ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರ ಸ್ಪಷ್ಟನೆ
ನವದೆಹಲಿ – ನೆರೆಯ ದೇಶದ ಜೊತೆಗೆ (ಪಾಕಿಸ್ತಾನದ ಜೊತೆಗಿನ) ಚರ್ಚೆಯ ಕಾಲ ಮುಗಿದಿದೆ. ಈಗ ಅದರ ಜೊತೆಗೆ ಯಾವ ರೀತಿಯ ಸಂಬಂಧದ ಕಲ್ಪನೆ ಮಾಡುವುದು ? ನಾವು ಹಿಂದೆ ಪಾಕಿಸ್ತಾನದ ಜೊತೆಗೆ ಚರ್ಚೆ ಮಾಡಲು ಅನೇಕ ಬಾರಿ ಪ್ರಯತ್ನಿಸಿದೆವು; ಆದರೆ ಭಯೋತ್ಪಾದನೆಯ ಅಂಶದ ಬಗ್ಗೆ ಅದರ ದ್ವಿಮುಖ ನೀತಿಯಿಂದ ಅದು ಸಾಧ್ಯವಾಗಲಿಲ್ಲ. ಪಾಕಿಸ್ತಾನವು, ಚರ್ಚೆಗಾಗಿ ಪಾಕಿಸ್ತಾನವು ಸಂಪೂರ್ಣವಾಗಿ ಭಯೋತ್ಪಾದನೆ ನಾಶ ಮಾಡಬೇಕಾಗುವುದು. ಈ ಪದಗಳಲ್ಲಿ ಭಾರತದ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಇವರು ಇಲ್ಲಿ ಒಂದು ಕಾರ್ಯಕ್ರಮದಲ್ಲಿ ಮಾತನಾಡುವಾಗ, ಪಾಕಿಸ್ತಾನದ ಜೊತೆಗೆ ಯಾವುದೇ ಚರ್ಚೆ ನಡೆಸಲಾಗದು’, ಎಂದು ಸ್ಪಷ್ಟಪಡಿಸಿದರು. ಆ ಸಮಯದಲ್ಲಿ ಡಾ. ಜೈ ಶಂಕರ್ ಇವರು ಪಾಕಿಸ್ತಾನ, ಬಾಂಗ್ಲಾದೇಶ್ ಮತ್ತು ಮಾಲ್ದಿವ್ ಇವುಗಳಿಗೆ ಸಂಬಂಧಿಸಿದ ಕೆಲವು ಅಂಶಗಳ ಕುರಿತು ಅಭಿಪ್ರಾಯ ಮಂಡಿಸಿದರು.
ಡಾ. ಜೈ ಶಂಕರ್ ಇವರು ಮಂಡಿಸಿರುವ ಅಂಶಗಳು
೧. ನೆರೆಯಲ್ಲಿ ಯಾವಾಗಲೂ ಒಂದು ಒಗಟಂತೆ ಇರುತ್ತದೆ. ಹೀಗೆ ಯಾವ ದೇಶ ಇದೆ, ಯಾರಿಗೆ ಅವರ ನೆರೆಯಿಂದ ಸವಾಲುಗಳು ಇಲ್ಲ ?
೨. ಭಾರತ ಈಗ ಭಯೋತ್ಪಾದನೆ ಮತ್ತು ಚರ್ಚೆ ಒಟ್ಟಿಗೆ ನೋಡಲು ಸಾಧ್ಯವಿಲ್ಲ. ಪಾಕಿಸ್ತಾನಕ್ಕೆ ಭಾರತದ ಜೊತೆಗೆ ಏನಾದರೂ ಚರ್ಚಿಸಬೇಕಾಗಿದ್ದರೆ, ಅದು ಅದರ ನೀತಿಗಳ ಬಗ್ಗೆ ಪುನರ್ಯೋಚನೆ ಮಾಡಬೇಕಾಗುತ್ತದೆ.
೩. ಬಾಂಗ್ಲಾದೇಶದಲ್ಲಿನ ಈ ದಿನ ಸರಕಾರದ ಜೊತೆಗೆ ನಾವು ಚರ್ಚೆ ನಡೆಸುವೆವು. ಇದು ನಮಗಾಗಿ ನೈಸರ್ಗಿಕ ವಿಷಯವಾಗಿದೆ. ಬಾಂಗ್ಲಾದೇಶದಲ್ಲಿ ರಾಜಕೀಯ ಬದಲಾವಣೆ ಆಗಿದೆ ಮತ್ತು ಅದು ಅಪಾಯಕಾರಿ ಇರಬಹುದು ಅಲ್ಲಿ ನಮಗೆ ಪರಸ್ಪರ ಹಿತದ ವಿಷಯದ ಕಡೆಗೆ ಗಮನ ಕೇಂದ್ರೀಕರಿಸಬೇಕಾಗುತ್ತದೆ ಇದನ್ನು ಅದು ಒಪ್ಪಿಕೊಳ್ಳಬೇಕು.
೪. ಮಾಲ್ದಿವದ ಕುರಿತು ನಮ್ಮ ದೃಷ್ಟಿಕೋನದಲ್ಲಿ ಏರಿಳಿತ ಆಗಿದೆ. ಅಲ್ಲಿ ಸ್ಥಿರತೆಯ ಕೊರತೆ ಇದೆ. ಈ ಸಂಬಂಧ ಹೇಗೆ ಇದೆ ಅಂದರೆ, ಇದರಲ್ಲಿ ನಾವು ಹೆಚ್ಚಿನ ಹೂಡಿಕೆ ಮಾಡಿದ್ದೇವೆ.
೫. ಸಾಮಾಜಿಕ ಮಟ್ಟದಲ್ಲಿ ಜನರಲ್ಲಿ ಸಂಬಂಧ ದೃಢವಾಗಿರಬೇಕು. ಇಂದು ಭಾರತದ ಅಪಘಾನಿಸ್ತಾನದ ಜೊತೆಗೆ ಇರುವ ನೀತಿಯ ಸಮೀಕ್ಷೆ ಮಾಡಿದ ನಂತರ ನಮ್ಮ ಗಮನಕ್ಕೆ ಬರುವುದು ಏನೆಂದರೆ, ನಾವು ನಮ್ಮ ಹಿತದ ಕುರಿತು ಬಹಳ ಸ್ಪಷ್ಟವಾಗಿದ್ದೇವೆ. ಅಮೇರಿಕಾದ ಉಪಸ್ಥಿತಿ ಇರುವಾಗ ಅಪಘಾನಿಸ್ತಾನ್ ಮತ್ತು ಈಗ ಅಮೆರಿಕ ಅಲ್ಲಿ ಇಲ್ಲದಿರುವಾಗ ಅಪಘಾನಿಸ್ತಾನದ ಇದರಲ್ಲಿ ವ್ಯತ್ಯಾಸ ಇದೆ ನಾವು ಇದನ್ನು ತಿಳಿದುಕೊಳ್ಳಬೇಕು.
ಪಾಕಿಸ್ತಾನದಿಂದ ಶಾಂಘಾಯ ಸಹಕಾರ ಸಂಘಟನೆಯ ಸಭೆಗಾಗಿ ಪ್ರಧಾನಮಂತ್ರಿ ಮೋದಿ ಇವರಿಗೆ ಆಮಂತ್ರಣ
ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದನಲ್ಲಿ ಅಕ್ಟೋಬರ್ ೧೫ ಮತ್ತು ೧೬ ರಂದು ನಡೆಯುವ ಶಾಂಘಾಯ ಸಹಕಾರ ಸಂಘಟನೆಯ ಸಭೆಗಾಗಿ ಪಾಕಿಸ್ತಾನವು ಪ್ರಧಾನಮಂತ್ರಿ ನರೇಂದ್ರ ಮೋದಿ ಇವರನ್ನು ಆಮಂತ್ರಿಸಿದೆ. ಪಾಕಿಸ್ತಾನದ ವಿದೇಶಿ ಕಾರ್ಯಾಲಯದ ವಕ್ತಾರ ಮುಮ್ತಾಜ್ ಜಹರಾ ಬಲೂಚ್ ಇವರು ಪತ್ರಕರ್ತರ ಸಭೆಯಲ್ಲಿ ಈ ಮಾಹಿತಿ ನೀಡಿದರು.