Pakistan Chief Justice Attacked: ಪಾಕ್‌ನ ಮುಖ್ಯ ನ್ಯಾಯಮೂರ್ತಿಗಳಿಗೆ ಕೊಲೆ ಬೆದರಿಕೆ; ಜೀವ ಭಯದಿಂದ ತೀರ್ಪಿನಲ್ಲಿ ಬದಲಾವಣೆ !

ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಕಾಜಿ ಫೈಜ್

ಇಸ್ಲಾಮಾಬಾದ (ಪಾಕಿಸ್ತಾನ) – ಪಾಕಿಸ್ತಾನದ ಸರ್ವೋಚ್ಚ ನ್ಯಾಯಾಲಯವು ಧರ್ಮನಿಂದನೆ ಮಾಡಿದ ಆರೋಪದಿಂದ ಅಹ್ಮದಿಯಾ ಸಮುದಾಯದ ವ್ಯಕ್ತಿಯೊಬ್ಬನನ್ನು ಖುಲಾಸೆಗೊಳಿಸಿದ ತನ್ನ ತೀರ್ಪನ್ನು ರದ್ದುಗೊಳಿಸಿದೆ. ಸರ್ವೋಚ್ಚ ನ್ಯಾಯಾಲಯವು ಈ ಹಿಂದೆ ನೀಡಿದ ತೀರ್ಪಿನಿಂದಾಗಿ, ಸಾವಿರಾರು ಮುಸ್ಲಿಮರು ಸರ್ವೋಚ್ಚ ನ್ಯಾಯಾಲಯಕ್ಕೆ ನುಗ್ಗಿ ಮುಖ್ಯ ನ್ಯಾಯಮೂರ್ತಿಯನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ‘ಮುಖ್ಯ ನ್ಯಾಯಮೂರ್ತಿ ಕಾಜಿ ಫೈಜ್ ಇಸಾ ಅವರನ್ನು ಕೊಂದವರಿಗೆ `ತೆಹ್ರಿಕ್-ಎ-ಲಬ್ಬೆಕ್ ಪಾಕಿಸ್ತಾನ್ (ಟಿಎಲ್‌ಪಿ)” ಜಿಹಾದಿ ಸಂಘಟನೆಯು 1 ಕೋಟಿ ರೂಪಾಯಿ ಬಹುಮಾನ ನೀಡುವುದಾಗಿ ಘೋಷಿಸಿತ್ತು’. ಇದಾದ ಬಳಿಕ ಮುಖ್ಯ ನ್ಯಾಯಮೂರ್ತಿಗಳು ರಾಜೀನಾಮೆ ಪತ್ರ ನೀಡಿದ್ದರು.

ಅಹ್ಮದಿಯಾ ಸಮುದಾಯದ ವ್ಯಕ್ತಿಯನ್ನು ಖುಲಾಸೆಗೊಳಿಸುವ ನಿರ್ಧಾರವನ್ನು ಮರುಪರಿಶೀಲಿಸಬೇಕು ಎಂದು ಪಾಕಿಸ್ತಾನ ಸರಕಾರ ಮನವಿ ಮಾಡಿತ್ತು. ಅದನ್ನು ನ್ಯಾಯಾಧೀಶರು ಅಂಗೀಕರಿಸಿದ್ದಾರೆ. ಇದರೊಂದಿಗೆ ತೀರ್ಪಿನಲ್ಲಿ ಅಹ್ಮದೀಯ ಸಮುದಾಯಕ್ಕೆ ತಮ್ಮ ಧರ್ಮವನ್ನು ಆಚರಿಸುವ ಹಕ್ಕನ್ನು ನೀಡಿದ್ದರು. ಅವರು ಪರಿಷ್ಕೃತ ಆದೇಶದಿಂದ ಹಲವಾರು ‘ವಿವಾದಾತ್ಮಕ ಪ್ಯಾರಾಗಳನ್ನು’ ತೆಗೆದುಹಾಕಿದ್ದಾರೆ. ಪಾಕಿಸ್ತಾನದಲ್ಲಿ ಅಹ್ಮದೀಯ ಸಮುದಾಯವನ್ನು ಮುಸ್ಲಿಂ ಎಂದು ಪರಿಗಣಿಸಲಾಗುವುದಿಲ್ಲ. ಈ ಕಾರಣದಿಂದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ವಿರೋಧಿಸಲಾಗಿತ್ತು.

ಅಹ್ಮದೀಯ ಮುಸ್ಲಿಮರು ಯಾರು?

ಇಸ್ಲಾಂನಲ್ಲಿ ಸರಿಸುಮಾರು 73 ಜಾತಿಗಳಿವೆ. ಅವರಲ್ಲಿ ಅಹಮದಿಯಾ ಒಂದು ಜಾತಿ. ಇದನ್ನು 1889 ರಲ್ಲಿ ಮಿರ್ಜಾ ಗುಲಾಮ್ ಅಹ್ಮದ್ ಸ್ಥಾಪಿಸಿದರು. ಇಸ್ಲಾಂನಲ್ಲಿ ಪ್ರವಾದಿ ಮಹಮ್ಮದ ಪೈಗಂಬರ ಒಬ್ಬರೇ ಪ್ರವಾದಿ ಆಗಿದ್ದಾರೆ; ಆದರೆ ಅಹ್ಮದ್ ತನ್ನನ್ನು ಪ್ರವಾದಿ ಎಂದು ಪರಿಗಣಿಸಿದ್ದರು. ಅವರು ತಮ್ಮನ್ನು ‘ಮಸೀಹಾ’ (ಜಗತ್ತಿನ ಕಲ್ಯಾಣಕ್ಕಾಗಿ ಅವತರಿಸಿದ ವ್ಯಕ್ತಿ) ಎಂದು ಪರಿಗಣಿಸಿದರು. ಈ ಕಾರಣಗಳಿಗಾಗಿಯೇ ಇತರ ಮುಸ್ಲಿಂ ಸಮುದಾಯಗಳು ಅಹ್ಮದೀಯ ಮುಸ್ಲಿಮರನ್ನು ‘ಮುಸ್ಲಿಮರು’ ಎಂದು ಪರಿಗಣಿಸುವುದಕ್ಕಿಂತ ಹೆಚ್ಚಾಗಿ ‘ಕಾಫಿರ್’ಗಳು (ಇಸ್ಲಾಂ ಧರ್ಮದ ನಂಬಿಕೆಯಿಲ್ಲದವರು) ಎಂದು ಪರಿಗಣಿಸುತ್ತಾರೆ.

ಸಂಪಾದಕೀಯ ನಿಲುವು

ಪಾಕಿಸ್ತಾನದಲ್ಲಿ ಕಾನೂನಿನ ನಿಯಮವಲ್ಲ, ಬದಲಾಗಿ ಜಿಹಾದಿಗಳು, ಮತಾಂಧರು ಮತ್ತು ಭಯೋತ್ಪಾದಕರ ರಾಜ್ಯವಾಗಿದೆ ಎಂದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ!