Eid Milad Police Guidelines: ಸೆಪ್ಟೆಂಬರ್ 16 ರಂದು ನಡೆಯುವ ಈದ್ ಮಿಲಾದ್ ಮೆರವಣಿಗೆಯಲ್ಲಿ ಹರಿತವಾದ ವಸ್ತುಗಳನ್ನು ತರದಂತೆ ಮುಸ್ಲಿಮರಿಗೆ ಆದೇಶ !

ಬೆಂಗಳೂರು ಪೊಲೀಸರಿಂದ ಮಾರ್ಗಸೂಚಿ ಜಾರಿ

ಬೆಂಗಳೂರು ಪೊಲೀಸ್ ಆಯುಕ್ತ

ಬೆಂಗಳೂರು – ನಾಗಮಂಗಲದಲ್ಲಿ ಗಣೇಶ ವಿಸರ್ಜನೆಯ ಮೆರವಣಿಗೆ ಮೇಲೆ ನಡೆದ ದಾಳಿಯ ಹಿನ್ನಲೆಯಲ್ಲಿ ಮುಸ್ಲಿಮರಿಗೆ ‘ಈದ್ ಮಿಲಾದ್’ ಆಚರಿಸಲು ಬೆಂಗಳೂರು ಪೊಲೀಸರು ಮಾರ್ಗಸೂಚಿ ಹೊರಡಿಸಿದ್ದಾರೆ. ಸಪ್ಟೆಂಬರ 16ರಂದು ನಡೆಯುವ ಈ ಮೆರವಣಿಗೆಯಲ್ಲಿ ಹರಿತವಾದ ವಸ್ತುಗಳನ್ನು ತರಬಾರದು ಎಂದು ಪೊಲೀಸರು ತಿಳಿಸಿದ್ದಾರೆ. ‘ಮಾರ್ಗಸೂಚಿ ಪಾಲಿಸದಿದ್ದಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದೂ ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಹೊರಡಿಸಿದ ಮಾರ್ಗಸೂಚಿಗಳು

1. ಮೆರವಣಿಗೆಯಲ್ಲಿ ಭಾಗವಹಿಸುವವರ ಬಳಿ ಯಾವುದೇ ಹರಿತವಾದ ವಸ್ತುಗಳನ್ನು ಇರಬಾರದು.

2. ಯಾವುದೇ ಕಾರಣಕ್ಕೂ ಮೆರವಣಿಗೆ ವೇಳೆ ‘ಡಿ.ಜೆ’.ಯ (ದೊಡ್ಡ ಧ್ವನಿ ವರ್ಧಕ) ಬಳಸಬಾರದು.

3. ಪ್ರದರ್ಶನದಲ್ಲಿ ಉತ್ತೇಜಿಸುವ ಅಂಶಗಳು ಇರಬಾರದು.

4. ಯಾವುದೇ ಪ್ರಾರ್ಥನಾ ಸ್ಥಳದ (ದೇವಾಲಯ/ಚರ್ಚ್) ಮುಂದೆ ಘೋಷಣೆ ಕೂಗಬಾರದು. (ಇದರಿಂದ ಹಿಂದೂಗಳನ್ನು ಹಿಂಸಕರೆಂದು ನಿರ್ಧರಿಸುವ ರಹಸ್ಯ ಪ್ರಯತ್ನವನ್ನು ಬೆಂಗಳೂರು ಪೋಲೀಸರು ಮಾಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಹಿಂದೂಗಳು ದೇವಸ್ಥಾನದ ಮುಂದೆ ಮುಸ್ಲಿಂಮರ ಮೆರವಣಿಗೆಯನ್ನು ಎಂದಿಗೂ ವಿರೋಧಿಸುವುದಿಲ್ಲ. ಇದಕ್ಕೆ ವಿರುದ್ಧವಾಗಿ, ಭಾರತದಲ್ಲಿ ಎಲ್ಲಿಯಾದರೂ ಮಸೀದಿಯ ಮುಂದೆ ಹಿಂದೂ ಧಾರ್ಮಿಕ ಮೆರವಣಿಗೆ ಸಾಗಿದರೆ ಕಲ್ಲು ತೂರಾಟ, ಪೆಟ್ರೋಲ್ ಬಾಂಬ್‌ಗಳು, ಖಡ್ಗ ಇತ್ಯಾದಿಗಳಿಂದ ದಾಳಿ ಮಾಡುತ್ತಾರೆ ! – ಸಂಪಾದಕರು)

5. ಮೆರವಣಿಗೆಯಲ್ಲಿ ಆಯೋಜಕರು ಯಾವುದೇ ವಿದ್ಯುತ್ ಸಂಪರ್ಕ ಸಮಸ್ಯೆಗೆ ಅವಕಾಶ ನೀಡಬಾರದು.

6. ಮೆರವಣಿಗೆಯಲ್ಲಿ ಆಯೋಜಕರು ಅಗ್ನಿ ಶಾಮಕ ವಸ್ತುಗಳನ್ನು ಹೊಂದಿರಬೇಕು.

7. ರಾತ್ರಿ ಮೆರವಣಿಗೆಯ ನಂತರ ಬೈಕ್‌ನಲ್ಲಿ ಇಬ್ಬರಿಗಿಂತ ಹೆಚ್ಚು ವ್ಯಕ್ತಿಗಳೊಂದಿಗೆ ಓಡಿಸಬಾರದು. (ಇದರರ್ಥ ಇಂತಹ ಮೆರವಣಿಗೆಗಳಲ್ಲಿ ಮುಸ್ಲಿಮರು ಎಲ್ಲಾ ಸಂಚಾರ ನಿಯಮಗಳನ್ನು ಘಗಾಳಿಗೆ ತೂರುತ್ತಾರೆ ಎನ್ನುವುದು ಸ್ಪಷ್ಟವಾಗಿದೆ! – ಸಂಪಾದಕರು)

8. ಹಿರಿಯ ನಾಗರಿಕರು, ಶಾಲಾ ವಿದ್ಯಾರ್ಥಿಗಳು ಮತ್ತು ಇತರರಿಗೆ ತೊಂದರೆ ಆಗಬಾರದು; ಅದಕ್ಕಾಗಿ ಬೆಳಗ್ಗೆ 6 ರಿಂದ ರಾತ್ರಿ 10 ರವರೆಗೆ ಮಾತ್ರ ಧ್ವನಿವರ್ಧಕಗಳನ್ನು ಬಳಸಬೇಕು.

9. ಧ್ವನಿವರ್ಧಕಗಳ ಬಳಕೆಗೆ ಸ್ಥಳೀಯ ಪೊಲೀಸರ ಅನುಮತಿ ಪಡೆಯುವುದು ಕಡ್ಡಾಯ.

ಸಂಪಾದಕೀಯ ನಿಲಿವು

ಇವುಗಳಲ್ಲಿ ಎಷ್ಟು ಸೂಚನೆಗಳನ್ನು ಅನುಸರಿಸಲಾಗುತ್ತದೆ ಎಂಬುದು ಪ್ರಶ್ನೆಯೇ ಆಗಿದೆ. ಈದ್ ಮಿಲಾದ್ ಮೆರವಣಿಗೆಯಲ್ಲಿ ಹರಿತವಾದ ವಸ್ತುಗಳನ್ನು ತರದಂತೆ ಸೂಚನೆ ನೀಡಬೇಕಾಗುತ್ತದೆ. ಇದರಲ್ಲಿಯೇ ಎಲ್ಲವೂ ಇದೆ. ಇದಲ್ಲದೇ ಹಿಂದೂಗಳ ಹಬ್ಬ ಹರಿದಿನಗಳಲ್ಲಿಯೂ ಮತಾಂಧ ಮುಸಲ್ಮಾನರು ಖಡ್ಗದಂತಹ ಹರಿತವಾದ ವಸ್ತುಗಳನ್ನು ಇಟ್ಟುಕೊಳ್ಳುತ್ತಾರೆ, ಇದನ್ನು ಹೇಗೆ ಮರೆಯುವುದು ?