ತಥಾಕಥಿತ ಧರ್ಮನಿಂದನೆ ಆರೋಪದಡಿ ಬಾಂಗ್ಲಾದೇಶದಲ್ಲಿ ಪೊಲೀಸ ಠಾಣೆಯಲ್ಲಿ ಹಿಂದೂ ಯುವಕ ಹತ್ಯೆ ಮಾಡಿದ ಪ್ರಕರಣ
ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದ ಖುಲನಾದಲ್ಲಿ ಧರ್ಮನಿಂದೆಯ ಆರೋಪದಿಂದ ಸಮೂಹದಿಂದ ಥಳಿಸಲ್ಪಟ್ಟ ಹಿಂದೂ ಯುವಕ ಉತ್ಸವ ಮಂಡಲ ಬದುಕಿದ್ದಾನೆ ಎಂದು ಬಾಂಗ್ಲಾದೇಶದ ಆಂತರಿಕ ಸೇವೆಗಳ ಸಾರ್ವಜನಿಕ ಸಂಪರ್ಕ ನಿರ್ದೇಶನಾಲಯ (ಐ.ಎಸ್.ಪಿ.ಆರ್.) ಘೋಷಿಸಿದೆ. ನಿರ್ದೇಶನಾಲಯವು ಪ್ರಕಟಿಸಿದ ಪ್ರಕರಣೆಯಲ್ಲಿ, ಉತ್ಸವ ಮಂಡಲ ಸೈನ್ಯದ ಉಸ್ತುವಾರಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಈಗ ಅವನ ಆರೋಗ್ಯ ಸ್ಥಿರವಾಗಿದೆ. ಹೀಗಿದ್ದರೂ, ಬಾಂಗ್ಲಾದೇಶದ ಕೆಲವು ಹಿಂದೂ ಮುಖಂಡರು `ಸನಾತನ ಪ್ರಭಾತ’ಕ್ಕೆ ಮಾಹಿತಿ ನೀಡಿದ್ದು, ಹಿಂಸಾತ್ಮಕ ಮುಸ್ಲಿಮರು ಎರಡೂ ಕಣ್ಣುಗಳನ್ನು ಕಿತ್ತು ಹಾಕಿದ್ದಾರೆ.
1. ಸೆಪ್ಟೆಂಬರ್ 4 ರಂದು, ಫೇಸ್‌ಬುಕ್‌ನಲ್ಲಿ ಪ್ರವಾದಿ ಮಹಮ್ಮದ್ ಪೈಗಂಬರ ಅವರನ್ನು ಅವಮಾನಿಸಿದ ಆರೋಪದ ಮೇಲೆ 3 ಸಾವಿರದಿಂದ 5 ಸಾವಿರ ಮುಸ್ಲಿಮರ ಗುಂಪು ಉತ್ಸವನ ಮೇಲೆ ಪೊಲೀಸ ಠಾಣೆಯಲ್ಲಿಯೇ ಹಲ್ಲೆ ಮಾಡಿದ್ದರು. ಈ ಹಲ್ಲೆಯಲ್ಲಿ ಉತ್ಸವನು ಮರಣ ಹೊಂದಿದನು ಎಂದು ಬಾಂಗ್ಲಾದೇಶಿ ಪೊಲೀಸರು ಹೇಳಿದ್ದರು.
2. ತದನಂತರ ಸೆಪ್ಟೆಂಬರ್ 6 ರಂದು ಬಾಂಗ್ಲಾದೇಶದ ಆಂತರಿಕಸೇವಾ ಜನಸಂಪರ್ಕ ನಿರ್ದೇಶನಾಲಯವು ಸ್ಪಷ್ಟೀಕರಣವನ್ನು ನೀಡುತ್ತಾ, ರಕ್ತಪೀಪಾಸು ಮುಸಲ್ಮಾನ ಗುಂಪನ್ನು ಚದುರಿಸಲು ಹತ್ತಿರದ ಮಸೀದಿಯ ಧ್ವನಿವರ್ಧಕದಿಂದ ಹಿಂದೂ ಯುವಕನು ಮರಣ ಹೊಂದಿದ್ದಾನೆಂದು ಘೋಷಿಸಿದ್ದರು. ತದನಂತರ ಗುಂಪು ಹಿಂದಕ್ಕೆ ಸರಿದರು ಎಂದು ಹೇಳಿದ್ದರು.
3. ‘ಶಸ್ತ್ರಸಜ್ಜಿತ ಪಡೆಯ ಪ್ರಯತ್ನದಿಂದಾಗಿ ಉತ್ಸವನ ಜೀವವನ್ನು ರಕ್ಷಿಸಲ್ಪಟ್ಟಿತು ಮತ್ತು ನಂತರ ಆಸ್ಪತ್ರೆಗೆ ದಾಖಲಿಸಲಾಯಿತು. ಅವನನ್ನು ಆಸ್ಪತ್ರೆಯಿಂದ ಬಿಡುಗಡೆಯಾದ ಬಳಿಕ ಅವನ ಮೇಲೆ ಧರ್ಮನಿಂದನೆಯ ಪ್ರಕರಣಕ್ಕೆ ಸಂಬಂಧಿಸಿದ ತನಿಖಾ ಇಲಾಖೆಗೆ ಒಪ್ಪಿಸಲಾಗುವುದು’ ಎಂದು ನಿರ್ದೇಶನಾಲಯ ತಿಳಿಸಿದೆ.
ಸಂಪಾದಕೀಯ ನಿಲುವುಬಾಂಗ್ಲಾದೇಶ ಹಿಂದೂಗಳಿಗೆ ನರಕಕ್ಕಿಂತ ಕೆಡೆಯಾಗಿದೆ. ಅಲ್ಲಿನ ಹಿಂದೂಗಳ ದು:ಸ್ಥಿತಿಯ ವಿರುದ್ಧ ಭಾರತದಲ್ಲಿನ ಹಿಂದೂಗಳು ಸಿಡಿದೆದ್ದು ನಿಲ್ಲುವರೇ ಅಥವಾ ಇಲ್ಲವೇ ? |