ಯೂಟ್ಯೂಬ್‌ನ ಮಾರ್ಗಸೂಚಿಯ ಉಲ್ಲಂಘನೆ ಮಾಡಿರುವ ದಾವೆ
ನವದೆಹಲಿ – ಪ್ರಸಿದ್ಧ ಫ್ರೆಂಚ್ ಪತ್ರಕರ್ತ ಫ್ರಾನ್ಸುವಾ ಗೋತಿಯೇ ಇವರ ಯುಟ್ಯೂಬ್ ಚಾನೆಲ್ ಮೇಲೆ ಯೂಟ್ಯೂಬ್ ನಿಷೇಧ ಹೇರಿದೆ. ಯೂಟ್ಯೂಬ್‌ನ ಮಾರ್ಗಸೂಚಿಯನ್ನು ಉಲ್ಲಂಘನೆಯಿಂದ ಈ ಚಾನಲ್ ತೆಗೆದು ಹಾಕಲಾಗಿದೆ. ಇವರ ಚಾನೆಲ್ ಬ್ಯಾನ್ ಬಗ್ಗೆ ಯೂಟ್ಯೂಬ್ ನಿಂದ ಯಾವುದೇ ವಿವರವಾಗಿ ಸ್ಪಷ್ಟೀಕರಣ ನೀಡಲಾಗಿಲ್ಲ. ಈ ಘಟನೆಯ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕಿಸಲಾಗುತ್ತಿದೆ. ‘ಯೂಟ್ಯೂಬ್‌ನ ಈ ಕೃತಿ ಒಂದು ವಿಸ್ತೃತ ಷಡ್ಯಂತ್ರದ ಭಾಗವಾಗಿದೆ’ ಎಂದು ಆರೋಪಿಸಲಾಗುತ್ತಿದೆ. ವಿಶಿಷ್ಟ ವಿಚಾರಧಾರೆಯ ಕುರಿತು ಟೀಕಿಸುವ ವಿಷಯ, ವಿಶೇಷವಾಗಿ ಎಡಪಂಥೀಯ ವಿಚಾರಧಾರೆಯ ಸಂದರ್ಭದಲ್ಲಿ ಅಸಹಮತ ಇರುವ ವಿಷಯವಸ್ತು ಪ್ರಸಾರ ಮಾಡಿರುವುದರಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ, ಎಂದು ಹೇಳಲಾಗಿದೆ.
Francois Gautier Youtube Channel: Famous French journalist Francois Gautier’s YouTube channel has been banned!
Due to alleged Violation of YouTube Guidelines
This action has been taken against Francois Gautier as he is a staunch devotee of Hinduism and a lover of Sanatan Dharma… pic.twitter.com/b2zeZAEKto
— Sanatan Prabhat (@SanatanPrabhat) August 28, 2024
೨೦೨೧ ರಲ್ಲಿ ಅಮಾನತು ಗೊಂಡಿರುವ ಟ್ವಿಟರ್ ಖಾತೆ !
ಮಾರ್ಚ್ ೨೦೨೧ ರಲ್ಲಿ ಕಥಿತ ಸಾಮಾಜಿಕ ಕಾರ್ಯಕರ್ತ ಗ್ರೇಟಾ ಥನಬರ್ಗ್ ಮತ್ತು ಆಕೆಯ ಸಹಕಾರಿ ದಿಶಾ ರವಿ ಇವರನ್ನು ಟೀಕಿಸಿದ ನಂತರ ಗೋತಿಯೇ ಇವರ ಟ್ವಿಟರ್ ಖಾತೆ ಅಮಾನತುಗೊಳಿಸಲಾಗಿತ್ತು. ಥನಬರ್ಗ್ ಇವರ ‘ಟೂಲ್ ಕಿಟ್’ (ಯಾವುದಾದರೂ ಪ್ರಕರಣದಲ್ಲಿ ದೊಡ್ಡ ಪ್ರಮಾಣದ ಪ್ರತಿಭಟನೆ ಮಾಡುವಾಗ ಅದರ ಕೃತಿ ವರದಿ) ಇದರಲ್ಲಿ ಭಾರತ ವಿರುದ್ಧ ಖಲಿಸ್ತಾನಿ ಸಹಭಾಗದ ಸಂದರ್ಭದಲ್ಲಿ ಟೀಕಿಸಿದ್ದರು. ಅದನ್ನು ಟೀಕಿಸಿರುವುದರಿಂದ ಅಮಾನತುಗೊಳಿಸಲಾಗಿತ್ತು.
ಸಂಪಾದಕೀಯ ನಿಲುವು
|