ಬಾಂಗ್ಲಾದೇಶ ಗೃಹ ಸಚಿವಾಲಯದಿಂದ ಫತ್ವಾ; ನಮಾಜ್‌ಗೆ 5 ನಿಮಿಷ ಇರುವಾಗಲೇ ದೇವಸ್ಥಾನದ ಧ್ವನಿವರ್ಧಕ ಬಂದ್ ಮಾಡಬೇಕಂತೆ !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಗೃಹ ಸಚಿವಾಲಯವು ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಿಗೆ ಸೆಪ್ಟೆಂಬರ್ 10 ರಂದು ಫತ್ವಾ ಹೊರಡಿಸಿದೆ. ‘ಕೆಲವು ದಿನಗಳ ನಂತರ ನಡೆಯಲಿರುವ ಶ್ರೀ ದುರ್ಗಾ ಪೂಜೆಯ ಉತ್ಸವದ ಕಾಲಾವಧಿಯಲ್ಲಿ ಮಸೀದಿಯಲ್ಲಿ ಆಗುವ ಅಜಾನ ಮತ್ತು ನಮಾಜ್‌ನ 5 ನಿಮಿಷ ಮೊದಲು ಶ್ರೀ ದುರ್ಗಾದೇವಿಯ ಪೂಜೆ ಮತ್ತು ಧ್ವನಿವರ್ಧಕವನ್ನು ಬಂದ್‌ ಮಾಡಬೇಕು’, ಎಂದು ಆದೇಶದಲ್ಲಿ ತಿಳಿಸಿದೆ. ಬಾಂಗ್ಲಾದೇಶಿ ಪ್ರಸಾರ ಮಾಧ್ಯಮಗಳು ಈ ಸಂದರ್ಭದಲ್ಲಿ ಸುದ್ದಿಯನ್ನು ಬಿತ್ತರಿಸಿವೆ.

1. ಗೃಹ ಸಲಹೆಗಾರ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಮಹಮ್ಮದ್ ಜಹಾಂಗೀರ್ ಆಲಂ ಚೌಧರಿ ಅವರು ಸಚಿವಾಲಯದಲ್ಲಿ ಬಾಂಗ್ಲಾದೇಶ ಪೂಜಾ ಪುರಸ್ಕಾರ ಉದ್ಯಾಪನ ಮುಖಂಡರನ್ನು ಭೇಟಿ ಮಾಡಿದರು. ಈ ಸಭೆಯ ನಂತರ ಮಹಮ್ಮದ್ ಜಹಾಂಗೀರ್ ಆಲಂ ಚೌಧರಿ ಸುದ್ಧಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ಬಾಂಗ್ಲಾದೇಶದಲ್ಲಿ ಗೃಹ ಸಲಹೆಗಾರರ ಹುದ್ದೆಯು ಸಚಿವ ಸ್ಥಾನಮಾನವನ್ನು ಹೊಂದಿದೆ.

2. ‘ವಿಗ್ರಹ ನಿರ್ಮಾಣದ ಕಾಲಾವಧಿಯಿಂದ ಹಿಂದೂಗಳ ಸುರಕ್ಷತೆ ಬಗ್ಗೆ ಕಾಳಜಿ ವಹಿಸಲಾಗುವುದು. ಪೂಜಾ ಮಂಟಪದಲ್ಲಿ 24 ಗಂಟೆ ಭದ್ರತೆ ಇಡಬೇಕು ಈ ಕುರಿತು ಚರ್ಚಿಸಲಾಗಿದೆ’ ಎಂದು ಆಲಂ ಹೇಳಿದ್ದಾರೆ.

3. ‘ಶ್ರೀ ದುರ್ಗಾ ಪೂಜೆ ಬಾಂಗ್ಲಾದೇಶದ ಹಿಂದೂಗಳ ದೊಡ್ಡ ಹಬ್ಬವಾಗಿದೆ. ಈ ವರ್ಷ ಬಾಂಗ್ಲಾದೇಶದಲ್ಲಿ ಒಟ್ಟು 32 ಸಾವಿರದ 666 ಪೂಜಾ ಮಂಟಪಗಳನ್ನು ನಿರ್ಮಿಸಲಾಗುವುದು. ಢಾಕಾ ದಕ್ಷಿಣ ನಗರ ಮತ್ತು ಉತ್ತರ ಮಹಾನಗರಪಾಲಿಕೆಯಲ್ಲಿ ಕ್ರಮವಾಗಿ 157 ಮತ್ತು 88 ಮಂಟಪಗಳನ್ನು ನಿರ್ಮಿಸಲಾಗುತ್ತದೆ. ಕಳೆದ ವರ್ಷದಲ್ಲಿ 33 ಸಾವಿರದ 431 ಪೂಜಾ ಮಂಟಪಗಳನ್ನು ನಿರ್ಮಿಸಲಾಗಿತ್ತು’ ಎಂದು ಆಲಂ ಹೇಳಿದರು.

ಬಾಂಗ್ಲಾದೇಶಿ ಹಿಂದೂಗಳಲ್ಲಿ ಆಕ್ರೋಶ

ಮಹಮ್ಮದ ಜಹಾಂಗೀರ ಆಲಂ ಚೌಧರಿ ಅವರು ಕಾನೂನು ಮತ್ತು ಸುವ್ಯವಸ್ಥೆಯ ಅಂಶಗಳನ್ನು ಎತ್ತಿ ಹಿಂದೂಗಳ ಧಾರ್ಮಿಕ ಹಕ್ಕುಗಳಿಗೆ ಅಡ್ಡಿಪಡಿಸುವ ಫತ್ವಾವನ್ನು ಹೊರಡಿಸಿದ್ದಾರೆ. ಈ ಆದೇಶವು ತಾಲಿಬಾನಿಯಾಗಿದೆಯೆಂದು ಹಿಂದೂಗಳು ಆಕ್ರೋಶದ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದೆ.

 

ಸಂಪಾದಕೀಯ ನಿಲುವು

ಮುಂದೆ ಬಾಂಗ್ಲಾದೇಶದಲ್ಲಿ ‘ದೇವಸ್ಥಾನಗಳಿಗೆ ಬೀಗ ಹಾಕಿ’, ‘ಪೂಜಾರ್ಚನೆ ನಿಲ್ಲಿಸಿ’ ಮತ್ತು ಮುಂದೆ ‘ಹಿಂದೂಗಳು ಮತಾಂತವಾಗಿ’ ಎಂದು ಫತ್ವಾಗಳನ್ನು ಹೊರಡಿಸಿದರೂ ಆಶ್ಚರ್ಯವಿಲ್ಲ !