ಬಾಂಗ್ಲಾದೇಶದಲ್ಲಿ ಶ್ರೀದುರ್ಗಾ ಪೂಜೆಗಾಗಿ ತಯಾರಿಸಿರುವ ಮೂರ್ತಿಗಳ ದ್ವಂಸ : ಸುಡುವ ಪ್ರಯತ್ನ !

(ಈ ಮೇಲೆ ಪ್ರಕಟಿಸಿದ ಚಿತ್ರದ ಉದ್ದೇಶ ಯಾವ ಧಾರ್ಮಿಕ ಭಾವನೆಗಳಿಗೆ ನೋವನ್ನು ತರುವುದಾಗಿರದೇ ನೈಜ ಸ್ಥಿತಿ ತೋರಿಸುವುದಾಗಿದೆ)

ಢಾಕಾ – ಬಾಂಗ್ಲಾದೇಶದಲ್ಲಿ ಶ್ರೀ ದುರ್ಗಾ ಪೂಜೆಗಾಗಿ ತಯಾರಿಸಲಾಗಿರುವ ಮೂರ್ತಿಯನ್ನು ಧ್ವಂಸ ಮಾಡಿರುವ ಘಟನೆಗಳು ಬೆಳಕಿಗೆ ಬಂದಿವೆ. ಮೇಘಾಲಯ ಗಡಿಗೆ ತಾಗಿರುವ ಬಾಂಗ್ಲಾದೇಶದಲ್ಲಿನ ಶೇರಪುರ ಜಿಲ್ಲೆಯಲ್ಲಿನ ಒಂದು ದೇವಸ್ಥಾನದಲ್ಲಿ ಆಗಸ್ಟ್ ೩೧ ರಂದು ರಾತ್ರಿ ಕೆಲವು ಮತಾಂಧರು ದೇವಸ್ಥಾನದ ಬೀಗ ಒಡೆದು ಒಳಗೆ ಪ್ರವೇಶಿಸಿದರು ಮತ್ತು ಮೂರ್ತಿಯನ್ನು ಧ್ವಂಸ ಮಾಡಿದರು.

೧. ದೇವಸ್ಥಾನ ಸಮಿತಿಯ ಕಾರ್ಯದರ್ಶಿ ಸಾಗರ ರವಿದಾಸ ಇವರು, ಕೆಲವು ಮತಂಧರು ದೇವಸ್ಥಾನದ ಬೀಗ ಒಡೆದು ಮತ್ತು ಸರಪಳಿ ಮುರಿದು ಒಳಗೆ ಪ್ರವೇಶಿಸಿ ದೇವಸ್ಥಾನದಲ್ಲಿನ ಮೂರ್ತಿಗಳನ್ನು ಒಡೆದು ಹಾಕಿದರು.

೨. ಅದರ ನಂತರ ಪೆಟ್ರೋಲ್ ಸುರಿದು ಮೂರ್ತಿಗಳನ್ನು ಸುಟ್ಟು ಹಾಕುವ ಪ್ರಯತ್ನ ಮಾಡಿದರು. ಘಟನೆಯ ಮಾಹಿತಿ ಸಿಗುತ್ತಲೇ ಸ್ಥಳೀಯ ಪೊಲೀಸರು ಮತ್ತು ಸೈನಿಕರು ಘಟನಾ ಸ್ಥಳಕ್ಕೆ ತಲುಪಿದರು. ಸ್ಥಳೀಯ ಪೊಲೀಸ ಠಾಣೆಯ ಮುಖ್ಯಸ್ಥ ಕಯ್ಯುಮ್ ಖಾನ ಸಿದ್ದಿಕೀ ಇವರು, ಈ ಪ್ರಕರಣದ ವಿಚಾರಣೆ ನಡೆದ ನಂತರ ದಾಳಿಕೋರರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

೩. ಬಾಂಗ್ಲಾದೇಶದಲ್ಲಿನ ಹೊಸ ಸರಕಾರ ಸ್ಥಾಪನೆ ಆದ ನಂತರ ಹಿಂದೂಗಳಲ್ಲಿ ಭಯದ ವಾತಾವರಣ ಇದೆ; ಆದರೆ ಸರಕಾರವು ಹಿಂದುಗಳ ಸುರಕ್ಷೆಯ ಕುರಿತು ಆಶ್ವಾಸನೆ ನೀಡಿದೆ.

ಸಂಪಾದಕೀಯ ನಿಲುವು

ಬಾಂಗ್ಲಾದೇಶದಲ್ಲಿನ ಹಿಂದುಗಳ ಸುರಕ್ಷೆಗಾಗಿ ಭಾರತದಿಂದ ಏನು ಮಾಡಲಾಗಿಲ್ಲ, ಆದರೆ ಭವಿಷ್ಯದಲ್ಲಿ ಬಾಂಗ್ಲಾದೇಶದಲ್ಲಿನ ಹಿಂದುಗಳು ಮತ್ತು ಅವರ ದೇವಸ್ಥಾನಗಳು ಉಳಿಯಲಾರದು, ಇದೇ ಇದರಿಂದ ಕಾಣುತ್ತದೆ !