೨೦೦೭ ನೇ ವರ್ಷ ದಿಂದ ಶಾರೀರಿಕ ಅನಾರೋಗ್ಯ ಮತ್ತು ಆಧ್ಯಾತ್ಮಿಕ ತೊಂದರೆಯಿಂದ ನನ್ನ ಪ್ರಾಣಶಕ್ತಿ ಕಡಿಮೆಯಾಗತೊಡಗಿತು. ಆದುದರಿಂದ ನನಗೆ ಕೋಣೆಯಿಂದ ಹೊರಬರಲೂ ಅಸಾಧ್ಯವಾಯಿತು. ಆಗ ‘ಸಾಧಕರ ಸಾಧನೆಯ ಅಡಚಣೆಯನ್ನು ಯಾರು ಪರಿಹರಿಸುವರು ?’, ಎಂಬ ಪ್ರಶ್ನೆ ಮನಸ್ಸಿನಲ್ಲಿ ಬಂತು ಮತ್ತು ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರು ಈ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದರು.
ಅಧ್ಯಾತ್ಮದಲ್ಲಿ ‘ಆಜ್ಞಾಪಾಲನೆ’ ಈ ಗುಣ ಅತ್ಯಂತ ಮಹತ್ವದ್ದಾಗಿದ್ದು ಅದು ಎಲ್ಲ ಗುಣಗಳ ರಾಜ ನಾಗಿದೆ. ಶ್ರೀಸತ್ಶಕ್ತಿ (ಸೌ.) ಬಿಂದಾ ಇವರ ವೈಶಿಷ್ಟ್ಯ ವೆಂದರೆ ಅವರಲ್ಲಿ ‘ಆಜ್ಞಾಪಾಲನೆ’ ಈ ಗುಣ ತುಂಬಿದ್ದು ‘ತಳಮಳ’, ‘ಸಾಧಕರ ಮೇಲಿನ ನಿರಪೇಕ್ಷ ಪ್ರೀತಿ, ಕಾರ್ಯಕೌಶಲ್ಯ ಮತ್ತು ಈಶ್ವರನೊಂದಿಗೆ ಅನುಸಂಧಾನ’ ಈ ಗುಣಗಳ ಮೂಲಕ ಅವರು ಸಾಧಕರ ಸಾಧನೆಯ ಜವಾಬ್ದಾರಿಯನ್ನು ಲೀಲಾಜಾಲವಾಗಿ ನಿರ್ವಹಿಸಿದರು ಮತ್ತು ಇಂದಿಗೂ ನಿರ್ವಹಿಸುತ್ತಿದ್ದಾರೆ. ಅಡಚಣೆಗಳನ್ನು ಪರಿಹರಿಸುವಾಗ ಅವರು ಸ್ಥೂಲದಲ್ಲಿ ನಿಖರವಾಗಿ ದೃಷ್ಟಿಕೋನವನ್ನು ನೀಡಿ ಸಾಧಕರಿಗೆ ಆಧಾರವನ್ನೂ ಕೊಡುತ್ತಿದ್ದಾರೆ; ಅವರ ಸಂಕಲ್ಪ ಮತ್ತು ತಳಮಳ ಇವುಗಳಿಂದ ಸಾಧಕನಿಗೆ ಸೂಕ್ಷ್ಮದಿಂದಲೂ ಅಡಚಣೆ ದೂರವಾಗಿ ಮುಂದಿನ ದಿಶೆ ಸಿಕ್ಕಿರುವುದರ ಅನುಭೂತಿ ಬರುತ್ತದೆ ಅಂದರೆ ಈಗ ಅವರ ಕಾರ್ಯ ಸ್ಥೂಲ ಮತ್ತು ಸೂಕ್ಷ್ಮ ಸ್ತರಗಳಲ್ಲಿ ನಡೆಯುತ್ತಿದೆ. ‘ಪ್ರೀತಿ, ನೇತೃತ್ವ, ಆಯೋಜನಾಕೌಶಲ್ಯ ಮತ್ತು ಸಾಧಕರ ಆಧ್ಯಾತ್ಮಿಕ ಉನ್ನತಿಯಾಗಬೇಕು’, ಎಂಬ ಅಖಂಡ ತಳಮಳ ಇರುವುದರಿಂದ ಅವರು ಸಾಧಕರನ್ನು ಶೀಘ್ರದಲ್ಲಿ ರೂಪಿಸುತ್ತಿದ್ದಾರೆ.
ಕಳೆದ ೫ ವರ್ಷಗಳಿಂದ ಅವರು ಸಾಧಕರಿಗಾಗಿ ಭಕ್ತಿಸತ್ಸಂಗ ತೆಗೆದುಕೊಳ್ಳುತ್ತಿದ್ದಾರೆ. ಅವರ ಚೈತನ್ಯಮಯ ಸತ್ಸಂಗದಿಂದ ಅನೇಕ ಸಾಧಕರಿಗೆ ಲಾಭ ವಾಗುತ್ತಿದೆ, ಅವರು ಎಲ್ಲ ಸಾಧಕ ಮತ್ತು ಸಂತರೆದುರು ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯ ಆದರ್ಶವಾಗಿದ್ದಾರೆ. ಹೀಗೆ ಸರ್ವಾಂಗದಿಂದ ಪರಿಪೂರ್ಣರಾದ ಶ್ರೀಸತ್ಶಕ್ತಿ (ಸೌ.) ಬಿಂದಾ ಸಿಂಗಬಾಳ ಇವರಿಗೆ ಹುಟ್ಟುಹಬ್ಬದ ನಿಮಿತ್ತ ಅನೇಕ, ಅನೇಕ ಶುಭಾಶಯಗಳು !’
– ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ (೮.೯.೨೦೨೪)