ಕಾಂಗ್ರೆಸ್ಸಿನ ನಾಯಕ ಜಗದೀಶ್ ಟೈಟಲರ್ ಇವರ ಮೇಲೆ ಹತ್ಯೆಯ ದೂರು ದಾಖಲಿಸಿ ! – ದೆಹಲಿ ಹೈಕೋರ್ಟ್

ನವ ದೆಹಲಿ – ದೆಹಲಿ ನ್ಯಾಯಾಲಯವು ಕಾಂಗ್ರೆಸ್ಸಿನ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಜಗದೀಶ್ ಟೈಟಲರ್ ಇವರ ಮೇಲೆ ೧೯೮೪ ರಲ್ಲಿ ದೆಹಲಿಯಲ್ಲಿನ ಸಿಖ್ ವಿರೋಧಿ ಗಲಭೆಯ ಪ್ರಕರಣದಲ್ಲಿನ ಹತ್ಯೆಯ ದೂರು ದಾಖಲಿಸುವ ಆದೇಶ ನೀಡಿದೆ. ನ್ಯಾಯಾಲಯವು ವಿವಿಧ ಕಲಂ ಅಡಿಯಲ್ಲಿ ಅವರ ವಿರುದ್ಧ ಆರೋಪ ನಿಶ್ಚಿತಗೊಳಿಸಿದೆ. ಈ ಪ್ರಕರಣದ ಮುಂದಿನ ವಿಚಾರಣೆ ಸಪ್ಟೆಂಬರ್ ೧೩ ಕ್ಕೆ ನಡೆಯುವುದು. ಕೇಂದ್ರ ತನಿಖಾ ಇಲಾಖೆ (ಸಿಬಿಐ ಇಂದ) ಮೇ ೨೦, ೨೦೨೩ ರಂದು ಟೈಟಲರ್ ಇವರ ವಿರುದ್ಧ ಆರೋಪ ಪತ್ರ ದಾಖಲಿಸಿತ್ತು.

ನವಂಬರ್ ೧, ೧೯೮೪ ರಂದು ಟೈಟಲರ ದೆಹಲಿಯಲ್ಲಿನ ಗುರುದ್ವಾರ ಸೇತುವೆ ಬಂಗಶ ಎದುರು ಅಂಬೆಸೆಡರ್ ಕಾರಿನಿಂದ ಇಳಿದು ಸಿಖ್ಖರನ್ನು ಕೊಲ್ಲಲು ಗುಂಪಿಗೆ ಪ್ರಚೋದನೆ ನೀಡಿದ್ದರು ಎಂದು ಓರ್ವ ಸಾಕ್ಷಿದಾರನು ಆರೋಪಿಸಿದ್ದನು. ಅದರ ನಂತರ ಗುರುದ್ವಾರಕ್ಕೆ ಬೆಂಕಿ ಹಚ್ಚಲಾಗಿತ್ತು. ಈ ಹಿಂಸಾಚಾರದಲ್ಲಿ ೩ ಜನರು ಮೃತಪಟ್ಟಿದ್ದರು.

ಸಿಖ್ ಗಲಭೆಯ ಪ್ರಕರಣದಲ್ಲಿ ಸಿಬಿಐಯಿಂದ ಟೈಟಲರ್ ಇವರನ್ನು ೩ ಸಲ ಖುಲಾಸೆ ಮಾಡಲಾಗಿತ್ತು. ೨೦೦೭ ರಲ್ಲಿ ಮೊದಲು ಬಾರಿ ಖುಲಾಸೆ ಆದ ನಂತರ ನ್ಯಾಯಾಲಯವು ಅವರನ್ನು ಖುಲಾಸೆಯನ್ನು ತಳ್ಳಿ ಹಾಕಿ ಮರು ವಿಚಾರಣೆಗೆ ಆದೇಶ ನೀಡಿತು. ಅದರ ನಂತರ ೨೦೧೩ ರಲ್ಲಿ ಸಿಬಿಐಯಿಂದ ಸಾಕ್ಷಿ ಕೊರತೆಯಿಂದ ಟೈಟಲರ್ ನನ್ನು ಮತ್ತೆ ಖುಲಾಸೆ ಗೊಳಿಸಿತು. ಇದರ ವಿರುದ್ಧ ಅರ್ಜಿದಾರರು ನ್ಯಾಯಾಲಯಕ್ಕೆ ಹೋದ ನಂತರ ೨೦೧೫ ರಲ್ಲಿ ನ್ಯಾಯಾಲಯವು ಸಿಬಿಐಗೆ ಈ ಪ್ರಕರಣದ ಮುಂದಿನ ತನಿಖೆ ನಡೆಸುವ ಆದೇಶ ನೀಡುತ್ತಾ, ನಾವು (ನ್ಯಾಯಾಲಯ) ಪ್ರತಿಯೊಂದು ಅಂಶ ಪರೀಕ್ಷಿಸಲಾಗಿದೆಯೆ ಅಥವಾ ಇಲ್ಲ? ಇದನ್ನು ಖಾತ್ರಿಪಡಿಸುವುದಕ್ಕಾಗಿ ಪ್ರತಿ ೨ ತಿಂಗಳಿಗೊಮ್ಮೆ ಸಮೀಕ್ಷೆಯ ನಿರೀಕ್ಷಣೆ ಮಾಡುವವೆವು ಎಂದು ಹೇಳಿದೆ.

ಸಂಪಾದಕೀಯ ನಿಲುವು

ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ೪೦ ವರ್ಷ ಬೇಕಾದರೇ ಶಿಕ್ಷೆ ಆಗಲು ಎಷ್ಟು ಸಮಯ ಬೇಕಾಗುವುದು ? ಇದು ಎಲ್ಲಾ ಪಕ್ಷಗಳ ಸರಕಾರಕ್ಕೆ ಲಜ್ಜಾಸ್ಪದ !