ಭಾಗ್ಯನಗರ (ತೆಲಂಗಾಣ) – ಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿವೆ. ಆದ್ದರಿಂದ ಹಿಂದೂ ಸಮುದಾಯದಲ್ಲಿ ಅಸಂತೋಷದ ವಾತಾವರಣ ನಿರ್ಮಾಣವಾಗಿದೆ. ಅಲ್ಲಿಯ ಹಿಂದೂಗಳ ಮತ್ತು ದೇವಸ್ಥಾನದ ರಕ್ಷಣೆ ಮಾಡುವುದಕ್ಕಾಗಿ ಭಾರತ ಸರಕಾರ ತಕ್ಷಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಭಾಗ್ಯನಗರದ ಧರಣಾ ವೃತ್ತದಲ್ಲಿ ಹಿಂದೂ ಜನಾಕ್ರೋಶ ಸಭೆಯ ಆಯೋಜನೆ ಮಾಡಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಸಹಯೋಗದೊಂದಿಗೆ ವಿವಿಧ ಹಿಂದೂ ಸಂಘಟನೆಗಳು ಈ ಸಭೆಯ ಆಯೋಜನೆ ಮಾಡಿದವು.
ಈ ಸಭೆಯಲ್ಲಿ ಏಕತಾ ಮಂಚ, ಹನುಮಾನ ಚಾಲಿಸಾ ಗುಂಪು, ಗ್ಲೋಬಲ್ ಹಿಂದೂ ಹ್ಯೂಮನ್ ರೈಟ್ಸ್ ಕಲೆಕ್ಟಿವ್, ಸನಾತನ ಹಿಂದೂ ಸಂಘ, ಎಚ್೨ಎಚ್, ಭಾರತೀಯ ಸನಾತನ ಸಂಘ, ಧರ್ಮರಕ್ಷಾ, ವಿಶ್ವ ಹಿಂದೂ ಪರಿಷತ್, ಭಜರಂಗದಳ, ಶಿವಸೇನೆ, ವಿಶ್ವಧರ್ಮ ಪರಿರಕ್ಷಣಾ ವೇದಿಕೆ, ಜೆ.ಎಸ್.ಆರ್.ಎಸ್., ಭಾರತೀಯ ಜನತಾ ಯುವ ಮೋರ್ಚಾ, ಹಿಂದೂ ವಾಹಿನಿ, ಅಖಿಲ ಭಾರತೀಯ ಗೋ ಸೇವಾ ಫೌಂಡೇಶನ್ , ಛತ್ರಪತಿ ಶಿವಾಜಿ ಮಹಾರಾಜ ಫೌಂಡೇಶನ್, ವಿಶ್ವ ಹಿಂದೂ ಮಹಾಸಂಘ ಮುಂತಾದ ಹಿಂದುತ್ವನಿಷ್ಠ ಸಂಘಟನೆಗಳು ಸಹಭಾಗಿಯಾಗಿದ್ದವು.