Hindu Teachers Forced Resign : ಬಾಂಗ್ಲಾದೇಶದಲ್ಲಿ ೪೯ ಹಿಂದೂ ಶಿಕ್ಷಕರಿಗೆ ರಾಜೀನಾಮೆ ನೀಡಲು ಅನಿವಾರ್ಯಗೊಳಿಸಲಾಯಿತು !

ಢಾಕಾ (ಬಾಂಗ್ಲಾದೇಶ) – ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ದಾಳಿಯ ನಂತರ ಹಿಂದೂ ಶಿಕ್ಷಕರು, ಪ್ರಾಧ್ಯಾಪಕರು ಹಾಗೂ ಸರಕಾರಿ ಅಧಿಕಾರಿಗಳಿಗೆ ಬಲವಂತವಾಗಿ ನೌಕರಿಗೆ ರಾಜೀನಾಮೆ ನೀಡಲು ಅನಿವಾರ್ಯಗೊಳಿಸಲಾಗುತ್ತಿರುವ ಸಮಾಚಾರ ಈ ಹಿಂದೆಯೇ ಬೆಳಕಿಗೆ ಬಂದಿದ್ದವು. ಈಗ ೪೯ ಹಿಂದೂ ಶಿಕ್ಷಕರಿಗೆ ರಾಜೀನಾಮೆ ನೀಡಲು ಅನಿವಾರ್ಯಗೊಳಿಸಿರುವ ಹೊಸ ಮಾಹಿತಿ ಬೆಳಕಿಗೆ ಬಂದಿದೆ.

೧. ಬಾಂಗ್ಲಾದೇಶದಲ್ಲಿನ ಹಿಂದೂ, ಬೌದ್ಧ, ಕ್ರೈಸ್ತ, ಒಕ್ಯ ಪರಿಷತ್ ನ ವಿದ್ಯಾರ್ಥಿ ಶಾಖೆ ಇರುವ ‘ಬಾಂಗ್ಲಾದೇಶ ವಿದ್ಯಾರ್ಥಿ ಒಕ್ಯ ಪರಿಷತ್ತಿ’ನ ಸಂಯೋಜಕ ಸಾಜೀಬ ಸರಕಾರ ಇವರು ಪತ್ರಕರ್ತ ಸಭೆಯಲ್ಲಿ, ಶೇಖ ಹಸೀನಾ ಇವರ ನೇತೃತ್ವದ ಸರಕಾರ ಪದಚ್ಯುತಗೊಂಡ ನಂತರ ಧಾರ್ಮಿಕ ಮತ್ತು ಅನುವಂಶಿಕ ಅಲ್ಪಸಂಖ್ಯಾತರಗೆ ಹಿಂಸಾಚಾರವನ್ನು ಎದುರಿಸಬೇಕಾಗುತ್ತದೆ. ಇದರಲ್ಲಿ ಲೂಟಿ, ಮಹಿಳೆಯರ ಮೇಲಿನ ದಾಳಿಗಳು, ದೇವಸ್ಥಾನಗಳ ದ್ವಂಸ, ಮನೆ ಮತ್ತು ಕೆಲಸದ ಸ್ಥಳಗಳಲ್ಲಿ ಬೆಂಕಿ ಹಚ್ಚುವುದು ಮತ್ತು ಹತ್ಯೆಗಳ ಸಮಾವೇಶವಿದೆ. ದೇಶಾದ್ಯಂತ ಇರುವ ಅಲ್ಪಸಂಖ್ಯಾತ ಶಿಕ್ಷಕರಿಗೆ ಶಾರೀರಿಕ ದಾಳಿಕೂಡ ಎದುರಿಸಬೇಕಾಯಿತು. ಆದ್ದರಿಂದ ಆಗಸ್ಟ್ ೩೦ ವರೆಗೆ ಕನಿಷ್ಠ ೪೯ ಶಿಕ್ಷಕರಿಗೆ ರಾಜೀನಾಮೆ ನೀಡಬೇಕಾಗಿದೆ; ಆದರೆ ಇದರಲ್ಲಿನ ೧೯ ಶಿಕ್ಷಕರಿಗೆ ಮತ್ತೆ ಸೇವೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

೨. ಬರಿಶಾಲಾದ ಬೆಕರಗಂಜ ಸರಕಾರಿ ಕಾಲೇಜಿನ ಪ್ರಾಚಾರ್ಯ ಶುಕ್ಲಾ ರಾಣಿ ಹಲದರ ಇವರ ಕಾರ್ಯಾಲಯದ ಮೇಲೆ ಆಗಸ್ಟ್ ೨೯ ರಂದು ವಿದ್ಯಾರ್ಥಿಗಳು ಮತ್ತು ಹೊರಗಿನ ಜನರ ಗುಂಪಿನಿಂದ ದಾಳಿ ನಡೆಯಿತು ಮತ್ತು ಅವರ ರಾಜೀನಾಮೆಗೆ ಆಗ್ರಹಿಸಲಾಯಿತು. ಆದ್ದರಿಂದ ಶುಕ್ಲ ರಾಣಿ ಇವರಿಗೆ ರಾಜೀನಾಮೆ ನೀಡಬೇಕಾಯಿತು. ಬಿಳಿ ಹಾಳೆಯಲ್ಲಿ ಬರೆದಿರುವ ‘ನಾನು ರಾಜೀನಾಮೆ ನೀಡುತ್ತೇನೆ’, ವಾಕ್ಯದ ಛಾಯಾಚಿತ್ರ ಸಾಮಾಜಿಕ ಜಾಲತಾಣದಲ್ಲಿ ಪ್ರಸಾರಗಿದೆ.

೩. ‘ಬಾಂಗ್ಲಾದೇಶ ಜಾತಿಯ ಹಿಂದೂ ಮೊಹೊಜೋತ್’ (ಬಿ.ಜೆ.ಎಚ್.ಎಂ) ಈ ಬಾಂಗ್ಲಾದೇಶದಲ್ಲಿನ ೨೩ ಧಾರ್ಮಿಕ ಸಂಘಟನೆಯ ರಾಷ್ಟ್ರೀಯ ಮೈತ್ರಿಕೂಟವು, ಆಗಸ್ಟ್ ೫ ರಿಂದ ದೇಶದಲ್ಲಿನ ೪೮ ಜಿಲ್ಲೆಯಲ್ಲಿನ ೨೭೮ ಸ್ಥಳಗಳಲ್ಲಿ ಹಿಂದೂ ಕುಟುಂಬದವರಿಗೆ ಹಿಂಸಾಚಾರ ಎದುರಿಸಬೇಕಾಯಿತು, ಎಂದು ಹೇಳಿದೆ.

೪. ‘ಕಾಝಿ ನಜರುಲ್ ಕಾಲೇಜಿ’ನ ಪ್ರಾ. ಸಂಜಯ್ ಕುಮಾರ್ ಮುಖರ್ಜಿ ಇವರು ಶಿಕ್ಷಕರ ರಾಜೀನಾಮೆ ಪಡೆಯಲಾಗುತ್ತಿರುವ ಸಮಾಚಾರವನ್ನು ಅನುಮೋದಿಸುತ್ತಾ, ರಾಜೀನಾಮೆ ನೀಡುವುದಕ್ಕಾಗಿ ನಮಗೆ ಅನಿವಾರ್ಯಗೊಳಿಸಲಾಗುತ್ತಿದೆ. ನಾವು ಬಾಂಗ್ಲಾದೇಶದಲ್ಲಿ ಅಸುರಕ್ಷಿತವಾಗಿದ್ದೇವೆ ಎಂದು ಹೇಳಿದ್ದಾರೆ.

೫. ಢಾಕಾ ಕಾಲೇಜಿನಲ್ಲಿನ ಗಣಿತ ವಿಭಾಗದ ಪ್ರಾಧ್ಯಾಪಕ ಡಾ. ಚಂದ್ರನಾಥ ಪೊದ್ಧಾರ್ ಇವರಿಗೂ ಕೂಡ ವಿದ್ಯಾರ್ಥಿಗಳು ರಾಜೀನಾಮೆ ನೀಡಲು ಅನಿವಾರ್ಯಗೊಳಿಸಿದ್ದಾರೆ. ಯಾವ ಶಿಕ್ಷಕರ ಭಯದಿಂದ ಕಾಲೇಜಿಗೆ ಬರದಿರುವ ನಿರ್ಣಯ ತೆಗೆದುಕೊಂಡಿದ್ದರು, ಅವರ ಮನೆಗೆ ಹೋಗಿ ಜಿಹಾದಿ ಗುಂಪುಗಳು ಅವರಿಗೆ ರಾಜೀನಾಮೆ ನೀಡಲು ಅನಿವಾರ್ಯಗೊಳಿಸಿದ್ದಾರೆ.

ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಅತ್ಯಂತ ಶೋಚನೀಯ ! – ತಸ್ಲೀಮಾ ನಸ್ರೀನ್

ಹಿಂದೆ ಬಾಂಗ್ಲಾದೇಶದಿಂದ ಪಲಾಯನ ಮಾಡಲು ಅನಿವಾರ್ಯಗೊಳಿಸಿರುವ ಲೇಖಕಿ ತಸ್ಲಿಮಾ ನಸ್ರೀನ್ ಇವರು ಎಕ್ಸ್ ನಲ್ಲಿ ಪೋಸ್ಟ್ ಮಾಡಿ, ಬಾಂಗ್ಲಾದೇಶದಲ್ಲಿನ ಪರಿಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಶಿಕ್ಷಕರಿಗೆ ರಾಜೀನಾಮೆ ನೀಡಲು ಅನಿವಾರ್ಯಗೊಳಿಸಲಾಗುತ್ತಿದೆ. ಪತ್ರಕರ್ತರು, ಸಚಿವರು ಮತ್ತು ಮಾಜಿ ಸರಕಾರಿ ಅಧಿಕಾರಿಗಳ ಹತ್ಯೆ ನಡೆಯುತ್ತಿದೆ. ಅವರಿಗೆ ಜೈಲಿಗೆ ಕಳುಹಿಸಲಾಗುತ್ತಿದೆ. ಈ ಎಲ್ಲಾ ಪ್ರಕರಣದಲ್ಲಿ ನೊಬೆಲ್ ಪ್ರಶಸ್ತಿ ಪಡೆದಿರುವ ಮಹಮ್ಮದ್ ಯೂನಸ್ ಶಾಂತವಾಗಿದ್ದಾರೆ ಎಂದು ಹೇಳಿದ್ದಾರೆ.

ಸಂಪಾದಕೀಯ ನಿಲುವು

  • ಬಾಂಗ್ಲಾದೇಶದಲ್ಲಿನ ಹಿಂದೂಗಳ ಬಗ್ಗೆ ಭಾರತದಲ್ಲಿನ ಒಂದೇ ಒಂದು ಜಾತ್ಯತೀತ, ಪ್ರಗತಿ (ಅಧೋಗತಿ) ಪರ ರಾಜಕೀಯ ಪಕ್ಷ, ಸಂಘಟನೆಗಳು, ತಥಾಕಥಿತ ವಿಚಾರವಂತರು ಬಾಯಿ ತೆರೆಯುವುದಿಲ್ಲ, ಇದನ್ನು ತಿಳಿದುಕೊಳ್ಳಿ !
  • ಬಾಂಗ್ಲಾದೇಶದಲ್ಲಿನ ‘ಜಮಾತ್-ಎ-ಇಸ್ಲಾಮಿ’ಯ ನಾಯಕರಿಂದ ಕೆಲವು ದಿನಗಳ ಹಿಂದೆ ಬಾಂಗ್ಲಾದೇಶದಲ್ಲಿನ ಹಿಂದುಗಳನ್ನು ಹಿಂದೂ ಎಂದು ಗುರಿ ಮಾಡಲಾಗುತ್ತಿಲ್ಲ’, ಎಂದು ದಾವೆ ಮಾಡಿದ್ದರು. ಈ ನಾಯಕರು ಈಗ ಈ ಹಿಂದೂ ಶಿಕ್ಷಕರಿಗೆ ರಾಜೀನಾಮೆ ನೀಡಿಸುವ ಸಂದರ್ಭದಲ್ಲಿ ಏಕೆ ಮೌನ ?