ ಯುವಕರ ಬಂಧನ

ಆಡಳಿತದಿಂದ ಪ್ರಕರಣ ಮುಚ್ಚಿ ಹಾಕುವ ಪ್ರಯತ್ನ

ಚಿತಗಾವ (ಬಾಂಗ್ಲಾದೇಶ) – ಇಲ್ಲಿಯ ದುರ್ಗಾಪೂಜೆ ಮಂಟಪದಲ್ಲಿ ದೇಶಭಕ್ತಿ ಗೀತೆ ಹಾಡುವ ಹೆಸರಿನಲ್ಲಿ ವೇದಿಕೆಯಲ್ಲಿ ಹತ್ತಿದ್ದ ಇಸ್ಲಾಮಿ ಕಟ್ಟರವಾದಿಗಳು ‘ಇಸ್ಲಾಮಿ ಕ್ರಾಂತಿ’ಗೆ ಕರೆ ನೀಡುವ ಗೀತೆಗಳನ್ನು ಹಾಡಿದರು. ಈ ಹಾಡುಗಳಲ್ಲಿ ಬಾಂಗ್ಲಾದೇಶದಲ್ಲಿ ಇಸ್ಲಾಮಿಕ್ ಕ್ರಾಂತಿ ತರುವ ಕುರಿತು ಮತ್ತು ಮುಸಲ್ಮಾನೇತರರನ್ನು ಗುರಿ ಮಾಡುವ ಕುರಿತು ಕೆಲವು ಸಾಲುಗಳು ಒಳಗೊಂಡಿದ್ದವು. ಈ ಪ್ರಕರಣ ಬೆಳಕಿಗೆ ಬಂದ ನಂತರ ಬಾಂಗ್ಲಾದೇಶದ ಸರಕಾರವು ಈ ಪ್ರಕರಣವನ್ನು ಎಂದಿನಂತೆ ಮುಚ್ಚಿ ಹಾಕುವ ಪ್ರಯತ್ನ ಮಾಡಿತು; ಆದರೆ ಯಾವಾಗ ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಯಿತು ಮತ್ತು ವಾಸ್ತವ ಪರಿಶೀಲಿಸಿ ನೋಡುವಾಗ ಇಂತಹ ಕೃತ್ಯ ನಡೆದಿರುವುದು ಬೆಳಕಿಗೆ ಬಂದಿದೆ, ಆಗ ಸ್ಥಳೀಯ ಆಡಳಿತವು ಕ್ರಮ ಕೈಗೊಳ್ಳಲು ಆದೇಶ ನೀಡಿತು. ಅದರ ನಂತರ ೬ ಯುವಕರನ್ನು ಬಂಧಿಸಲಾಯಿತು. ಈ ಘಟನೆ ಅಕ್ಟೋಬರ್ ೯ ರಂದು ನಡೆದಿದೆ.

೧. ಕೆಲವು ಯುವಕರು, ‘ಚಿತ್ತಗ್ರಾಮ ಕಲ್ಚರ್ ಅಕಾಡೆಮಿ’ ಈ ಸ್ಥಳೀಯ ಸಾಂಸ್ಕೃತಿಕ ಸಂಸ್ಥೆಯ ಸದಸ್ಯರೆಂದು ಮಂಟಪದ ಆಯೋಜಕರಿಗೆ ದೇಶಭಕ್ತಿ ಗೀತೆ ಹಾಡಲು ಅನುಮತಿ ಕೇಳಿದರು. ಆಯೋಜಕರು ಅವರ ಮೇಲೆ ಅನುಮಾನ ಪಡೆದೆ ಅನುಮತಿ ನೀಡಿದರು; ಆದರೆ ಅದರ ನಂತರ ಕಟ್ಟರವಾದಿ ಯುವಕರು ವೇದಿಕೆಯ ಮೇಲೆ ಇಸ್ಲಾಮಿ ಕ್ರಾಂತಿಯ ಪ್ರಚಾರ ಮಾಡುವ ಹಾಡುಗಳನ್ನು ಹಾಡಲಾರಂಭಿಸಿದರು. ಆದ್ದರಿಂದ ವಾತಾವರಣ ಹದಗೆಟ್ಟಿತು. ಈ ಕೃತ್ಯದಿಂದ ಅಲ್ಲಿ ಉಪಸ್ಥಿತ ಇರುವ ಹಿಂದುಗಳು ಅಸಮಾಧಾನಗೊಂಡರು. ಈ ಘಟನೆಯ ನಂತರ ತಕ್ಷಣ ಅದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾಯಿತು; ಆದರೆ ಎಂದಿನಂತೆ ಕೆಲವು ಜನರು ಈ ಘಟನೆಯನ್ನು ನಕಲಿ ಅಥವಾ ‘ಸಂಗ್ರಹಿತ’ ವಿಡಿಯೋ ಎಂದು ಹೇಳುತ್ತಾ ಈ ಘಟನೆಯನ್ನು ಮುಚ್ಚಾಕುವ ಪ್ರಯತ್ನ ಮಾಡಿದರು. ಸ್ಥಳೀಯ ಪತ್ರಕರ್ತ ಮತ್ತು ಸಾಮಾಜಿಕ ಕಾರ್ಯಕರ್ತ ಇವರು ವಿಡಿಯೋದಲ್ಲಿ ತೋರಿಸಿರುವ ಘಟನೆ ನಿಜವಾಗಿದ್ದು ಅದು ಸುಳ್ಳಾಗಿದೆ ಎಂದು ಹೇಳಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

೨. ‘ಎ.ಎಫ್.ಪಿ.’ ಈ ವಾರ್ತಾ ಸಂಸ್ಥೆಯ ಪತ್ರಕರ್ತ ಕಾದೇರುವುದ್ದಿನ ಶಿಶಿರ ಇವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ, ಈ ವಿಡಿಯೋ ಸುಳ್ಳಾಗಿಲ್ಲ ಮತ್ತು ಈ ಘಟನೆ ನಿಜವಾಗಿಯೂ ನಡೆದಿದೆ. ಯಾವ ಸಂಸ್ಕೃತಿಕ ಸಂಘಟನೆಗೆ ಆಮಂತ್ರಿತಗೊಳಿಸಲಾಗಿತ್ತು ಅದು ‘ಜಮಾತೆ ಏ ಇಸ್ಲಾಮಿ’ ಜೊತೆಗೆ ಸಂಬಂಧಿತವಾಗಿರಬಹುದು ಎಂದು ಹೇಳಿದ್ದಾರೆ.

೩. ಈ ಘಟನೆಯ ನಂತರ ಚಿತ್ತಗ್ರಾಮದ ಉಪಯುಕ್ತ ಫರೀದಾ ಕಾನಂ ಇವರು ಘಟನಾ ಸ್ಥಳಕ್ಕೆ ತಲುಪಿ ಪರಿಸ್ಥಿತಿಯ ವರದಿ ಪಡೆದರು ಮತ್ತು ಈ ಪ್ರಕರಣದ ವಿಚಾರಣೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’, ಎಂದು ಆಶ್ವಾಸನೆ ನೀಡಿದರು. ‘ಇಂತಹ ಘಟನೆ ಬಾಂಗ್ಲಾದೇಶದಲ್ಲಿನ ಧಾರ್ಮಿಕ ಐಕ್ಯತೆಗೆ ಮಾರಕವಾಗಿದ್ದು ಅದನ್ನು ಸಹಿಸಲಾಗುವುದಿಲ್ಲ. ದುರ್ಗಾ ಪೂಜೆಯಂತಹ ಧಾರ್ಮಿಕ ಕಾರ್ಯಕ್ರಮದಲ್ಲಿನ ಧಾರ್ಮಿಕ ಸೌಹಾರ್ದತೆ ಹಾಳಾಗಬಾರದು, ಇದರ ಕಾಳಜಿ ಸರಕಾರ ವಹಿಸುವುದು, ಎಂದು ಕೂಡ ಅವರು ಹೇಳಿದರು.

೪. ಪೂಜಾ ಮಂಟಪದ ಸಹಾಯಕ ಕಾರ್ಯದರ್ಶಿ ಸಜಲ ದತ್ತಾ ಇವರು ಈ ಗುಂಪಿಗೆ ವೇದಿಕೆಯ ಮೇಲೆ ಇಸ್ಲಾಮಿ ಹಾಡು ಹಾಡಲು ಅನುಮತಿ ನೀಡಿರುವವರೆಂದು ಕೆಲವು ಜನರು ಆರೋಪಿಸಿದ್ದಾರೆ. ಈ ಸಮಾಚಾರ ಹಬ್ಬುತ್ತಲೇ ಆಯೋಜಕರು ವೇದಿಕೆಯಿಂದಲೇ, ‘ಸಜಲ ದತ್ತಾ ಇವರನ್ನು ಪೂಜಾ ಉತ್ಸವ ಸಮೀತಿಯಿಂದ ತೆಗೆದು ಹಾಕಲಾಗಿದೆ’, ಎಂದು ಘೋಷಿಸಿದರು. ಇನ್ನೊಂದು ಕಡೆ ‘ಈ ಘಟನೆಯ ಮಾಹಿತಿ ಇಲ್ಲದಿರುವುದರಿಂದ ನಮಗೆ ದಾರಿ ತಪ್ಪಿಸಲಾಗಿದೆ ಎಂದು ಆಯೋಜಕರು ದಾವೆ ಮಾಡಿದ್ದಾರೆ.

ಹಿಂದುಗಳು ಮಸೀದಿಯಲ್ಲಿ ನಮಾಜ ಸಮಯದಲ್ಲಿ ‘ಹರೇ ರಾಮ ಹರೇ ಕೃಷ್ಣ’ ಇದನ್ನು ಹಾಡಿದರೇ.. ? – ತಸ್ಲಿಮಾ ನಸ್ರೀನ್

ಬಾಂಗ್ಲಾದೇಶದಲ್ಲಿನ ಚಿತಗಾವ್ ಇಲ್ಲಿಯ ದುರ್ಗಾ ಪೂಜಾ ಮಂಟಪದಲ್ಲಿ ಜಿಹಾದಿ ಇಸ್ಲಾಮಿ ಜಿಹಾದಿ ಹಾಡುಗಳು ಹಾಡುತ್ತಾರೆ. ಹಿಂದುಗಳು ಏನಾದರೂ ಮಸೀದಿಯಲ್ಲಿ ನಮಾಜದ ಸಮಯದಲ್ಲಿ ಹರೇ ರಾಮ ಹರೇ ಕೃಷ್ಣ ಹಾಡಿದರೆ ಆಗ –? ಹೀಗೆ ಪ್ರಸಿದ್ಧ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ಇವರು ಈ ಘಟನೆಯ ಕುರಿತು ಎಕ್ಸ್ ನಲ್ಲಿ ಪೋಸ್ಟ್ ಮಾಡುತ್ತಾ ಪ್ರಶ್ನೆಸಿದ್ದಾರೆ.

ಸಂಪಾದಕೀಯ ನಿಲುವು

ಬರುವ ಕೆಲವು ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ದುರ್ಗಾ ಪೂಜೆ ಕೂಡ ನಡೆಯುವುದು ಅಥವಾ ಇಲ್ಲ, ಹೀಗೆ ಪರಿಸ್ಥಿತಿ ಆಗಿದ್ದು ಪೂಜೆಗಾಗಿ ಹಿಂದುಗಳು ಸಿಗುವುದೂ ಕಷ್ಟ !