ನವರಾತ್ರಿಯ ಎರಡನೇ ದಿನ

ಬ್ರಹ್ಮಚಾರಿಣಿ

ದಧಾನಾ ಕರಪದ್ಮಾಭ್ಯಾಮ ಕ್ಷಮಾಲಾಕಮಂಡಲೂ |

ದೇವಿ ಪ್ರಸೀದತು ಮಯಿ ಬ್ರಹ್ಮಚಾರಿಣ್ಯನುತ್ತಮಾ ||

ಅರ್ಥ : ಯಾವಳು ತನ್ನ ಎರಡೂ ಕರಕಮಲಗಳಲ್ಲಿ ರುದ್ರಾಕ್ಷಿಯ ಮಾಲೆ ಮತ್ತು ಕಮಂಡಲವನ್ನು ಹಿಡಿದು ಕೊಂಡಿದ್ದಾಳೆಯೋ, ಇಂತಹ ಶ್ರೇಷ್ಠ ದೇವಿ ಬ್ರಹ್ಮಚಾರಿಣಿ ನನ್ನ ಮೇಲೆ ಪ್ರಸನ್ನಳಾಗಲಿ.

ಆಶ್ವಯುಜ ಶುಕ್ಲ ದ್ವಿತೀಯಾವು ನವರಾತ್ರಿಯ ಎರಡನೇಯ ದಿನವಾಗಿದೆ. ಈ ದಿನ ದುರ್ಗೆಯ ಎರಡನೇಯ ರೂಪದ ಅಂದರೆ ಬ್ರಹ್ಮಚಾರಿಣಿ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ನಾರದಮುನಿಯ ಉಪದೇಶದಂತೆ ಅವಳು ಘೋರ ತಪಶ್ಚರ್ಯೆ ಮಾಡಿದಳು; ಆದ್ದರಿಂದ ಅವಳನ್ನು ತಪಶ್ಚಾರಿಣಿ, ಅಂದರೆ ‘ಬ್ರಹ್ಮಚಾರಿಣಿ ಎಂದು ಹೇಳುತ್ತಾರೆ.  ಈ ದೇವಿಯು ಬಲಗೈಯಲ್ಲಿ ಜಪಮಾಲೆ ಮತ್ತು ಎಡಗೈಯಲ್ಲಿ ಕಮಂಡಲನ್ನು ಹಿಡಿದುಕೊಂಡಿದ್ದಾಳೆ. ಇವಳ ಉಪಾಸನೆಯನ್ನು ಮಾಡುವುದರಿಂದ ಮನುಷ್ಯರಲ್ಲಿ ತಪಸ್ಸು, ತ್ಯಾಗ, ವೈರಾಗ್ಯ, ಸದಾಚಾರ ಮತ್ತು ಸಂಯಮ ಈ   ದೈವಿ ಗುಣಗಳು ವೃದ್ಧಿಸುತ್ತವೆ.