ಇಲಾನ್ ಮಸ್ಕ್ ಇವರಿಂದ ಯುಕ್ರೆನದಲ್ಲಿನ ಇಂಟರ್ನೆಟ್ ಸೇವೆ ನಿಲ್ಲಿಸುವ ಎಚ್ಚರಿಕೆ !

ವಾಷಿಂಗ್ಟನ್ (ಅಮೇರಿಕಾ) – ‘ಟೆಸ್ಲಾ’ ಮತ್ತು ‘ಸ್ಟಾರಲಿಂಕ’ ಈ ಕಂಪನಿಯ ಮುಖ್ಯಸ್ಥ ಮತ್ತು ‘ಡಿಓಜಿಇ’ ಯ(ಅಮೇರಿಕ ಸರಕಾರದ ಪ್ರಭಾವ ಹೆಚ್ಚಿಸುವ ಇಲಾಖೆ) ಸಂಚಾಲಕ ಇಲಾನ ಮಸ್ಕ್ ಇವರು ಯುಕ್ರೇನಿಗೆ ಇಂಟರ್ನೆಟ್ ನಿಲ್ಲಿಸುವ ಎಚ್ಚರಿಕೆ ನೀಡಿದ್ದಾರೆ. ಮಸ್ಕ ಇವರು, ಯುಕ್ರೆನಲ್ಲಿನ ‘ಸ್ಟಾರ್ ಲಿಂಕ್’ ವ್ಯವಸ್ಥೆಯನ್ನು ನಿಲ್ಲಿಸಿದರೆ, ಯುಕ್ರೇನಿನ ರಕ್ಷಣಾ ವ್ಯವಸ್ಥೆ ಹದಗೆಡುವುದು ಎಂದು ಹೇಳಿದರು. ಮಸ್ಕ್ ಇವರ ‘ಸ್ಟಾರ್ ಲಿಂಕ್’ ಇಂಟರ್ನೆಟ್ ವ್ಯವಸ್ಥೆ ಯುಕ್ರೇನಿಗೆ ಸೈನಿಕ ಸಂಪರ್ಕ ಕಾಪಾಡುವುದಕ್ಕಾಗಿ ಉಪಯುಕ್ತವಾಗಿದೆ.

೧. ಮಸ್ಕ ಅವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿ, ಸ್ಟಾರ್ ಲಿಂಕ್ ವ್ಯವಸ್ಥೆ ಇದು ಯುಕ್ರೆನೀನ ಸೈನ್ಯದ ಬೆನ್ನೆಲಬಾಗಿದೆ. ನಾನು ಯುದ್ಧ ಮತ್ತು ಜನರ ಸಾವಿನಿಂದ ಆತಂಕಗೊಂಡಿದ್ದೇನೆ.

೨. ಸ್ಟಾರ್ ಲಿಂಕ್ ‘ಲೋ ಅರ್ಥ ಆರ್ಬಿಟ್’ ನಲ್ಲಿ ಉಪಗ್ರಹದ ಅಂತರಾಷ್ಟ್ರೀಯ ನೆಟ್ವರ್ಕ್ ಸಂಚಾಲನೆ ಮಾಡುತ್ತದೆ. ಮತ್ತು ಅನೇಕ ದೇಶಗಳಲ್ಲಿ ಬಾಹ್ಯಾಕಾಶ ಆಧಾರಿತ ಇಂಟರ್ನೆಟ್ ಸೌಲಭ್ಯ ಒದಗಿಸುತ್ತದೆ.

೩. ಈ ಹಿಂದೆ ಅಮೇರಿಕಾದಿಂದ ಯುಕ್ರೇನಿಗೆ ಸಿಗುವ ೮ ಸಾವಿರದ ೭೦೦ ಕೋಟಿ ರೂಪಾಯಿ ಸೈನ್ಯ ಸಹಾಯ ನಿಲ್ಲಿಸಲಾಗಿದೆ. ಅಮೇರಿಕಾದ ಸಹಾಯ ನಿಲ್ಲಿಸುವ ನಿರ್ಣಯದ ಕುರಿತು ಯುಕ್ರೇನಿನ ರಾಷ್ಟ್ರಾಧ್ಯಕ್ಷ ವ್ಲಾದಿಮಿರ್ ಝೆಲೆಕ್ಸಿ ಇವರಿಂದ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವೈಟ್ ಹೌಸಿನ ಓರ್ವ ಅಧಿಕಾರಿಗಳು, ಝೆಲಕ್ಸಿ ಇವರ ದುರ್ವರ್ತನೆಯಿಂದಲೇ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಝೇಲಾಕ್ಸಿ ಏನಾದರೂ ಯುದ್ಧ ನಿಲ್ಲಿಸಲು ರಾಜಿ ಮಾಡಿಕೊಳ್ಳೋ ಪ್ರಯತ್ನ ಮಾಡಿದರೆ ಆಗ ಬಹುಶ ಈ ನಿಷೇಧ ತೆರವುಗೊಳಿಸಬಹುದು, ಎಂದು ಹೇಳಿದರು.