ವ್ರತ ಮಾಡುವವರು ಭೂಮಿಯ ಮೇಲೆಯೇ ಮಲಗಬೇಕು. ಬ್ರಹ್ಮಚರ್ಯೆ ಪಾಲಿಸಬೇಕು. ವ್ರತ ಮಾಡುವವರು ಫಲಾಹಾರ ಸೇವಿಸಬೇಕು. ತೆಂಗಿನಕಾಯಿ, ಲಿಂಬೆ, ದಾಳಿಂಬೆ, ಬಾಳೆಹಣ್ಣು, ಮೋಸಂಬಿ ಮತ್ತು ಹಲಸು ಇತ್ಯಾದಿ ಫಲಗಳು ಮತ್ತು ಅನ್ನದ ನೈವೇದ್ಯವನ್ನು ತೋರಿಸಬೇಕು. ವ್ರತ ಮಾಡುವವರು ‘ಸ್ವತಃ ವ್ರತದ ಕಾಲದಲ್ಲಿ ಯಾವಾಗಲೂ ಕ್ಷಮಾ, ದಯಾ ಮತ್ತು ಉದಾರತೆ ಈ ಗುಣಗಳಿಗನುಸಾರ ಆಚರಣೆ ಮಾಡುವೆನು, ಎಂದು ಸಂಕಲ್ಪ ಮಾಡಬೇಕು.
ಈ ದಿನಗಳಲ್ಲಿ ವ್ರತ ಮಾಡುವವರು ಕ್ರೋಧ, ಮೋಹ, ಲೋಭ ಇತ್ಯಾದಿ ದುಷ್ಟಪ್ರವೃತ್ತಿಗಳನ್ನು ತ್ಯಾಗ ಮಾಡಬೇಕು; ದೇವಿಯ ಆವಾಹನೆ, ಪೂಜೆ, ವಿಸರ್ಜನೆ ಪಾಠ ಇತ್ಯಾದಿ ಎಲ್ಲವನ್ನು ಬೆಳಗ್ಗಿನ ಸಮಯದಲ್ಲಿ ಮಾಡುವುದು ಶುಭವಾಗಿರುತ್ತದೆ. ಆದ್ದರಿಂದ ಇವುಗಳನ್ನು ಅದೇ ಕಾಲದಲ್ಲಿ ಪೂರ್ಣಗೊಳಿಸಬೇಕು.
(ಆಧಾರ : ಮಾಸಿಕ ‘ಅಕ್ಷರ ಪ್ರಭಾತ)