ನಿಮಗೆ ಭಾರತ ಇಷ್ಟವಾಗದಿದ್ದರೆ ನೀವು ನಿಮ್ಮ ವ್ಯಾಪಾರ ನಿಲ್ಲಿಸಬಹುದು ! – ದೆಹಲಿ ಉಚ್ಚ ನ್ಯಾಯಾಲಯದಿಂದ ವಿಕಿಪಿಡಿಯಾಗೆ ತಾಕಿತು

  • ಆದೇಶದ ಪಾಲನೆ ಮಾಡದೇ ಇದ್ದರಿಂದ ‘ವಿಕಿಪೀಡಿಯ’ಗೆ ದೆಹಲಿ ಉಚ್ಚ ನ್ಯಾಯಾಲಯದಿಂದ ಛೀಮಾರಿ !

  • ವಿಕಿಪೀಡಿಯಾದ ಮೇಲೆ ನಿಷೇಧ ಹೇರುವುದಾಗಿ ಎಚ್ಚರಿಕೆ

ನವ ದೆಹಲಿ – ನ್ಯಾಯಾಲಯದ ಅವಮಾನ ಮಾಡಿರುವ ಕುರಿತು ‘ವಿಕಿಪೀಡಿಯ’ ಈ ಜಾಲತಾಣದ ಮೇಲೆ ಭಾರತದಲ್ಲಿ ನಿಷೇಧ ಹೇರಲಾಗುವುದು ಎಂದು ದೆಹಲಿಯ ಉಚ್ಚ ನ್ಯಾಯಾಲಯ ಎಚ್ಚರಿಕೆ ನೀಡಿದೆ. ‘ನಿಮಗೆ ಭಾರತ ಇಷ್ಟವಾಗದಿದ್ದರೆ ನೀವು ಇಲ್ಲಿಯ ನಿಮ್ಮ ಕೆಲಸ ನಿಲ್ಲಿಸಬಹುದು’, ಇಂತಹ ಶಬ್ದಗಳಲ್ಲಿ ನ್ಯಾಯಾಲಯವು ಛೀಮಾರಿ ಹಾಕಿದೆ. ಭಾರತದಲ್ಲಿನ ವಾರ್ತಾಸಂಸ್ಥೆ ‘ಎ.ಎನ್.ಐ.’ಯು ವಿಕಿಪೀಡಿಯಾದ ಮೇಲೆ ಎರಡು ಕೋಟಿ ರೂಪಾಯಿಯ ಮಾನನಷ್ಟ ಮೊಕದ್ದಮೆ ದಾಖಲಿಸಿದೆ. ಈ ಬಗ್ಗೆ ವಿಚಾರಣೆ ನಡೆಸುವಾಗ ನ್ಯಾಯಾಲಯವು ವಿಕಿಪೀಡಿಯಾಗೆ ನೀಡಿರುವ ಆದೇಶವನ್ನು ಅವರು ಕಾರ್ಯಾಚರಣೆ ಮಾಡದಿದ್ದರಿಂದ ನ್ಯಾಯಾಲಯವು ಮೇಲಿನ ಎಚ್ಚರಿಕೆ ನೀಡಿದೆ.

೧. ಈ ಪ್ರಕರಣದಲ್ಲಿ ಸಪ್ಟೆಂಬರ್ ೫ ರಂದು ನಡೆದಿರುವ ವಿಚಾರಣೆಯ ಸಮಯದಲ್ಲಿ ನ್ಯಾಯಾಲಯವು ‘ಆದೇಶದ ಪಾಲನೆ ಏಕೆ ಮಾಡಲಿಲ್ಲ’ ಎಂದು ವಿಚಾರಿಸಿತು, ಆಗ ವಿಕಿಪೀಡಿಯಾದ ನ್ಯಾಯವಾದಿಗಳು ನ್ಯಾಯಾಲಯಕ್ಕೆ, ನ್ಯಾಯಾಲಯದ ಆದೇಶದ ಬಗ್ಗೆ ಕೆಲವು ವಿಷಯಗಳು ನ್ಯಾಯಾಲಯದ ಮುಂದೆ ಮಂಡಿಸಬೇಕಾಗಿತ್ತು, ವಿಕಿಪೀಡಿಯಾದ ಆಧಾರ ಭಾರತದಲ್ಲಿಲ್ಲದ್ದರಿಂದ ತಡವಾಯಿತು.

೨. ಇದರ ಕುರಿತು ಅಸಮಾಧಾನ ವ್ಯಕ್ತಪಡಿಸುತ್ತಾ ನ್ಯಾಯಾಲಯವು ಅವಮಾನದ ದೂರು ದಾಖಲಿಸುತ್ತಿರುವುದಾಗಿ ಹೇಳಿತು. ನ್ಯಾಯಾಲಯವು, ವಿಕಿಪೀಡಿಯ (ಅದರ ಕಾರ್ಯಾಲಯ) ಭಾರತದಲ್ಲಿ ಇದೆ ಅಥವಾ ಇಲ್ಲ? ಈ ಪ್ರಶ್ನೆ ಇಲ್ಲ, ನ್ಯಾಯಾಲಯದ ಆದೇಶದ ಪಾಲನೆ ಏಕೆ ಆಗಲಿಲ್ಲ? ಇದು ಮಹತ್ವದ್ದಾಗಿದೆ. ನಾವು ಇಲ್ಲಿ ನಿಮ್ಮ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸಬಹುದು. ನಾವು ಸರಕಾರಕ್ಕೆ ವಿಕಿಪೀಡಿಯಾದ ಮೇಲೆ ನಿಷೇಧ ಹೇರಲು ಹೇಳುವೆವು. ನಿಮ್ಮವರು ಈ ಹಿಂದೆ ಕೂಡ ಇಂತಹ ಯುಕ್ತಿವಾದವೇ ಮಾಡಿದ್ದರು. ನಿಮಗೆ ಭಾರತ ಇಷ್ಟ ಇಲ್ಲದಿದ್ದರೆ, ದಯವಿಟ್ಟು ಭಾರತದಲ್ಲಿ ಕೆಲಸ ಮಾಡಬೇಡಿ ಎಂದು ಹೇಳಿದೆ.

ಏನಿದು ಪ್ರಕರಣ ?

ಕೆಲವುರು ವಿಕಿಪೀಡಿಯಾದ ಮೇಲೆ ಎ.ಎನ್.ಐ.ನ ಪುಟಗಳನ್ನು ಪಡೆದು ಆಕ್ಷೇಪಾರ್ಹ ಮಾಹಿತಿ ಶೇರ್ ಮಾಡಿದ್ದರು. ‘ಎ.ಎನ್.ಐ.ಅನ್ನು ಪ್ರಸ್ತುತ ಸರಕಾರದ ಪ್ರಚಾರಕ್ಕಾಗಿ ಒಂದು ಸಾಧನ ಎಂದು ಉಪಯೋಗಿಸಲಾಗುತ್ತದೆ’, ಎಂದು ಪಡೆದಿರುವ ವಿಷಯದಲ್ಲಿ ಬರೆಯಲಾಗಿತ್ತು. ಈ ಬಗ್ಗೆ ಎ.ಎನ್.ಐ. ಇಂದ ದೂರು ದಾಖಲಿಸಲಾಗಿತ್ತು. ನ್ಯಾಯಾಲಯವು ವಿಕಿಪೀಡಿಯಾಗೆ ಪುಟ ಪಡೆದಿರುವ ೩ ಜನರ ಮಾಹಿತಿ ನೀಡಲು ಆದೇಶ ನೀಡಿತ್ತು; ಆದರೆ ವಿಕಿಪೀಡಿಯದಿಂದ ಆದೇಶದ ಪಾಲನೆ ಮಾಡಲಾಗಿಲ್ಲ. ಆದ್ದರಿಂದ ಎ.ಎನ್.ಐ. ಉಚ್ಚ ನ್ಯಾಯಾಲಯದಲ್ಲಿ ಮತ್ತೆ ತಲುಪಿದೆ ಹಾಗೂ ನ್ಯಾಯಾಲಯದ ಆದೇಶದ ಅವಮಾನವಾಗಿದೆ ಎಂದು ಹೇಳಿದೆ.

ಸಂಪಾದಕೀಯ ನಿಲುವು

ಭಾರತೀಯ ನ್ಯಾಯಾಲಯದ ಆದೇಶದ ಪಾಲನೆ ಮಾಡದ ಇಂತಹ ವಿದೇಶಿ ಜಾಲತಾಣದ ಮೇಲೆ ನಿಷೇದ ಹೇರಲೇಬೇಕು, ಇಂತಹ ಜಾಲತಾಣಗಳು ಭಾರತ ಮತ್ತು ಹಿಂದೂ ಧರ್ಮವನ್ನು ಅವಮಾನಿಸುವ ವಿಷಯವನ್ನು ಹೆಚ್ಚು ಪ್ರಸಾರ ಮಾಡುತ್ತಾದೆ !