ಆದಿಶಕ್ತಿ ಶ್ರೀ ದುರ್ಗಾದೇವಿಯಿಂದ ಎಲ್ಲಾ ದೇವಿಯರ ನಿರ್ಮಿತಿಯಾಗಿದೆ. ನವರಾತ್ರಿಯ ಸಮಯದಲ್ಲಿ ವಾಯು ಮಂಡಲದಲ್ಲಿ ಶ್ರೀ ದುರ್ಗಾದೇವಿಯ ತತ್ತ್ವವು ಎಂದಿಗಿಂತ ೧೦೦೦ ಪಟ್ಟು ಹೆಚ್ಚು ಕಾರ್ಯನಿರತವಾಗಿರುತ್ತದೆ. ಈ ಕಾಲದಲ್ಲಿ ದೇವಿಯ ಆರಾಧನೆ ಮಾಡುವುದರಿಂದ ಹಾಗೆಯೇ ‘ಶ್ರೀ ದುರ್ಗಾದೇವ್ಯೈ ನಮಃ’ ಈ ನಾಮಜಪವನ್ನು ಸತತವಾಗಿ ಮತ್ತು ಭಾವಪೂರ್ಣವಾಗಿ ಮಾಡುವುದರಿಂದ ನಮಗೆ ಹೆಚ್ಚಿನ ಪ್ರಮಾಣದಲ್ಲಿ ದೇವಿತತ್ತ್ವದ ಲಾಭವಾಗುತ್ತದೆ. ‘ನಾಮಜಪದಿಂದ ಶಕ್ತಿ ಮತ್ತು ಚೈತನ್ಯ ಗ್ರಹಣವಾಗಲಿ’, ಎಂದು ದೇವಿಯಲ್ಲಿ ಆಗಾಗ ಪ್ರಾರ್ಥನೆಯನ್ನು ಮಾಡಬೇಕು. (ಆಧಾರ : ಸನಾತನದ ಗ್ರಂಥ ಮತ್ತು ಕಿರುಗ್ರಂಥ ‘ಶಕ್ತಿ’)
ದೇವತೆಗಳ ಉಪಾಸನೆಯ ಹಿಂದಿನ ಶಾಸ್ತ್ರ ತಿಳಿಸುವ ಗ್ರಂಥ !ಶಕ್ತಿಯ ಪ್ರಾಸ್ತಾವಿಕ ವಿವೇಚನೆ * ಶಕ್ತಿ ಈ ಶಬ್ದದ ಅರ್ಥವೇನು ? * ಶಕ್ತಿಯು ಧಾರಣೆ ಮಾಡಿರುವ ಮೂರು ಮುಖ್ಯ ರೂಪಗಳು ಮತ್ತು ಅವುಗಳ ವೈಶಿಷ್ಟ್ಯವೇನು ? * ಶ್ರೀ ಲಕ್ಷ್ಮೀ, ಪಾರ್ವತಿ, ಶ್ರೀ ದುರ್ಗಾ, ಕಾಳಿ ಮುಂತಾದವರ ವೈಶಿಷ್ಟ್ಯಗಳಾವುವು ? ಸಂಪರ್ಕ ಕ್ರಮಾಂಕ : ೯೩೪೨೫೯೯೨೯೯ ‘ಆನ್‌ಲೈನ್ ಖರೀದಿಗಾಗಿ : www.SanatanShop.com |