ಹಸಿವಿನಿಂದಾಗುವ ಪ್ರಾಣಹಾನಿಯನ್ನು ತಪ್ಪಿಸಲು ಜನತೆಗೆ ಪ್ರಾಣಿಗಳ ಮಾಂಸವನ್ನು ಆಹಾರವಾಗಿ ನೀಡಲಾಗುವುದು !
ವಿಂಡ್‌ಹೋಕ್ (ನಮೀಬಿಯಾ) – ಆಫ್ರಿಕಾದ ಅನೇಕ ದೇಶಗಳಲ್ಲಿ ಪ್ರಸ್ತುತ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು ಅದರಲ್ಲಿ ನಮೀಬಿಯಾ ದೇಶವು ಬರಗಾಲದಿಂದಾಗಿ ಅತಿ ಹೆಚ್ಚು ಸಂಕಷ್ಟ ಎದುರಿಸುತ್ತಿದೆ. ಅಲ್ಲಿನ ಜನರಿಗೆ ತಿನ್ನಲು ಆಹಾರ ಕೂಡ ಸಿಗದ ಪರಿಸ್ಥಿತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ, ಹಸಿವಿನಿಂದ ನಾಗರಿಕರು ಸಾಯುವುದನ್ನು ತಡೆಯಲು, ನಮೀಬಿಯಾ ಸರಕಾರವು 83 ಆನೆಗಳು ಸೇರಿದಂತೆ, ಕಾಡಿನ 723 ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ನಾಗರಿಕರಿಗೆ ನೀಡಲು ಆದೇಶಿಸಿದೆ. ಈ ನಿಟ್ಟಿನಲ್ಲಿ ನಮೀಬಿಯಾ ಸರ್ಕಾರದ ಪರಿಸರ ಸಚಿವಾಲಯವು ಸುತ್ತೋಲೆಯನ್ನು ಹೊರಡಿಸಿದೆ. ಸರ್ಕಾರವು 83 ಆನೆಗಳು, 300 ಜೀಬ್ರಾಗಳು, 30 ಹಂದಿಗಳು, 60 ಎಮ್ಮೆಗಳು ಸೇರಿದಂತೆ ಒಟ್ಟು 723 ಪ್ರಾಣಿಗಳನ್ನು ಕೊಂದು ಅವುಗಳ ಮಾಂಸವನ್ನು ಸಾರ್ವಜನಿಕರಿಗೆ ಆಹಾರ ನೀಡುವಂತೆ ಆದೇಶಿಸಿದೆ.
ಈ ರೀತಿ ಪ್ರಾಣಿಗಳ ಹತ್ಯೆ ಮಾಡಿ ಅವುಗಳ ಮಾಂಸವನ್ನು ಜನತೆಗೆ ತಿನ್ನಲು ನೀಡುವ ಪರಿಸ್ಥಿತಿ ನಮೀಬಿಯಾದಲ್ಲಿ ಇದು ಮೊದಲ ಬಾರಿಯೇನಲ್ಲ. ಇದಕ್ಕೂ ಮುನ್ನವೂ ಕೂಡ ನಮೀಬಿಯಾ ಇಂತಹ ನಿರ್ಧಾರವನ್ನು ತೆಗೆದುಕೊಂಡಿದೆ. ಕೆಲವು ವರ್ಷಗಳ ಹಿಂದೆ ಬಂದ ಬರಗಾಲದ ವೇಳೆ ಜನರ ಪ್ರಾಣ ಉಳಿಸುವುದಕ್ಕಾಗಿ ಸರಕಾರವು 200ಕ್ಕಿಂತ ಹೆಚ್ಚು ಪ್ರಾಣಿಗಳನ್ನು ಕೊಲ್ಲುವಂತೆ ಆದೇಶ ನೀಡಿತ್ತು.
ಸಂಪಾದಕೀಯ ನಿಲುವುಮಾನವನನ್ನು ಆದಿಮಾನವನನ್ನಾಗಿ ಪರಿವರ್ತಿಸುವುದೇ ಜಗತ್ತಿನಲ್ಲಿ ನಡೆಯುತ್ತಿರುವ ಅಭಿವೃದ್ಧಿಯ ನಾಗಾಲೋಟ ಆಗಿದೆಯೇ? |