‘ಶಾರದೀಯ ನವರಾತ್ರಿ ಮತ್ತು ವಾಸಂತಿಕ ನವರಾತ್ರಿ ಎರಡರಲ್ಲಿಯೂ ೯ ದಿನಗಳ ಕಾಲ ‘ಶಕ್ತಿಯ ಉಪಾಸನೆ ಯನ್ನು ಮಾಡಲಾಗುತ್ತದೆ. ಅದು ಪ್ರತಿಪದೆಯಿಂದ ನವಮಿಯ ವರೆಗೆ ನಡೆಯುತ್ತದೆ. ಈ ವಿಶೇಷ ಉಪಾಸನೆಯ ಕಾಲಾವಧಿಯು ೯ ದಿನವೇ ಏಕೆ ? ಇದಕ್ಕಿಂತ ಹೆಚ್ಚು ಅಥವಾ ಕಡಿಮೆ ದಿನಗಳು ಏಕೆ ಇಲ್ಲ ? ಎಂಬ ಬಗ್ಗೆ ಮುಂದಿನಂತೆ ಕೆಲವು ತರ್ಕ ಅಥವಾ ಯುಕ್ತಿವಾದವನ್ನು ಮಂಡಿಸಲಾಗುತ್ತದೆ.
೧. ದುರ್ಗಾದೇವಿಯ ಒಂಬತ್ತು ಪ್ರಕಾರಗಳಿವೆ. ಆದ್ದರಿಂದ ಅವಳ ಉಪಾಸನೆಗಾಗಿ ೯ ದಿನಗಳ ಕಾಲಾವಧಿಯನ್ನು ನಿಶ್ಚಿತಗೊಳಿಸಲಾಗಿದೆ.
೨. ನವರಾತ್ರಿಯು ಸಂಪೂರ್ಣ ವರ್ಷದ ದಿನಗಳಲ್ಲಿ ೪೦ ನೇ ಭಾಗವಾಗಿದೆ, ಅಂದರೆ ಒಂದು ವರ್ಷದಲ್ಲಿ ೩೬೦ ದಿನಗಳನ್ನು ೯ ಸಂಖ್ಯೆಯಿಂದ ಭಾಗಿಸಿದರೆ ೪೦ ಭಾಗಗಳಾಗುತ್ತವೆ. ೪೦ ದಿನಕ್ಕೆ ಒಂದು ‘ಮಂಡಲ ಎನ್ನಲಾಗುತ್ತದೆ ಮತ್ತು ಕೆಲವು ಜಪಗಳು ಇತ್ಯಾದಿಗಳನ್ನೂ ೪೦ ದಿನಗಳ ವರೆಗೆ ಮಾಡಲಾಗುತ್ತದೆ. ಭಾಗವತ ಪುರಾಣಗನುಸಾರ ಈ ೪೦ ನವರಾತ್ರಿಗಳಲ್ಲಿ ೪ ನವರಾತ್ರಿ ದೇವಿಯ ಮಹತ್ವವನ್ನು ಹೇಳಲಾಗಿದೆ. ಅದರಲ್ಲಿನ ಶಾರದೀಯ ಮತ್ತು ವಾಸಂತಿಕ ನವರಾತ್ರಿಯ ಮಹತ್ವವು ಅತ್ಯಧಿಕವಾಗಿದೆ ಎಂದು ನಂಬಲಾಗಿದೆ. ಆದ್ದರಿಂದ ‘ಶಕ್ತಿಯ ಉಪಾಸನೆಯನ್ನು ೯ ದಿನಗಳ ವರೆಗೆ ಮಾಡುವುದೇ ಯೋಗ್ಯವಾಗಿದೆ.
೩. ಸತ್ತ್ವ, ರಜ ಮತ್ತು ತಮ ಹೀಗೆ ಶಕ್ತಿಯ ೩ ಗುಣಗಳಿವೆ. ಅವುಗಳನ್ನು ಮೂರುಪಟ್ಟು ಮಾಡಿದಾಗ ೯ ಸಂಖ್ಯೆ ಬರುತ್ತದೆ. ಯಜ್ಞೋಪವೀತದಲ್ಲಿ (ಜನಿವಾರದಲ್ಲಿ) ೩ ದೊಡ್ಡ ದಾರಗಳಿರುತ್ತವೆ ಮತ್ತು ಈ ಮೂರು ದಾರಗಳಲ್ಲಿನ ಪ್ರತಿಯೊಂದು ಎಳೆಯನ್ನು ೩-೩ ಎಳೆಗಳಿಂದ ಮಾಡಲಾಗಿರುತ್ತದೆ. ಅದೇ ರೀತಿ ಪ್ರಕೃತಿ, ಯೋಗ ಮತ್ತು ಮಾಯೆಯ ತ್ರಿವೃತ್ತ ಗುಣಾತ್ಮಕ ರೂಪವು ನವವಿಧವೇ ಆಗುತ್ತದೆ. ಮಹಾಶಕ್ತಿ ದುರ್ಗೆಯ ಉಪಾಸನೆಯಲ್ಲಿ ಅವಳ ಸಂಪೂರ್ಣ ರೂಪದ ಉಪಾಸನೆ ಮಾಡಲು ನವರಾತ್ರಿಯ ‘೯ ದಿನಗಳನ್ನು ನಿಗದಿ ಪಡಿಸಲಾಗಿದೆ.
೪. ಇದೇ ಕಾರಣದಿಂದ ನವರಾತ್ರಿಯಲ್ಲಿ ನಿರಂತರ ದೀಪ ಪ್ರಜ್ವಲನೆ ಮಾಡಲಾಗುತ್ತದೆ. ರಾತ್ರಿಯ ಸಮಯದಲ್ಲಿ ಹರಡಿದ ಅಂಧಕಾರದ ಆವರಣವನ್ನು ೯ ರ ಸಂಖ್ಯೆಯಲ್ಲಿ ನಾಶಗೊಳಿಸಿ ನಾವು ‘ವಿಜಯದ ರೂಪದಲ್ಲಿ ಆತ್ಮದ ‘ವಿಜಯದ ಉತ್ಸವ ವನ್ನು ಆಚರಿಸುತ್ತೇವೆ. – ಶ್ರೀಮತಿ ದುರ್ಗಾ ಚೌಬೆ, ಜಬಲಪುರ
(ಆಧಾರ : ಸನಾಢ್ಯ ಸಂಗಮ ವರ್ಷ ೧೩ ಸಂಚಿಕೆ ೩)