ನವ ದೆಹಲಿ – ನೀವು ದೇಶದ ಯಾವುದೇ ಭಾಗವನ್ನು ಪಾಕಿಸ್ತಾನ ಹೇಳಲು ಸಾಧ್ಯವಿಲ್ಲ. ಅದು ದೇಶದ ಐಕ್ಯತೆಯ ಮೂಲಭೂತ ತತ್ವದ ವಿರುದ್ಧವಾಗಿದೆ, ಎಂದು ನ್ಯಾಯಾಧೀಶ ಧನಂಜಯ ಚಂದ್ರಚೂಡ್ ಇವರು ನ್ಯಾಯಮೂರ್ತಿಗಳಿಗೆ ಆದೇಶ ನೀಡಿದ್ದಾರೆ. ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ವಿ. ಶ್ರೀಶಾನಂದ ಇವರು ಒಂದು ಪ್ರಕರಣದ ವಿಚಾರಣೆಯ ವೇಳೆ ಬೆಂಗಳೂರಿನ ಮುಸಲ್ಮಾನ ಬಹುಸಂಖ್ಯಾತ ಪ್ರದೇಶ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಹೇಳಿದ್ದರು. ಇದರ ಕುರಿತು ಸರ್ವೋಚ್ಚ ನ್ಯಾಯಾಲಯವು ಸ್ವತಃ ಗಮನ ಹರಿಸಿ ಅದರ ಬಗ್ಗೆ ವಿಚಾರಣೆ ನಡೆಸಿದೆ. ಆ ಸಮಯದಲ್ಲಿ ನ್ಯಾಯಾಧೀಶ ಚಂದ್ರಚೂಡ ಇವರು ಮೇಲಿನ ಆದೇಶ ನೀಡಿದ್ದಾರೆ. ಈ ಪ್ರಕರಣದಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಇವರು ಸರ್ವೋಚ್ಚ ನ್ಯಾಯಾಲಯದ ಕ್ಷಮೆಯಾಚಿಸಿದ ನಂತರ ಈ ವಿಚಾರಣೆ ನಿಲ್ಲಿಸಲಾಯಿತು. ಹಾಗೂ ಶ್ರೀಶಾನಂದ ಇವರ ಹೇಳಿಕೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರವಾದ ನಂತರ ಉಚ್ಚ ನ್ಯಾಯಾಲಯದ ಕಾರ್ಯಕಲಾಪದ ನೇರ ಪ್ರಸಾರ ನಿಲ್ಲಿಸಲಾಗಿತ್ತು. ಈಗ ಅದು ಕೂಡ ಆರಂಭಿಸಲು ನ್ಯಾಯಾಲಯವು ಅನುಮತಿ ನೀಡಿದೆ.
ನ್ಯಾಯಾಧೀಶರು,
೧. ಬೇಜವಾಬ್ದಾರಿತನದಿಂದ ನೀಡಿರುವ ಟಿಪ್ಪಣಿ ಯಾವುದಾದರೂ ವ್ಯಕ್ತಿಯ ತಾರತಮ್ಯದ ವಿಚಾರ ಪ್ರಕಟವಾಗುತ್ತದೆ, ವಿಶೇಷವಾಗಿ ಯಾವಾಗ ಅದು ವಿಶಿಷ್ಟ ಲಿಂಗ ಅಥವಾ ಜನಾಂಗದ ಕುರಿತು ಮಾಡಲಾಗುತ್ತದೆ. ವಿಚಾರಣೆಯ ವೇಳೆ ನ್ಯಾಯಾಧೀಶರು ಯಾವುದೇ ಜನಾಂಗದ ವಿರುದ್ಧ ಅಥವಾ ಅದಕ್ಕೆ ಹಾನಿಕಾರಕವಾಗಿರುವ ಟಿಪ್ಪಣಿಗಳನ್ನು ಮಾಡುವುದನ್ನು ತಪ್ಪಿಸಬೇಕು.
೨. ಜನಾಂಗ ಮತ್ತು ಲಿಂಗ ಇದರ ಕುರಿತು ಮಾಡಿರುವ ಟಿಪ್ಪಣಿಯ ಬಗ್ಗೆ ನಾವು ಬಹಳ ಆತಂಕ ಪಟ್ಟಿದ್ದೇವೆ. ಇಂತಹ ಟಿಪ್ಪಣಿಗಳು ನಕಾರಾತ್ಮಕ ಪ್ರತಿಮೆ ರೂಪಿಸುತ್ತದೆ. ಇದು ನ್ಯಾಯಾಲಯ ಮತ್ತು ಸಂಪೂರ್ಣ ನ್ಯಾಯ ವ್ಯವಸ್ಥೆಯ ಮೇಲೆ ಕೂಡ ಪರಿಣಾಮ ಬೀರುತ್ತದೆ.
೩. ಎಲೆಕ್ಟ್ರಾನಿಕ್ ಯುಗದಲ್ಲಿ ನ್ಯಾಯಾಧೀಶ ಮತ್ತು ನ್ಯಾಯವಾದಿಗಳ ಯೋಗ್ಯ ಸಂವಾದ ನಡೆಸಬೇಕು ಮತ್ತು ಈ ಯುಗದ ಪ್ರಕಾರ ಅವರ ವರ್ತನೆ ಹೊಂದಿಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನು ಓದಿರಿ – ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಹೇಳಿದ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ! |