೧. ಪದ್ಧತಿ : ದೇವಿಯ ನಾಮಜಪವನ್ನು ಮಾಡುತ್ತಾ ಒಂದೊಂದು ಚಿಟಿಕೆಯಷ್ಟು ಕುಂಕುಮವನ್ನು ದೇವಿಯ ಚರಣಗಳಿಂದ ತಲೆಯವರೆಗೂ ಅರ್ಪಿಸಬೇಕು ಅಥವಾ ಕುಂಕುಮದ ಸ್ನಾನವನ್ನು ಮಾಡಿಸಬೇಕು. ಕೆಲವೆಡೆಗಳಲ್ಲಿ ಚರಣಗಳಿಗೆ ಮಾತ್ರ ಕುಂಕುಮ ಅರ್ಪಿಸಲಾಗುತ್ತದೆ.
೨. ಶಾಸ್ತ್ರ : ಕೆಂಪು ಪ್ರಕಾಶದಿಂದ ಶಕ್ತಿತತ್ತ್ವದ ನಿರ್ಮಿತಿಯಾಗಿದೆ. ಕುಂಕುಮದಲ್ಲಿ ಶಕ್ತಿತತ್ತ್ವವನ್ನು ಆಕರ್ಷಿಸುವ ಕ್ಷಮತೆಯು ಹೆಚ್ಚಿರುತ್ತದೆ, ಆದುದರಿಂದ ದೇವಿಯ ಮೂರ್ತಿಗೆ ಕುಂಕುಮಾರ್ಚನೆ ಮಾಡಿದರೆ ದೇವಿಯು ಜಾಗೃತಳಾಗುತ್ತಾಳೆ. ಜಾಗೃತಮೂರ್ತಿಯಲ್ಲಿನ ಶಕ್ತಿತತ್ತ್ವವು ಕುಂಕುಮದಲ್ಲಿ ಬರುತ್ತದೆ. ಆ ಕುಂಕುಮ ಹಚ್ಚಿಕೊಂಡರೆ ಅದರಲ್ಲಿನ ದೇವಿಯ ಶಕ್ತಿಯು ನಮಗೆ ಸಿಗುತ್ತದೆ.
(ಆಧಾರ : ಸನಾತನದ ಕಿರುಗ್ರಂಥ ‘ದೇವಿಪೂಜೆಯ ಶಾಸ್ತ್ರ)