Mamata Ready to Resign : ‘ಜನರ ಹಿತಾಸಕ್ತಿಗಾಗಿ ನಾನು ರಾಜೀನಾಮೆ ನೀಡಲು ಸಿದ್ಧ !’ – ಮಮತಾ ಬ್ಯಾನರ್ಜಿ

ಕೋಲಕಾತಾದ ಬಲಾತ್ಕಾರ ಮತ್ತು ಹತ್ಯೆಯ ಪ್ರಕರಣ

ಕೋಲಕಾತಾ – ಆರ್.ಜಿ. ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ನಡೆದ ಬಲಾತ್ಕಾರ-ಹತ್ಯೆಯ ಪ್ರಕರಣದ ಬಗ್ಗೆ ಸದ್ಯಕ್ಕೆ ದೇಶಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಈ ಪ್ರಕರಣದಿಂದ ಬಂಗಾಳದ ಮಮತಾ ಬ್ಯಾನರ್ಜಿ ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಸರಕಾರಿ ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯ ಮೇಲೆ ಬಲಾತ್ಕಾರ ನಂತರ ಹತ್ಯೆಯಂತಹ ಘಟನೆ ನಡೆದಿರುವುದು ಖೇದಕರ ಸಂಗತಿ ಎಂದು ಕಿರಿಯ ವೈದ್ಯರು ಕೆಲಸ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಿದ್ದಾರೆ. ಈ ಪ್ರತಿಭಟನಾಕಾರರ ಜತೆ ಮಾತುಕತೆ ನಡೆಸುವ ಮುಖ್ಯಮಂತ್ರಿಗಳ ಪ್ರಯತ್ನ ವ್ಯರ್ಥವಾಗಿದೆ. ಈ ಹಿನ್ನೆಲೆಯಲ್ಲಿ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಾರ್ವಜನಿಕರ ಕ್ಷಮೆ ಕೇಳಿದ್ದಾರೆ. ಅಲ್ಲದೇ ಜನರ ಹಿತಾಕ್ಕಾಗಿ ರಾಜೀನಾಮೆ ಪತ್ರ ನೀಡಲು ಸಿದ್ಧಳಿರುವುದಾಗಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.

ಪರಿಸ್ಥಿತಿ ನಿಭಾಯಿಸಲು ವಿಫಲರಾದ ಮಮತಾ ಬ್ಯಾನರ್ಜಿ ! – ರಾಜ್ಯಪಾಲರು

ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯದ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ವಿಫಲರಾಗಿದ್ದಾರೆ ಎಂದು ಬಂಗಾಳ ರಾಜ್ಯಪಾಲ ಆನಂದ ಬೋಸ್ ಟೀಕಿಸಿದರು. ರಾಜ್ಯಪಾಲರು ಮಾತನಾಡಿ, ‘ಜನರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫಲರಾಗಿದ್ದಾರೆ. ರಾಜ್ಯಾದ್ಯಂತ ಹಿಂಸಾಚಾರ ಹಬ್ಬಿದೆ. ಶಾಂತ ಬಹುಸಂಖ್ಯೆಯು ಪ್ರಜಾಪ್ರಭುತ್ವದ ಭಾಗವಾಗಿರುತ್ತದೆ; ಆದರೆ ಬಹುಸಂಖ್ಯಾತರ ಬಗ್ಗೆ ಮೌನ ಪ್ರಜಾಪ್ರಭುತ್ವದಲ್ಲಿ ಉದ್ದಿಷ್ಟವಲ್ಲ. ಬಂಗಾಳದ ಜನರ ಬಗ್ಗೆ ನನ್ನ ಸಂತಾಪ ವ್ಯಕ್ತಪಡಿಸಿ, ಮುಖ್ಯಮಂತ್ರಿಗೆ ಸಾಮಾಜಿಕ ಬಹಿಷ್ಕಾರ ಹಾಕುತ್ತೇನೆ’ ಎಂದು ಹೇಳಿದರು.

ಸಂಪಾದಕೀಯ ನಿಲುವು

ತರಬೇತಿ ಮಹಿಳಾ ವೈದ್ಯೆಯ ಹತ್ಯೆ ಮತ್ತು ಬಲಾತ್ಕಾರ ನಡೆಸಿದ ನಂತರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಕರಣವನ್ನು ನಿರ್ವಹಿಸಿದ ರೀತಿ ಅವರ ಅಸಂವೇದನಾಶೀಲತೆ ಮತ್ತು ಜನತಾದ್ರೋಹಿ ತೋರಿಸುತ್ತದೆ. ಈ ಕಾರಣದಿಂದಾಗಿ, ವೈದ್ಯರ ಆಂದೋಲನವು ಕೈ ಮೀರಿದ ನಂತರ, ವಿಷಯವನ್ನು ಇತ್ಯರ್ಥಗೊಳಿಸಲು ಮಮತಾ ಬ್ಯಾನರ್ಜಿ ಅವರು ರಾಜಿನಾಮೆ ನೀಡುವ ನಿಲುವು ತೆಗೆದು ಕೊಳ್ಳುತ್ತಿದ್ದಾರೆ ಎಂದು ಭಾರತೀಯ ನಾಗರಿಕರು ಅರಿತಿದ್ದಾರೆ !