ಕೋಲಕಾತಾ: ಬಲತ್ಕಾರ ಮತ್ತು ಹತ್ಯೆಯ ಪ್ರಕರಣ; ಮಮತಾ ಬ್ಯಾನರ್ಜಿ ಕರೆದ ಚರ್ಚೆಗೆ ಡಾಕ್ಟರರು ಗೈರು !

  • ಮುಂದುವರೆದ ಕಿರಿಯ ಡಾಕ್ಟರ್ ರ ಮುಷ್ಕರ !

  • ಚರ್ಚೆಗಾಗಿ ಒಂದುವರೆ ಗಂಟೆ ಕಾದು ಮರಳಿದ ಮಮತಾ !

ಕೊಲಕಾತಾ – ರಾಧಾ ಗೋವಿಂದ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಆಗಸ್ಟ್ ೯ ರಂದು ಓರ್ವ ಪ್ರಶಿಕ್ಷಣಾರ್ಥಿ ಮಹಿಳಾ ಡಾಕ್ಟರ್ ಮೇಲೆ ನಡೆದ ಬಲಾತ್ಕಾರ-ಹತ್ಯೆಯ ಬಳಿಕ ಅಲ್ಲಿನ ಕಿರಿಯ ವೈದ್ಯರ ಮುಷ್ಕರ ೩೨ನೇ ದಿನಕ್ಕೆ ಕಾಲಿಟ್ಟಿದೆ. ಆರೋಗ್ಯ ಇಲಾಖೆಯು ಮುಷ್ಕರ ನಿರತ ವೈದ್ಯರನ್ನು ಸಪ್ಟೆಂಬರ್ ೧೦ ರಂದು ಚರ್ಚೆಗೆ ಆಹ್ವಾನಿಸಿತ್ತು. ಈ ಸಭೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಬಂದಿದ್ದರು. ಆದರೆ ಸುಮಾರು ಒಂದುವರೆ ಗಂಟೆ ಕಾಲ ಮಮತಾ ವೈದ್ಯರ ದಾರಿ ಕಾದರೂ ಯಾರೂ ಬರದೇ ಇದ್ದ ಕಾರಣ ಮಮತಾ ಬ್ಯಾನರ್ಜಿ ಅಲ್ಲಿಂದ ಹೊರಟು ಹೋದರು.

ಚರ್ಚಾ ಸಭೆಗೆ ಬರಲು ನಿರಾಕರಿಸಿದ್ದಕ್ಕೆ ಕಾರಣ ತಿಳಿಸಿದ ವೈದ್ಯರು, ನಾವು (ಆರೋಗ್ಯ ಇಲಾಖೆಯ ಮುಖ್ಯ ಸಚಿವರ) ಯಾರ ರಾಜೀನಾಮೆ ಕೇಳುತ್ತಿದ್ದೇವೊ ಅವರೇ ನಮ್ಮನ್ನು ಸಭೆಗಾಗಿ ಕರೆಯುತ್ತಿರುವುದು ನಮ್ಮ ಪ್ರತಿಭಟನೆಯ ಅವಮಾನವಾಗಿದೆ.

ಸರ್ವೋಚ್ಚ ನ್ಯಾಯಾಲಯದ ಆದೇಶದ ನಂತರವೂ ಮುಂದುವರೆದ ವೈದ್ಯರ ಪ್ರತಿಭಟನೆ!

ಸಪ್ಟೆಂಬರ್ ೧೦ ರಿಂದ ಕೆಲಸಕ್ಕೆ ಹಾಜರಾಗುವಂತೆ ಸರ್ವೋಚ್ಚ ನ್ಯಾಯಾಲಯವು ಆದೇಶ ನೀಡಿದ್ದರೂ ಸಹ ಈ ಪ್ರತಿಭಟನೆಯನ್ನು ವೈದ್ಯರು ಮುಂದುವರೆಸಿದ್ದಾರೆ. ವೈದ್ಯರು ರಾತ್ರಿ ಇಡೀ ನಡೆದು ಅಲ್ಲಿನ ಆರೋಗ್ಯ ಭವನದವರೆಗೆ ಆಂದೋಲನಾ ಮೆರವಣಿಗೆ ನಡೆಸಿದರು. ಈ ಆಂದೋಲನದಲ್ಲಿ ಸಂತ್ರಸ್ತೆಯ ತಾಯಿ ತಂದೆ ಕೂಡ ಸಹಭಾಗಿಯಾಗಿದ್ದರು. ಸಂತ್ರಸ್ತೆಯ ತಾಯಿ ಪ್ರತಿಕ್ರಿಯೆ ನೀಡಿ, ನನ್ನ ಸಾವಿರಾರು ಮಕ್ಕಳು ರಸ್ತೆಗಿಳಿದಿದ್ದಾರೆ ಆದ್ದರಿಂದ ನನಗೆ ಮನೆಯಲ್ಲಿರಲು ಸಾಧ್ಯವಾಗಲಿಲ್ಲ ಎಂದರು.

ಹತ್ಯೆಯ ಪ್ರಕಾರಣದ ಕುರಿತು ಮಾತನಾಡದಿರಲು ಸಚಿವರಿಗೆ ತಾಕೀತು !

ಮೂಲಗಳಿಂದ ತಿಳಿದಿರುವ ಮಾಹಿತಿಯ ಪ್ರಕಾರ ಕೊಲಕಾತಾದಲ್ಲಿನ ಬಲತ್ಕಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಿಟ್ಟು ಬೇರೆ ಯಾವ ಅಧಿಕಾರಿಯೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ವ್ಯಕ್ತಪಡಿಸಬಾರದೆಂದು ಸಚಿವರಿಗೆ ರಾಜ್ಯ ಸಚಿವ ಸಂಪುಟದ ಸಭೆಯಲ್ಲಿ ತಾಕೀತು ನೀಡಲಾಗಿದೆ.