ಸುಪ್ರೀಂ ಕೋರ್ಟ್‌ನಲ್ಲಿ ಮಕ್ಕಳ ಹಕ್ಕು ಆಯೋಗದ ಸ್ಪಷ್ಟನೆ
ನವದೆಹಲಿ – ಉತ್ತಮ ಶಿಕ್ಷಣಕ್ಕಾಗಿ ಮದರಸಾಗಳು ಸೂಕ್ತ ಸ್ಥಳವಲ್ಲ. ಮದರಸಾಗಳು ಮನಸೋಚ್ಛೆಯಂತೆ ವರ್ತಿಸುತ್ತವೆ. ಅವು ಸಾಂವಿಧಾನಿಕ ಆದೇಶ, ಶಿಕ್ಷಣ ಹಕ್ಕು ಕಾಯಿದೆ ಮತ್ತು ಬಾಲಾಪರಾಧಿ ಕಾಯಿದೆ 2015 ಅನ್ನು ಉಲ್ಲಂಘಿಸುತ್ತಿವೆ. ಮದರಸಾವನ್ನು ಶೈಕ್ಷಣಿಕ ಪ್ರಾಧಿಕಾರ ಎಂದು ಪರಿಗಣಿಸಬಾರದು. ಅವು ಕೇವಲ ಪರೀಕ್ಷೆಗಳನ್ನು ನಡೆಸುವ ಸಾಮರ್ಥ್ಯ ಮಾತ್ರ ಹೊಂದಿವೆ. ಮದರಸಾಗಳು ನಡೆಸುವ ಪರೀಕ್ಷೆಯು NCERT ಮತ್ತು SCERT ತಯಾರಿಸಿದ ಪಠ್ಯಕ್ರಮಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿವೆ. ಇದರಿಂದಾಗಿ ಮದರಸಾಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಶಿಕ್ಷಣದ ಹಕ್ಕಿನಿಂದ ವಂಚಿತರಾಗುತ್ತಾರೆ. ಅವರಿಗೆ ಸರಿಯಾದ ಶಿಕ್ಷಣ ಸಿಗುತ್ತಿಲ್ಲ ಎಂದು ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸುಪ್ರೀಂ ಕೋರ್ಟ್‌ನಲ್ಲಿ ಸ್ಪಷ್ಟ ಹೇಳಿಕೆ ನೀಡಿದೆ.
ಮದರಸಾಗಳು ವಿದ್ಯಾರ್ಥಿಗಳ ಶಿಕ್ಷಣದ ಹಕ್ಕನ್ನು ಕಸಿದುಕೊಳ್ಳುತ್ತವೆ
ಉತ್ತರ ಪ್ರದೇಶದ ಮದರಸಾಗಳಿಗೆ ಸಂಬಂಧಿಸಿದ ಅಂಜುಮ್ ಖಾದ್ರಿ ಎಂಬವರು ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ದಾಖಲಿಸಿದ್ದರು. ಮಾರ್ಚ್ 22, 2024 ರಂದು, ಅಲಹಾಬಾದ್ ಹೈಕೋರ್ಟ್ ಉತ್ತರ ಪ್ರದೇಶ ಮದರಸಾ ಶಿಕ್ಷಣ ಮಂಡಳಿ ಕಾಯಿದೆ, 2004ರ ನಿಬಂಧನೆಗಳನ್ನು ರದ್ದುಗೊಳಿಸುವಂತೆ ಆದೇಶಿಸಿತ್ತು. ನಂತರ ಸುಪ್ರೀಂ ಕೋರ್ಟ್ ಅಲಹಾಬಾದ್ ಹೈಕೋರ್ಟ್ ನ ಈ ಆದೇಶಕ್ಕೆ ತಡೆ ಹೇರಿತ್ತು. ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಲಿಖಿತ ವಿವರ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಆದೇಶಿತ್ತು. ಅದರಂತೆ, ಈ ಆಯೋಗವು ಮದರಸಾಗಳಲ್ಲಿನ ಶಿಕ್ಷಣದ ಬಗ್ಗೆ ಲಿಖಿತ ಮಾಹಿತಿ ಸಲ್ಲಿಸಿದೆ.
ಶಿಕ್ಷಣದ ಸಾಂವಿಧಾನಿಕ ಹಕ್ಕಿನ ಉಲ್ಲಂಘನೆ
ಮಕ್ಕಳ ಹಕ್ಕು ಆಯೋಗದ ಪ್ರಕಾರ, ಮದರಸಾಗಳು ಮಕ್ಕಳ ಶಿಕ್ಷಣದ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ. ಅಲ್ಲಿ ಧಾರ್ಮಿಕ ಶಿಕ್ಷಣವನ್ನು ಮಾತ್ರ ನೀಡಲಾಗುತ್ತದೆ. ಮದರಸಾಗಳು ಶಿಕ್ಷಣದ ಮೂಲಭೂತ ಹಕ್ಕು 2009 ಅಥವಾ ಯಾವುದೇ ಇತರ ಅನ್ವಯವಾಗುವ ಕಾನೂನಿನ ಅವಶ್ಯಕತೆಗಳು ಮತ್ತು ನಿಬಂಧನೆಗಳನ್ನು ಅನುಸರಿಸುವುದಿಲ್ಲ. ಸರಿಯಾದ ಶಿಕ್ಷಣ ಪಡೆಯಲು ಮದರಸಾಗಳು ಅಯೋಗ್ಯ ಸ್ಥಳವಾಗಿವೆ. ಶಿಕ್ಷಣ ಹಕ್ಕು ಕಾಯಿದೆಯ ಸೆಕ್ಷನ್ 19, 21, 22, 23, 24, 25 ಮತ್ತು 29 ರ ಉಲ್ಲಂಘನೆ ಮಾಡಿ ವಿದ್ಯಾರ್ಥಿಗಳ ಹಕ್ಕುಗಳನ್ನು ಕಸಿದುಕೊಳ್ಳುತ್ತಾರೆ. ಮದರಸಾಗಳು ಶಿಕ್ಷಣಕ್ಕಾಗಿ ಅತೃಪ್ತಿಕರ ಮತ್ತು ಅಸಮರ್ಪಕ ಮಾದರಿಯಾಗಿದೆ. ಮದರಸಾಗಳಲ್ಲಿ ಸರಿಯಾದ ಪಠ್ಯಕ್ರಮ ಮತ್ತು ಕಾರ್ಯನಿರ್ವಹಣೆಯ ಕೊರತೆಯಿದೆ ಎಂದು ತಿಳಿಸಿದೆ.
ಸಂಪಾದಕೀಯ ನಿಲುವುಸರಕಾರ ಮೊದಲು ಮದರಸಾಗಳಿಗೆ ನೀಡುತ್ತಿರುವ ಅನುದಾನ ನಿಲ್ಲಿಸಿ ಅವುಗಳಿಗೆ ಬೀಗ ಹಾಕಬೇಕು ! |