ಹಿಂದೂಗಳ ಅಸ್ತಿತ್ವದ ಪ್ರಶ್ನೆ !

ಶ್ರೀ ಅನಿರುದ್ಧಾಚಾರ್ಯ ಮಹಾರಾಜ

ಸಪ್ಟೆಂಬರ 15 ರಂದು ಒಂದು ಪ್ರಸಿದ್ಧ ವಾಹಿನಿಯು ಭಾಗವತ್ಕಥಾವಾಚಕ ಅನಿರುದ್ಧಾಚಾರ್ಯ ಮಹಾರಾಜರ ಸಂದರ್ಶನ ತೆಗೆದುಕೊಂಡಿತು ಹಾಗೂ ಅವರಿಗೆ ಅನೇಕ ಪ್ರಶ್ನೆಗಳನ್ನು ಕೇಳಿತು. ಅವರು ಈ ಸಂದರ್ಭದಲ್ಲಿ ಮಾತನಾಡುತ್ತಾ, “ಮುಂಬರುವ ಕಾಲ ತುಂಬಾ ಕಠಿಣವಾಗಿದೆ. ಮುಂಬರುವ ಕಾಲದಲ್ಲಿ ಹಿಂದೂಗಳು ಬದುಕುಳಿಯಬೇಕಾದರೆ, ಹುಡುಗರನ್ನು ಛತ್ರಪತಿ ಶಿವಾಜಿ ಮಹಾರಾಜ ಹಾಗೂ ಹುಡುಗಿಯರನ್ನು ಝಾನ್ಸಿ ರಾಣಿಯಂತೆ ಮಾಡಬೇಕು” ಎಂದರು. ಆಗ ನಿವೇದಕರು “ಹಾಗಾದರೆ ಕಾನೂನು ಇರುವುದೇಕೆ ?” ಎಂದು ಕೇಳಿದರು. ಅದಕ್ಕೆ ಅವರು, “ಬಾಂಗ್ಲಾದೇಶದಲ್ಲಿಯೂ ಕಾನೂನು ಇತ್ತು.  ಅಲ್ಲಿ ಏನಾಯಿತು ?”, ಎಂದು ಕೇಳಿದರು. ಅದಕ್ಕೂ ಇಲ್ಲಸಲ್ಲದ ಪ್ರಶ್ನೆ ಕೇಳಲು ಆರಂಭಿಸಿದಾಗ ಅವರು ಹೇಳಿದರು, “ನಮ್ಮ ದೇವತೆಗಳ ಕೈಗಳಲ್ಲಿಯೂ ಶಸ್ತ್ರಗಳಿವೆ. ಶ್ರೀಕೃಷ್ಣನಿಗೆ ಪ್ರತಿಕ್ಷಣ ಕೊಳಲನ್ನೇ ಊದಲಿಕ್ಕಿರುತ್ತಿದ್ದರೆ, ಅವನು ಸುದರ್ಶನ ಚಕ್ರವನ್ನು ಕೈಗೆತ್ತಿಕೊಳ್ಳುತ್ತಿರಲಿಲ್ಲ. ಇಂದು ಹಿಂದೂಗಳು ಓಡಿ ಹೋಗಬೇಕಾಗುತ್ತಿದೆ. ಕಾಶ್ಮೀರದಲ್ಲಿಯೂ ಅದೇ ಆಯಿತು. ಅಲ್ಲಿಯೂ ಕಾನೂನು ಇತ್ತು. ಹಿಂದೂಗಳು ಪಲಾಯನಗೈಯದೆ ಅಲ್ಲಿಯೇ ನಿಂತು ಹೋರಾಡಬೇಕು. ಅದಕ್ಕಾಗಿ ಶಸ್ತ್ರ ಬೇಕು.”

ಇತ್ತೀಚೆಗೆ ಜಗತ್ತು ಯುದ್ಧದ ಕರಿನೆರಳಿನಲ್ಲಿದೆ. ಅನೇಕ ದಾರ್ಶನಿಕರು ಹೇಳಿರುವಂತೆ ಇಸ್ಲಾಮ್ ಮತ್ತು ಕ್ರೈಸ್ತ ಪಂಥದವರಲ್ಲಿ ಪರಸ್ಪರ ಯುದ್ಧ ನಡೆಯುತ್ತಿದೆ. ಒಂದೆಡೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಜಗತ್ತಿನ ಯುದ್ಧಜನ್ಯ ಸ್ಥಿತಿಯನ್ನು ನಿಲ್ಲಿಸುವ ‘ಮಸೀಹಾ’ (ಉದ್ಧಾರಕ) ಎಂಬಂತೆ ನೋಡಲಾಗುತ್ತದೆ; ಆದರೆ ಯಾವ ದೇಶದ ಸನಾತನ ಸಂಸ್ಕೃತಿಯಿಂದಾಗಿ ಅವರು ಪ್ರಧಾನಮಂತ್ರಿಯಾಗಿದ್ದಾರೆಯೋ, ಆ ದೇಶದಲ್ಲಿಯೇ ಹಿಂದೂಗಳ ಸ್ಥಿತಿ ದಿನಕಳೆದಂತೆ ದಯನೀಯವಾಗುತ್ತಿದೆ. ಅಲ್ಲಲ್ಲಿ ಜಿಹಾದಿಗಳು ವಿವಿಧ ಪ್ರಕಾರದ ಜಿಹಾದ್ ನಡೆಸುತ್ತಾ ಎಷ್ಟು ಕೋಲಾಹಲವೆಬ್ಬಿಸುತ್ತಿದ್ದಾರೆಂದರೆ ಹಿಂದೂಗಳಿಗೆ ಬದುಕಲು ಕಷ್ಟವಾಗುತ್ತಿದೆ. ವಕ್ಫ್ ಬೋರ್ಡ್ ಹಿಂದೂಗಳಿಗೆ ಕಾಲಿಡಲಿಕ್ಕೂ ಸ್ಥಳ ಸಿಗದಂತಹ ವ್ಯವಸ್ಥೆ ಮಾಡಿಟ್ಟಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ಅನಿರುದ್ಧಾಚಾರ್ಯ ಮಹಾರಾಜರಿಗೆ ಅದೇ ವಾಹಿನಿಯಲ್ಲಿ ಇದೇ ರೀತಿಯ ಪ್ರಶ್ನೆ ಕೇಳಲಾಗಿತ್ತು. ಆ ಸಂದರ್ಭದಲ್ಲಿಯೂ ಅವರು ಸ್ಪಷ್ಟವಾಗಿ ಮಾತನಾಡುತ್ತಾ “ಬಲಾತ್ಕಾರ ಆಗುತ್ತಿರುವಾಗ ಸ್ತ್ರೀಯರು ಅದಕ್ಕೆ ಮೂಕ ಸಮ್ಮತಿ ನೀಡಬೇಕೇ ಅಥವಾ ಝಾನ್ಸಿಯ ರಾಣಿಯಂತೆ ಖಡ್ಗ ಹಿಡಿದು ಪ್ರತಿಕಾರ ಮಾಡಬೇಕೇ ?” ಎಂದಿದ್ದರು. ಹನುಮಾನ ಗಢಿಯ ಮಹಾರಾಜ ಸಂತ ರಾಜೀವದಾಸರು ಕಳೆದ ವರ್ಷ ಒಂದು ಪ್ರಸಂಗದ ವಿಷಯದಲ್ಲಿ ‘ಯಾರು ರುಂಡವನ್ನು ಹಾರಿಸುವನೋ, ಅವನಿಗೆ 21 ಲಕ್ಷ ರೂಪಾಯಿ ನೀಡಲಾಗುವುದು’ ಎಂಬ ಹೇಳಿದ್ದರು. ಇದನ್ನು ಉಲ್ಲೇಖಿಸಿದ ನಿವೇದಕರು “ಇದರ ಬಗ್ಗೆ ನಿಮಗೇನು ಅನಿಸುತ್ತದೆ ? ಹಾಗಾದರೆ ಕಾನೂನು ಇರುವುದೇಕೆ ?” ಎಂದೆಲ್ಲ ಅನಿರುದ್ಧಾಚಾರ್ಯರಿಗೆ ಪ್ರಶ್ನಿಸಿದರು. ಯಾರು ನಿಜವಾಗಿಯೂ ‘ಸರ್ ತನ್‍ಸೆ ಜುದಾ’ ನೀತಿ ಅವಲಂಬಿಸಿ ಹಿಂದೂಗಳನ್ನು ನಾಮಾವಶೇಷ ಮಾಡುತ್ತಿದ್ದಾರೋ ಅವರಿಗೆ ಈ ಪ್ರಶ್ನೆ ಕೇಳಲು ವಾಹಿನಿಯ ನಿವೇದಕರಿಗೆ ಧೈರ್ಯವಿಲ್ಲ; ಅಲ್ಲದೇ, ಹಿಂದೂಗಳ ಮೇಲೆ ಪದೇ ಪದೇ ಆಕ್ರಮಣದ ಘಟನೆಗಳ ವಾರ್ತೆಯನ್ನು ಈ ವಾಹಿನಿಗಳು ನೀಡುವುದಿಲ್ಲ; ಆದರೆ ಹಿಂದೂಗಳ ಜೀವ ಹೋಗುವಾಗ ಹಿಂದೂ ಸಂತರು ಅವರನ್ನು ಜಾಗೃತಗೊಳಿಸಲು ಏನಾದರೂ ಹೇಳಿದರೆ, ಆಗ ಈ ವಾಹಿನಿಗಳು ಅವರನ್ನು ಪ್ರಶ್ನಿಸುತ್ತವೆ ಹಾಗೂ ಆ ವಿಷಯದಲ್ಲಿ ಬೇರೆ ಸಂತರಿಂದ ಸಾಕ್ಷಿ ಕೇಳಲೂ ಹಿಂದೆ ಮುಂದೆ ನೋಡುವುದಿಲ್ಲ. ಇವೆಲ್ಲ ಹಿನ್ನೆಲೆಯಲ್ಲಿ ಅನಿರುದ್ಧಾಚಾರ್ಯ ಮಹಾರಾಜರು ‘ಹಿಂದೂಗಳಿಗೆ ಈಗ ಅವರ ಅಸ್ತಿತ್ವವನ್ನು ಉಳಿಸಲು ಶಸ್ತ್ರಗಳನ್ನು ಉಪಯೋಗಿಸುವ ಸಮಯ ಬಂದಿದೆ’, ಎಂಬುದನ್ನು ಬಹಿರಂಗವಾಗಿ ಹೇಳಿದರು. ಅಸ್ತಿತ್ವವೇ ಉಳಿಯುವುದಿಲ್ಲವೆನ್ನುವಾಗ ಹಿಂದೂಗಳಾದರೂ ಏನು ಮಾಡಬೇಕು ? ಆದರೂ ಜಾತ್ಯತೀತ ಇಕೋಸಿಸ್ಟಮ್‍ನ ಅವಿಭಾಜ್ಯ ಅಂಗವಾಗಿರುವ ಮಾಧ್ಯಮಗಳು ಮುಸಲ್ಮಾನರಿಗೆ ಈ ಪ್ರಶ್ನೆ ಕೇಳಲು ಧೈರ್ಯ ತೋರದೇ ಹಿಂದೂ ಸಂತರಿಗೆ ಕೇಳುತ್ತಾರೆ, ಇದಕ್ಕೇನು ಹೇಳಬೇಕು !