Jawhar Sircar Resigns :ತೃಣಮೂಲ ಕಾಂಗ್ರೆಸ್ ನಾಯಕ ಜವಾಹರ ಸರಕಾರ ಅವರಿಂದ ಸಂಸದರ ಸದಸ್ಯತ್ವಕ್ಕೆ ರಾಜೀನಾಮೆ

ಕೋಲಕಾತಾದಲ್ಲಿನ ಮಹಿಳಾ ವೈದ್ಯೆಯ ಮೇಲಿನ ಬಲಾತ್ಕಾರ ಮತ್ತು ಹತ್ಯೆಯ ಪ್ರಕರಣದಲ್ಲಿ ಮಮತಾ ಬ್ಯಾನರ್ಜಿ ನಿಷ್ಕ್ರಿಯ ಎಂದು ಆರೋಪ

ಕೋಲಕಾತಾ – ತೃಣಮೂಲ ಕಾಂಗ್ರೆಸ್ ನ ರಾಜ್ಯಸಭೆಯ ಸಂಸದ ಜವಾಹರ ಸರಕಾರ ಅವರು ಸೆಪ್ಟೆಂಬರ್ 8 ರಂದು ತಮ್ಮ ಸಂಸದ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಕೋಲಕಾತಾದಲ್ಲಿನ ಆರ್.ಜಿ. ಕರ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮಹಿಳಾ ವೈದ್ಯೆಯ ಮೇಲಿನ ಬಲಾತ್ಕಾರ ಮತ್ತು ಹತ್ಯೆಯ ಘಟನೆಯ ಬಳಿಕ ಮಮತಾ ಬ್ಯಾನರ್ಜಿ ಸರಕಾರವು ನಡೆಯನ್ನು ನಿಷೇಧಿಸಿ ಅವರು ಈ ರಾಜೀನಾಮೆ ನೀಡಿದ್ದಾರೆ. ಸರಕಾರ ಅವರು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರಿಗೆ ಬರೆದ ಪತ್ರದಲ್ಲಿ ಪಕ್ಷದ ಕೆಲವರ ಭ್ರಷ್ಟಾಚಾರ ಮತ್ತು ಗೂಂಡಾಗಿರಿಯ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದಾರೆ. ಸುದೀರ್ಘವಾಗಿ ವಿಚಾರಮಂಥನದ ಬಳಿಕ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವ ಮತ್ತು ರಾಜಕೀಯದಿಂದ ಸಂಪೂರ್ಣ ದೂರ ಉಳಿಯಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ. ಇದರೊಂದಿಗೆ ಸರಕಾರ ಇವರು ರಾಜ್ಯದ ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಗಳಿಸಿರುವ ಅಧಿಕಾರಿಗಳ ವಿಷಯದಲ್ಲಿಯೂ ಪ್ರಶ್ನೆಗಳನ್ನು ಎತ್ತಿದ್ದಾರೆ.

ಶಿಕ್ಷಣ ಸಚಿವರ ಮೇಲಿನ ಭ್ರಷ್ಟಾಚಾರದ ಪ್ರಕರಣದ ಬಗ್ಗೆಯೂ ಮಮತಾ ಸ್ಮಶಾನ ಮೌನ !

ಜವಾಹರ್ ಸರಕಾರ ಇವರು ತಮ್ಮ ಪತ್ರದಲ್ಲಿ, 2022ರಲ್ಲಿ ಶಿಕ್ಷಣ ಸಚಿವರು ಮಾಡಿರುವ ಭ್ರಷ್ಟಾಚಾರದ ಪುರಾವೆಗಳು ಬೆಳಕಿಗೆ ಬಂದವು, ಆಗ ಮಮತಾ ಇವರು ಕ್ರಿಯಾಶೀಲರಾಗಬೇಕಾಗಿತ್ತು ಎಂದು ನಾನು ಆಗ ಬಹಿರಂಗವಾಗಿ ಹೇಳಿದ್ದೆನು. ಹೀಗಿರುವಾಗಲೂ ಪಕ್ಷದ ಕೆಲವು ಹಿರಿಯ ಮುಖಂಡರು ನನ್ನನ್ನು ವಿರೋಧಿಸಿದರು. ಮಮತಾ ಬ್ಯಾನರ್ಜಿಯವರು ಭ್ರಷ್ಟಾಚಾರದ ವಿರುದ್ಧದ ಹೋರಾಟವನ್ನು ಮುಂದುವರಿಸುತ್ತಾರೆ ಎಂದು ನಾನು ನಿರೀಕ್ಷಿಸಿದ್ದೆ. ಆದ್ದರಿಂದಲೇ ನಾನು ಆ ಸಮಯದಲ್ಲಿ ರಾಜೀನಾಮೆ ನೀಡಿರಲಿಲ್ಲ ಎಂದು ಹೇಳಿದರು.

ನಗರಪಾಲಿಕೆ ಸದಸ್ಯರಿಂದ ಐಷಾರಾಮಿ ಕಾರುಗಳಿಂದ ಪ್ರಯಾಣ !

ಜವಾಹರ್ ಸರಕಾರ ಮಾತು ಮುಂದುವರಿಸಿ, ಬಂಗಾಳದ ಅನೇಕ ಪಂಚಾಯತ್ ಮತ್ತು ಪುರಸಭೆಯ ಸದಸ್ಯರು ಐಷಾರಾಮಿ ಕಾರುಗಳನ್ನು ಬಳಸುತ್ತಾರೆ. ಮತ್ತೊಂದೆಡೆ, ನಾನು ಸಾದಾ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ಹಳೆಯ ಕಾರನ್ನು ಬಳಸುತ್ತೇನೆ ಎಂದು ಹೇಳಿದರು.

ಸಂಪಾದಕೀಯ ನಿಲುವು

  • ತೃಣಮೂಲ ಕಾಂಗ್ರೆಸ್‌ನ ಮುಖಂಡರಿಗೂ ಮಮತಾ ಬ್ಯಾನರ್ಜಿಯವರ ನಿಷ್ಕ್ರಿಯತೆ ಕಾಣಿಸುತ್ತದೆ; ಆದರೆ ಕೇಂದ್ರ ಸರಕಾರಕ್ಕೆ ಕಾಣಿಸುತ್ತಿಲ್ಲವೇ ? ಸರಕಾರ ಈಗಲಾದರೂ ಬಂಗಾಳದ ಹಿತಕ್ಕಾಗಿ ಬಂಗಾಳ ಸರಕಾರವನ್ನು ವಿಸರ್ಜಿಸಿ, ಅಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರುವುದೇ ?
  • ಮಮತಾ ಬ್ಯಾನರ್ಜಿಗೆ ಕಪಾಳಮೋಕ್ಷ ! ಈ ವಿಫಲತೆಯ ಹೊಣೆ ಹೊತ್ತು ಈಗಲಾದರೂ ಮಮತಾ ಬ್ಯಾನರ್ಜಿ ರಾಜೀನಾಮೆ ನೀಡುವರೇ ?