ನವರಾತ್ರಿಯ ನಾಲ್ಕನೆ ದಿನ

ಕೂಷ್ಮಾಂಡಾ

ಸುರಾಸಮ್ಪೂರ್ಣ ಕಲಶಂ ರುಧಿರಾ ಪ್ಲುಮೇವ ಚ |

ದಧಾನಾ ಹಸ್ತಪದ್ಮಾಭ್ಯಾಂ ಕೂಷ್ಮಾಂಡಾ ಶುಭದಾಸ್ತು ಮೆ ||

ಅರ್ಥ : ಮದಿರೆಯಿಂದ ತುಂಬಿರುವ ಮತ್ತು ರಕ್ತದಿಂದ ಒದ್ದೆಯಾದ ಕಲಶವನ್ನು ಯಾವ ಭಗವತಿದೇವಿಯು ತನ್ನ ಎರಡೂ ಕರಕಮಲಗಳಲ್ಲಿ ಹಿಡಿದುಕೊಂಡಿರುವಳೋ, ಅಂತಹ ಶ್ರೀ ಕೂಷ್ಮಾಂಡಾಮಾತೆಯು ನನಗೆ ಕಲ್ಯಾಣ ಮಾಡಲಿ.

ಆಶ್ವಯುಜ ಶುಕ್ಲ ಚತುರ್ಥಿಯು ನವರಾತ್ರಿಯ ನಾಲ್ಕನೇ ದಿನವಾಗಿದೆ. ಈ ದಿನ ದುರ್ಗೆಯ ನಾಲ್ಕನೇಯ ರೂಪದ ಅಂದರೆ ಕೂಷ್ಮಾಂಡಾ ದೇವಿಯ ಉಪಾಸನೆಯನ್ನು ಮಾಡಲಾಗುತ್ತದೆ. ಇವಳ ಉಪಾಸನೆಯಿಂದ ಎಲ್ಲ ರೀತಿಯ ರೋಗಗಳು ನಾಶವಾಗುತ್ತವೆ ಎಂದು ತಿಳಿಯಲಾಗುತ್ತದೆ. ಅವಳು ತನ್ನ ಮಂದಹಾಸದಿಂದ ಬ್ರಹ್ಮಾಂಡವನ್ನು ಉತ್ಪನ್ನ ಮಾಡುತ್ತಾಳೆ; ಆದ್ದರಿಂದ ಅವಳಿಗೆ ‘ಕೂಷ್ಮಾಂಡಾ ಎಂದು ಹೇಳುತ್ತಾರೆ. ಈ ದೇವಿಯು ಅಷ್ಟಭುಜಧಾರಿಣಿಯಾಗಿದ್ದಾಳೆ. ಈ ದೇವಿಯು ತನ್ನ ಕೈಯಲ್ಲಿ ಕಮಂಡಲ, ಬಿಲ್ಲು-ಬಾಣ, ಕಮಲ,ಅಮೃತ ಕಲಶ, ಚಕ್ರ, ಗದೆಯನ್ನು ಹಿಡಿದುಕೊಂಡಿದ್ದು, ಸಿದ್ಧಿ  ಮತ್ತು ನಿಧಿಯನ್ನು ಕರುಣಿಸುವ ಮಾಲೆಯನ್ನು ಧರಿಸಿದ್ದಾಳೆ.