‘ದಾಳಿಗಳು ಧಾರ್ಮಿಕವಲ್ಲ, ಬದಲಾಗಿ ರಾಜಕೀಯ ಉದ್ದೇಶಗಳಿಂದ ಕೂಡಿರುತ್ತವೆ’ ಎಂದು ದಾವೆ !
ನವ ದೆಹಲಿ – ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ, ಅವರ ದೇವಸ್ಥಾನಗಳ ಮೇಲೆ ದಾಳಿಗಳು ನಡೆಯುತ್ತಿರುವಾಗ ಪಾಶ್ಚಿಮಾತ್ಯ ಮತ್ತು ಕಮ್ಯುನಿಸ್ಟ ಪ್ರಸಾರಮಾಧ್ಯಮಗಳು ಜಿಹಾದಿ ಮುಸಲ್ಮಾನರನ್ನು ಬೆಂಬಲಿಸುತ್ತಾ ಹಿಂದೂಗಳ ಮೇಲಿನ ದೌರ್ಜನ್ಯಗಳನ್ನು ಸುಳ್ಳೆಂದು ನಿರ್ಧರಿಸುವ ಪ್ರಯತ್ನಗಳನ್ನು ಮಾಡುತ್ತಿವೆ. ಜರ್ಮನಿಯ ಸುದ್ದಿವಾಹಿನಿ `ಡಾಯಚೆ ವೆಲೆ’ ಇದು ಆಗಸ್ಟ 19 ರಂದು ಒಂದು ವಿಡಿಯೋ ಪ್ರಸಾರ ಮಾಡಿ ಅದರಲ್ಲಿ ಬಾಂಗ್ಲಾದೇಶದ ಹಿಂದೂಗಳ ಮೇಲೆ ನಡೆದ ದಾಳಿಯನ್ನು ಹತ್ತಿಕ್ಕುವ ಪ್ರಯತ್ನಗಳನ್ನು ನಡೆಸಲಾಗಿದೆ ಮತ್ತು ಭಾರತೀಯ ಪ್ರಸಾರ ಮಾಧ್ಯಮಗಳ ಮೇಲೆ ಸುಳ್ಳು ಮಾಹಿತಿ ಹರಡುವ ಆರೋಪವನ್ನು ಮಾಡಿದೆ. ಹಾಗೆಯೇ ಹಿಂದೂಗಳ ಮೇಲಿನ ದಾಳಿಯ ಹಿಂದಿನ ಕಾರಣ ಧಾರ್ಮಿಕವಾಗಿರದೇ ರಾಜಕೀಯವಾಗಿದೆಯೆಂದು ದಾವೆ ಮಾಡಿದೆ. ಈ ವೀಡಿಯೊ 2 ನಿಮಿಷ 29 ಸೆಕೆಂಡುಗಳದ್ದಾಗಿದೆ.
‘ಡಾಯಚೆ ವೆಲೆ’ ವಿಡಿಯೋದಲ್ಲಿ ಏನಿದೆ?
1. ಈ ವೀಡಿಯೊದಲ್ಲಿ, ಬಾಂಗ್ಲಾದೇಶದ ಜೆಸೋರನಲ್ಲಿರುವ ಹಜರತ ಗರೀಬ ಶಾಹ ಮಜಾರ ಶರೀಫ ಅನ್ನು ಸುಡಲಾಗಿದೆಯೆಂದು ಉಲ್ಲೇಖಿಸಲಾಗಿದೆ. ಇದನ್ನು ಹಿಂದೂಗಳ ದೇವಸ್ಥಾನಗಳ ಮೇಲಿನ ದಾಳಿಯೆಂದು ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರ ಮಾಡಲಾಗಿತ್ತು, ಎಂದು ಹೇಳಲಾಗಿದೆ. ಈ ವಿಡಿಯೋದಲ್ಲಿ, ‘ಬಾಂಗ್ಲಾದೇಶದಲ್ಲಿ ಒಂದು ಹಿಂದೂ ದೇವಸ್ಥಾನ ಸುಡುತ್ತಿದೆ’, ಎಂದು ಹೇಳಲಾಗುತ್ತಿದ್ದರೂ, ಈ ಘಟನೆ ಸುಳ್ಳಾಗಿದೆ ಎಂದು ಹೇಳಿದೆ. ಬಾಂಗ್ಲಾದೇಶದ ಆಂದೋಲನದಲ್ಲಿ ತಥಾಕಥಿತ ಸುಡಲಾಗಿರುವ ಹಿಂದೂ ದೇವಸ್ಥಾನದ ಅಥವಾ ಮನೆಯಗಳ ವಿಡಿಯೋ ಇದೆ. ಇಂತಹ ದಾಳಿಗಳು ಇಲ್ಲಿ ನಡೆಯುತ್ತಿವೆ. ಆದರೆ ಎಲ್ಲವೂ ಸತ್ಯವಲ್ಲ ಎಂದು ಹೇಳಿದೆ.
2. ಈ ವೀಡಿಯೊದಲ್ಲಿ ಥಾಮಸ ಕೀನ ಹೆಸರಿನ ವಿಜ್ಞಾನಿಯು, ಈ ದಾಳಿಗಳು ಧಾರ್ಮಿಕ ಕಾರಣಗಳಿಂದ ನಡೆದಿದೆಯೋ ಅಥವಾ ಇಲ್ಲವೋ? ಎನ್ನುವುದು ಸ್ಪಷ್ಟವಾಗಿಲ್ಲ. ಈ ದಾಳಿಗಳು ಧಾರ್ಮಿಕ ಉದ್ದೇಶದಿಂದ ಆಗಿದೆಯೆಂದು ಹೇಳಲಾಗಿದೆ; ಆದರೆ ಅದು ಹಾಗಲ್ಲ.
3. ಹಿಂದೂಗಳ ಮೇಲಿನ ದಾಳಿಗಳು ಧಾರ್ಮಿಕ ಕಾರಣಗಳಿಗಿಂತ ರಾಜಕೀಯ ಕಾರಣಗಳನ್ನು ಹೊಂದಿವೆ. ಇದಕ್ಕೆ ಕಾರಣ ಶೇಖ ಹಸೀನಾರನ್ನು ಹಿಂದೂಗಳ ರಕ್ಷಕರೆಂದು ನೋಡಲಾಗುತ್ತದೆಯೆಂದು ಇದರಲ್ಲಿ ಹೇಳಲಾಗಿದೆ.
ಸಂಪಾದಕೀಯ ನಿಲುವುಜರ್ಮನಿಯ ಇಂತಹ ಪ್ರಸಾರಮಾಧ್ಯಮಗಳು ನಾಜಿ ಮನಃಸ್ಥಿತಿಯನ್ನು ಹೊಂದಿವೆ, ಎಂದೇ ಹೇಳಬೇಕಾಗುತ್ತದೆ. ಪ್ರಪಂಚದಾದ್ಯಂತ ಇರುವ ಹಿಂದೂಗಳು ಈ ಬಗ್ಗೆ ಅವರನ್ನು ಪ್ರಶ್ನಿಸಬೇಕು ! |