ರಾಷ್ಟ್ರೀಯ ತನಿಖಾ ದಳದ ನ್ಯಾಯಾಲಯದ ತೀರ್ಪು !
ಲಕ್ಷ್ಮಣಪುರಿ (ಉತ್ತರಪ್ರದೇಶ) – ಕಾನೂನುಬಾಹಿರವಾಗಿ ಹಿಂದೂಗಳ ಮತಾಂತರ ಮಾಡಿರುವ ಪ್ರಕರಣದಲ್ಲಿ ರಾಷ್ಟ್ರೀಯ ತನಿಖಾದಳದ ನ್ಯಾಯಾಲಯವು ಮೌಲಾನಾ ಉಮರ್ ಗೌತಮ್, ಮೌಲಾನ ಕಲೀಮ್ ಸಿದ್ಧಿಕಿ ಸಹಿತ ೧೪ ಮುಸಲ್ಮಾನರು ತಪ್ಪಿತಸ್ಥರೆಂದು ತೀರ್ಪು ನೀಡಿದೆ. ಈ ಗ್ಯಾಂಗ್ ಫತೆಹಪುರದಲ್ಲಿ ಸಕ್ರೀಯವಾಗಿತ್ತು. ಅವರಿಗೆ ಭಾರತೀಯ ನ್ಯಾಯ ಸಂಹಿತೆಯ ೪೧೭, ೧೨೦ ಬಿ, ೧೫೩ ಅ, ೧೫೩ ಬಿ, ೨೯೫ ಅ, ೧೨೧ ಅ ಮತ್ತು ೧೨೩ ಈ ಕಲಂನ ಪ್ರಕಾರ ಹಾಗೂ ಕಾನೂನುಬಾಹಿರ ಮತಾಂತರಕ್ಕೆ ಸಂಬಂಧಪಟ್ಟ ೩, ೪ ಮತ್ತು ೫ ಈ ಕಲಂ ಪ್ರಕಾರ ತಪ್ಪಿತಸ್ಥರೆಂದು ನಿಶ್ಚಯಿಸಲಾಗಿದೆ. ನ್ಯಾಯಮೂರ್ತಿ ವಿವೇಕಾನಂದ ಶರಣ ತ್ರಿಪಾಠಿ ಇವರು ಎಲ್ಲಾ ತಪ್ಪಿತಸ್ಥರಿಗೆ ಬೇಗನೆ ಶಿಕ್ಷೆ ವಿಧಿಸುವರು.
ಏನಿದು ಪ್ರಕರಣ ?
ಮೌಲಾನ ಉಮರ್ ಗೌತಮ್ ಮತ್ತು ಮೌಲನ ಕಲೀಮ್ ಸಿದ್ದಿಕಿ ಇವರ ನೇತೃತ್ವದಲ್ಲಿನ ಗ್ಯಾಂಗ್ ದೇಶಾದ್ಯಂತ ಮತಾಂತರದ ಪ್ರಶಿಕ್ಷಣ ನೀಡುತ್ತಿರುವುದು ೨೦೨೨ ರಲ್ಲಿ ಬೆಳಕಿಗೆ ಬಂದಿತ್ತು. ಈ ಗ್ಯಾಂಗ್ ಆರ್ಥಿಕ ದೃಷ್ಟಿಯಿಂದ ಹಿಂದುಳಿದವರು, ವಿಕಲಾಂಗರು ಅಂತಹವರನ್ನು ಗುರಿ ಮಾಡುತ್ತಿದೆ. ಅವರು ಅಂತಹ ಜನರಿಗೆ ಆಮೀಷ ಒಡ್ಡಿ ಅಥವಾ ಹೆದರಿಸಿ ಮತ್ತು ಬಲವಂತವಾಗಿ ಮತಾಂತರ ಮಾಡುತ್ತಿದ್ದರು. ಮತಾಂತರವಾಗಿರುವ ಜನರ ಮೇಲೆ ಒತ್ತಡ ತರಲಾಗುತ್ತಿತ್ತು, ಅವರು ಅವರ ಸಂಬಂಧಿಕರಿಗೂ ಕೂಡ ಇಸ್ಲಾಂ ಧರ್ಮ ಸ್ವೀಕರಿಸಲು ಅನಿವಾರ್ಯ ಗೊಳಿಸಬೇಕು. ಅದಕ್ಕಾಗಿ ಈ ಮತಾಂತರರಿಗೆ ವಿಶೇಷ ಪ್ರಶಿಕ್ಷಣ ನೀಡಲಾಗುತ್ತಿತ್ತು. ಇದರಲ್ಲಿ ಹಿಂದುಗಳಿಗೆ ಅವರ ಧರ್ಮದ ಕುರಿತು ಭ್ರಮೆ ನಿರ್ಮಾಣ ಮಾಡುವ ಮಾಹಿತಿ ನೀಡಿ ಅವರ ಬ್ರೈನ್ ವಾಷ್ ಹೇಗೆ ಮಾಡುವುದು ? ಇದನ್ನು ಹೇಳಲಾಗುತ್ತಿತ್ತು. ಈ ಗ್ಯಾಂಗ್ ದೇಶಾದ್ಯಂತ ಬಲೆ ಬೀಸಿತ್ತು, ಎಂದು ತನಿಖಾ ದಳವು ನ್ಯಾಯಾಲಯಕ್ಕೆ ಮಾಹಿತಿ ನೀಡಿತು. ಈ ಕೆಲಸಕ್ಕಾಗಿ ತಪ್ಪಿತಸ್ಥರಿಗೆ ಹವಾಲಾದ ಮೂಲಕ ವಿದೇಶದಿಂದ ಹಣ ಕೂಡ ಪೂರೈಸಲಾಗುತ್ತಿತ್ತು.
ಸಂಪಾದಕೀಯ ನಿಲುವುಈ ತೀರ್ಪಿನಿಂದ ‘ಹಿಂದೂಗಳ ಮತಾಂತರಗೊಳಿಸುವ ಷಡ್ಯಂತ್ರ ರಾಷ್ಟ್ರೀಯ ಮಟ್ಟದಲ್ಲಿ ನಡೆಯುತ್ತಿದೆ’, ಇದು ಸಾಬೀತು ಆಗಿದೆ. ಇಗಲಾದರೂ ಕೇಂದ್ರ ಸರಕಾರ ರಾಷ್ಟ್ರ ವ್ಯಾಪಿ ಕಠಿಣ ಮತಾಂತರ ವಿರೋಧಿ ಕಾನೂನು ರೂಪಿಸುವುದೇ ? |