೧. ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಬಗ್ಗೆ ‘ಗುರು’ ಎಂಬ ಭಾವವನ್ನು ಇಡುವುದರಲ್ಲಿ ಕಡಿಮೆ ಬೀಳುವುದು
‘ಸಪ್ತರ್ಷಿಗಳು ೨೦೧೯ ರಲ್ಲಿ ಶ್ರೀಸತ್ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಹಾಗೂ ಶ್ರೀಚಿತ್ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳು ಎಂದು ಘೋಷಿಸಿದರು. ಈ ಹಿಂದೆ ಇಬ್ಬರ ಬಗ್ಗೆಯೂ ನನ್ನ ಮನಸ್ಸಿನಲ್ಲಿ ಸದ್ಗುರುಗಳು ಎಂಬ ಭಾವವಿತ್ತು. ಆದರೆ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬಗ್ಗೆ ನನ್ನಲ್ಲಿ ಇರುವಂತೆ ‘ಇವರು ನನ್ನ ಗುರುಗಳಿದ್ದಾರೆ’ ಎಂಬ ಭಾವವನ್ನಿಡಲು ನಾನು ಕಡಿಮೆ ಬೀಳುತ್ತಿದ್ದೆನು. ‘ನನಗೆ ಆಗಾಗ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರ ಭೇಟಿಯಾಗುತ್ತಿದ್ದರೂ ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ‘ಗುರುಗಳು’ ಎಂಬ ಭಾವ ಏಕೆ ನಿರ್ಮಾಣವಾಗುತ್ತಿಲ್ಲ ?’ ಎಂಬಂತಹ ವಿಚಾರಗಳಿಂದಾಗಿ ನನಗೆ ಆಗಾಗ ‘ನಾನು ತಪ್ಪು ಮಾಡುತ್ತಿದ್ದೇನೆ’ ಎಂದು ಅನಿಸಿ ಬೇಸರವಾಗುತ್ತಿತ್ತು. ಅದಕ್ಕಾಗಿ ನನಗೆ ‘ವಿಭಿನ್ನ ಪ್ರಯತ್ನಗಳನ್ನು ಮಾಡಬೇಕಿದೆ’ ಎಂಬುದರ ಅರಿವಾಯಿತು.
೨. ಮೊಬೈಲ್ನ ‘ವಾಲಪೇಪರ’ ಎಂದು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಛಾಯಾಚಿತ್ರವನ್ನು ಹಾಕುವುದು ಮತ್ತು ಕೆಲವು ದಿನಗಳ ನಂತರ ಅವರ ಬಗ್ಗೆ ನನ್ನ ಭಾವವು ಮೊದಲಿಗಿಂತಲೂ ಹೆಚ್ಚಾಗಿರುವುದು ಗಮನಕ್ಕೆ ಬರುವುದು
ನನ್ನ ಮೊಬೈಲ್ನಲ್ಲಿ ‘ವಾಲಪೇಪರ’ (ಮೊಬೈಲನ್ನು ಆರಂಭಿಸಿದಾಗ ಮೊದಲಿಗೆ ಕಾಣುವ ಚಿತ್ರ) ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಛಾಯಾಚಿತ್ರ ಇರುತ್ತಿತ್ತು. ಆ ಜಾಗದಲ್ಲಿ ನಾನು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಛಾಯಾಚಿತ್ರವನ್ನು ವಾಲಪೇಪರ ಎಂದು ಹಾಕಿದೆನು. ನಾನು ಪ್ರತಿಬಾರಿ ಮೊಬೈಲನ್ನು ನೋಡಿದಾಗ ನನಗೆ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳರವರ ಛಾಯಾಚಿತ್ರವು ಕಾಣಿಸುವುದರಿಂದ ತನ್ನಷ್ಟಕ್ಕೆ ತಾನೇ ಸತತವಾಗಿ ಅವರ ಸ್ಮರಣೆಯಾಗಿ ಅವರ ಬಗ್ಗೆ ನನ್ನ ಶ್ರದ್ಧೆಯು ಹೆಚ್ಚು ದೃಢವಾಯಿತು. ಕೆಲವೇ ದಿನಗಳಲ್ಲಿ ‘ನನ್ನಲ್ಲಿ ಅವರ ಬಗ್ಗೆ ಇರುವ ಭಾವವು ಮೊದಲಿಗಿಂತಲೂ ಹೆಚ್ಚಾಗಿದೆ’ ಎಂಬುದು ನನ್ನ ಗಮನಕ್ಕೆ ಬಂದಿತು.
೩. ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಹಾಗೂ ಶ್ರೀಚಿತ್ಶಕ್ತಿ (ಸೌ.) ಗಾಡಗೀಳ ಇವರಿಗೆ ಪ್ರದಾನಿಸಿರುವ ಉತ್ತರಾಧಿಕಾರಿ ಪತ್ರದಲ್ಲಿನ ವಾಕ್ಯವು ಅಂತರ್ಮನಕ್ಕೆ ಹೋಗುವುದು !
೧೧.೫.೨೦೨೩ ರಂದು ಗೋವಾದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಬ್ರಹ್ಮೋತ್ಸವ ಮಹೋತ್ಸವವು ನೆರವೇರಿತು. ಈ ದಿವ್ಯ ಬ್ರಹ್ಮೋತ್ಸವದಲ್ಲಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಹಸ್ತಾಕ್ಷರದಲ್ಲಿ ಲೋಹದ ಹಾಳೆಯ ಮೇಲೆ ಕೆತ್ತಲಾದ ‘ಉತ್ತರಾಧಿಕಾರಿ ಪತ್ರ’ವನ್ನು ಶ್ರೀಸತ್ಶಕ್ತಿ (ಸೌ.) ಸಿಂಗಬಾಳ ಹಾಗೂ ಶ್ರೀಚಿತ್ಶಕ್ತಿ (ಸೌ.) ಗಾಡಗೀಳರಿಗೆ ಪ್ರದಾನಿಸಲಾಯಿತು. ಆ ಪತ್ರದಲ್ಲಿ ‘ಶ್ರೀಸತ್ಶಕ್ತಿ ಹಾಗೂ ಶ್ರೀಚಿತ್ಶಕ್ತಿ’ಯವರ ಪ್ರತಿಯೊಂದು ಶಬ್ದವೂ ನನ್ನ ಶಬ್ದವಾಗಿದೆ’, ಎಂಬ ವಾಕ್ಯವನ್ನು ಬರೆಯಲಾಗಿದೆ. ನನಗೆ ‘ಈ ವಾಕ್ಯವು ಅಂತರ್ಮನಕ್ಕೆ ಹೋಯಿತು’ ಎಂಬುದರ ಅರಿವಾಯಿತು. ಈ ಕ್ಷಣದ ನಂತರ ನನಗೆ ಪುನಃ ಎಂದಿಗೂ ಮೇಲಿನ ವಿಚಾರ ಬರಲಿಲ್ಲ.
೪. ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಉತ್ತರಾಧಿಕಾರಿ ಪತ್ರದಲ್ಲಿದ್ದ ‘ಹೇಗೆ ವೇದಗಳು ಚಿರಂತನವಾಗಿವೆಯೋ ಹಾಗೆ ಈ ನನ್ನ ಶಬ್ದಗಳೂ ಚಿರಂತನವಾಗಿವೆ’, ಎಂಬ ವಾಕ್ಯವು ಶ್ರೀಸತ್ಶಕ್ತಿ (ಸೌ.) ಸಿಂಗಬಾಳರ ಬಗ್ಗೆ ‘ಗುರು’ ಎಂಬ ಭಾವವನ್ನು ನಿರ್ಮಿಸುವುದು
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಉತ್ತರಾಧಿಕಾರಿ ಪತ್ರದಲ್ಲಿ ‘ವೇದಗಳಂತೆಯೇ ನನ್ನ ಶಬ್ದಗಳೂ ಚಿರಂತನವಾಗಿವೆ’ ಎಂಬ ವಾಕ್ಯವನ್ನೂ ಬರೆದಿದ್ದರು. ಶ್ರೀಗುರುಗಳು ತಮ್ಮ ಒಂದು ವಾಕ್ಯದಿಂದ ನನ್ನ ಮನಸ್ಸಿನಲ್ಲಿ ಶ್ರೀಚಿತ್ಶಕ್ತಿ (ಸೌ.) ಸಿಂಗಬಾಳರ ಬಗ್ಗೆ ‘ಗುರು’ ಎಂಬ ಭಾವವನ್ನು ನಿರ್ಮಾಣ ಮಾಡಿತು. ಗುರುಗಳ ಶಬ್ದಗಳು ಹೇಗೆ ಚಿರಂತನವಾಗಿವೆಯೋ, ಹಾಗೆಯೇ, ನನ್ನ ಶಬ್ದಗಳೂ ಚಿರಂತನವಾಗಿವೆ ಎಂಬ ಶ್ರೀಗುರುಗಳ ಒಂದು ವಾಕ್ಯದಿಂದ ನನ್ನ ಮನಸ್ಸಿನಲ್ಲಿ ಶ್ರೀಚಿತ್ಶಕ್ತಿ (ಸೌ.) ಸಿಂಗಬಾಳರ ಬಗ್ಗೆ ಗುರು ಎಂದು ಭಾವ ನಿರ್ಮಾಣ ಮಾಡಿತು.ಗುರುಗಳ ಶಬ್ದಗಳು ಹೇಗೆ ಚಿರಂತನ ಆಗಿವೆಯೋ ಹಾಗೆ ಅವು ಸಾಧಕರ ಪ್ರಗತಿಯಲ್ಲಿನ ಎಲ್ಲ ರೀತಿಯ ಅಡಚಣೆಗಳನ್ನು ದೂರಗೊಳಿಸುತ್ತದೆ’, ಎಂಬುದನ್ನು ನಾನು ಅನುಭವಿಸಿದೆನು. ಇದಕ್ಕಾಗಿ ಸಚ್ಚಿದಾನಂದ ಪರಬ್ರಹ್ಮ ಗುರುದೇವರ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆಗಳು !’
– ಶ್ರೀ. ಸಂದೀಪ ಶಿಂದೆ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೨.೨೦೨೪)