ಢಾಕಾ ಕಾಲೇಜಿನ ವಸತಿಗೃಹದಲ್ಲಿನ ೩ ಸಾವಿರ ಹಿಂದೂ ವಿದ್ಯಾರ್ಥಿಗಳು ಭಯದ ಕರಿ ನೆರಳಿನಲ್ಲಿ !
ನವ ದೆಹಲಿ – ಬಾಂಗ್ಲಾದೇಶದಲ್ಲಿನ ಶೇಖ ಹಸೀನಾ ಸರಕಾರ ಪದಚ್ಯುತಗೊಳಿಸುವ ಕೇಂದ್ರ ಢಾಕಾ ವಿದ್ಯಾಪೀಠವಾಗಿತ್ತು. ಅಲ್ಲಿಂದಲೇ ವಿದ್ಯಾರ್ಥಿಗಳ ಪ್ರತಿಭಟನೆಗೆ ಆರಂಭವಾಗಿದ್ದು; ಆದರೆ ಇಂದಿಗೂ ಕೂಡ ಢಾಕಾ ವಿದ್ಯಾಪೀಠದಲ್ಲಿ ೩ ಸಾವಿರಗಿಂತಲೂ ಹೆಚ್ಚಿನ ವಿದ್ಯಾರ್ಥಿಗಳು ಎಷ್ಟು ಹೆದರಿದ್ದಾರೆ ಎಂದರೆ, ಅವರು ಹೊರಗೆ ಹೋಗಲು ಸಾಧ್ಯವಾಗುತ್ತಿಲ್ಲ. ಒಂದು ರೀತಿ ಅವರು ಅಲ್ಲಿ ಕೈದಿಯಂತೆ ಇದ್ದಾರೆ, ಎಂದು ‘ಝೀ ನ್ಯೂಸ್’ ಮಾಹಿತಿ ನೀಡಿದೆ. ‘ಝೀ ನ್ಯೂಸ್’ನ ಪ್ರತಿನಿಧಿ ಈ ವಿದ್ಯಾಪೀಠಕ್ಕೆ ಭೇಟಿ ನೀಡಿದ ನಂತರ ಮಾಹಿತಿ ಬೆಳಕಿಗೆ ಬಂದಿದೆ.
‘ಬಾಂಗ್ಲಾದೇಶದಲ್ಲಿನ ಹಿಂದೂ ವಿದ್ಯಾರ್ಥಿಗಳು ಶೇಖ್ ಹಸಿನಾ ಸರಕಾರದ ವಿರುದ್ಧ ನಡೆದಿರುವ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಇಂದು ಅವರು, ಅವರ ಜೀವಕ್ಕೆ ಅಪಾಯ ಇದೆ ಎಂದು ಹೇಳುತ್ತಿದ್ದಾರೆ. ಈ ಪ್ರತಿಭಟನೆಯಲ್ಲಿ ಮೀಸಲಾತಿ ವಿರೋಧಿ ಎಂದು ವರ್ಣಿಸಲಾಗುತ್ತಿದ್ದರು ಕೂಡ ಅದು ಈಗ ಹಿಂದೂ ವಿರೋಧಿ ಆಗಿದೆ’, ಎಂದು ಹಿಂದೂ ವಿದ್ಯಾರ್ಥಿಗಳು ಹೇಳಿರುವ ವಾರ್ತೆ ಝೀ ನ್ಯೂಸ್ ಪ್ರಸಾರ ಮಾಡಿದೆ.
ಠಾಕೂರಗಾವದಲ್ಲಿನ ಹಿಂದೂ ಬಹುಸಂಖ್ಯಾತ ಗ್ರಾಮಗಳ ಮೇಲೆ ಪ್ರತಿರಾತ್ರಿ ದಾಳಿ !
ಠಾಕೂರಗಾವದಲ್ಲಿನ ನಾಪಿತಪಾಡಾದಲ್ಲಿ ಜಿಹಾದಿ ಮುಸಲ್ಮಾನರಿಂದ ಅನೇಕ ಹಿಂದೂಗಳ ಮನೆಗಳನ್ನು ಸುಟ್ಟು ಹಾಕಲಾಗಿದೆ. ಜಿಹಾದಿಗಳ ದೊಡ್ಡ ಗುಂಪುಗಳಿಂದ ನಾಪಿತಪಾಡ ಗ್ರಾಮದಲ್ಲಿ ಹಿಂದುಗಳ ಮನೆಗಳನ್ನು ಗುರಿ ಮಾಡಲಾಗುತ್ತಿದೆ. ಈ ಗ್ರಾಮ ಹಿಂದೂ ಬಹುಸಂಖ್ಯಾತವಾಗಿತ್ತು. ಠಾಕೂರಗಾವದಲ್ಲಿನ ಹಿಂದೂ ಬಹುಸಂಖ್ಯಾತ ಗ್ರಾಮಗಳಲ್ಲಿ ಹೆಚ್ಚುಕಡಿಮೆ ಪ್ರತಿರಾತ್ರಿ ದಾಳಿಗಳು ನಡೆಯುತ್ತಿವೆ. ಜಿಹಾದಿ ಮುಸಲ್ಮಾನ ಪ್ರತಿರಾತ್ರಿ ಹಿಂದುಗಳ ೧೦ ರಿಂದ ೧೫ ಮನೆಗಳನ್ನು ಸುಟ್ಟು ಹಾಕುತ್ತಿದ್ದಾರೆ.
ಸಂಪಾದಕೀಯ ನಿಲುವುಬಾಂಗ್ಲಾದೇಶದಲ್ಲಿನ ಹಿಂದೂಗಳ ಮೇಲಿನ ದಾಳಿಗಳು ನಿಂತಿವೆ, ಎಂದು ಹೇಳಲಾಗುತ್ತಿದ್ದರು, ವಾಸ್ತವ ಪರಿಸ್ಥಿತಿ ಹಾಗೆ ಇಲ್ಲ ಮತ್ತು ಅದು ಸಾಮಾನ್ಯವಾಗಲು ಸಾಧ್ಯವಿಲ್ಲ, ಇದನ್ನು ತಿಳಿಯಿರಿ ! |