ಢಾಕಾ (ಬಾಂಗ್ಲಾದೇಶ) – ಕೆಲವು ದಿನಗಳ ಹಿಂದೆ ಪೊಲೀಸ ಠಾಣೆಯಲ್ಲಿಯೇ ಪೊಲೀಸರು ಮತ್ತು ಸೈನಿಕರ ಎದುರಿನಲ್ಲಿ ಧರ್ಮನಿಂದಲೇ ಮಾಡಿರುವುದಾಗಿ ಹೇಳಿ ಉತ್ಸವ ಮಂಡಲ (೧೮ ವರ್ಷ) ಈ ವಿದ್ಯಾರ್ಥಿಗೆ ಮುಸಲ್ಮಾನರು ಅಮಾನುಷವಾಗಿ ಹೊಡೆದು ಅವನ ಕಣ್ಣುಗಳನ್ನು ಕಿತ್ತಿದ್ದಾರೆ. ಈ ಪ್ರಕರಣ ಮಾಸುವಮೊದಲೇ ಇನ್ನೊಂದು ಪ್ರಕರಣ ಬೆಳಕಿಗೆ ಬಂದಿದೆ. ಬಾಂಗ್ಲಾದೇಶದಲ್ಲಿನ ಜೆಸೂರ ವಿಜ್ಞಾನ ಮತ್ತು ತಂತ್ರಜ್ಞಾನ ಕಾಲೇಜಿನ ಬಯೋಮೆಡಿಕಲ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿ ಮತ್ತು ‘ಸನಾತನ ವಿದ್ಯಾರ್ಥಿ ಸಂಸತ್ತಿ’ನ ಅಧ್ಯಕ್ಷ ಕಂಕನ ವಿಶ್ವಾಸ್ ಇವನ ಮೇಲೆ ಮುಸಲ್ಮಾನ ವಿದ್ಯಾರ್ಥಿಗಳು ಇಸ್ಲಾಂಅನ್ನು ಅವಮಾನ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಬಳಿಕ ಕಾಲೇಜಿನ ಆಡಳಿತದಿಂದ ಕಂಕನ ವಿಶ್ವಾಸ್ ಇವನನ್ನು ಕಾಲೇಜಿನಿಂದ ಹೊರ ಹಾಕಿದ್ದಾರೆ.
ಮುಸಲ್ಮಾನ ವಿದ್ಯಾರ್ಥಿಗಳ ಪ್ರತಿಭಟನೆ
ಮುಸಲ್ಮಾನ ವಿದ್ಯಾರ್ಥಿಗಳು ಸಪ್ಟೆಂಬರ್ ೭ ರಂದು ಕಂಕನ ವಿಶ್ವಾಸನ ವಿರುದ್ಧ ಕ್ರಮ ಕೈಗೊಳ್ಳಬೇಕು ಮತ್ತು ಅವನನ್ನು ಹೊರಗೆ ಹಾಕಬೇಕೆಂದು ಪ್ರತಿಭಟನೆ ನಡೆಸಿ ಕಾಲೇಜ್ ಆಡಳಿತದ ಮೇಲೆ ಒತ್ತಡ ಹೇರಿದರು. ಅವರು ಕಾಲೇಜಿನ ಕುಲಪತಿಗಳ ಬಳಿ ಮನವಿ ಕೂಡ ಪ್ರಸ್ತುತಪಡಿಸಿದರು. ಮುಸಲ್ಮಾನ ವಿದ್ಯಾರ್ಥಿಗಳು, ಕಂಕನ ವಿಶ್ವಾಸ್ ಇವನಿಗೆ ಅವನ ಕಟ್ಟರ ಹಿಂದುತ್ವಕ್ಕಾಗಿ ಶಿಕ್ಷೆ ವಿಧಿಸಬೇಕು. ಅವನು ಇಸ್ಲಾಂನ ವಿರುದ್ಧ ಪ್ರಚೋದನಕಾರಿ ಹೇಳಿಕೆಗಳು ನೀಡುತ್ತಾನೆ. ವಿಶ್ವಾಸ್ ಇವನು ಸಾಮಾಜಿಕ ಜಾಲತಾಣದಲ್ಲಿ ಇಸ್ಲಾಂನ ವಿರುದ್ಧ ವಿಷಯಗಳು ಪ್ರಸಾರಗೊಳಿಸಿದ್ದಾನೆಂದು ಮುಸಲ್ಮಾನ ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಸಂಪಾದಕೀಯ ನಿಲುವುಪಾಕಿಸ್ತಾನ ಅಥವಾ ಬಾಂಗ್ಲಾದೇಶದಲ್ಲಿನ ಮುಸಲ್ಮಾನರು ಧರ್ಮನಿಂದನೆಯ ಆರೋಪವನ್ನು ಹಿಂದುಗಳ ವಿರುದ್ಧ ಶಸ್ತ್ರದಂತೆ ಉಪಯೋಗಿಸಿ ಅವರನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ, ಇದು ಈ ಹಿಂದೆ ಕೂಡ ಘಟಿಸಿರುವ ಘಟನೆಯಿಂದ ಕಾಣುತ್ತದೆ. ಇದನ್ನು ತಿಳಿದು ಈಗ ಭಾರತ ಸರಕಾರ ಅಲ್ಲಿಯ ಹಿಂದೂಗಳ ರಕ್ಷಣೆಗಾಗಿ ಏನು ಕ್ರಮ ಕೈಗೊಳ್ಳುವುದು ? |