ಉಕ್ರೇನ್‌ನಿಂದ ಮಾಸ್ಕೋ ಮೇಲೆ ಎಲ್ಲಕ್ಕಿಂತ ದೊಡ್ಡ ಡ್ರೋನ್ ದಾಳಿ !

ಪ್ರಧಾನಿ ಮೋದಿ ಆಗಸ್ಟ್ 23ರಿಂದ ಉಕ್ರೇನ್ ಪ್ರವಾಸದಲ್ಲಿ !

ಮಾಸ್ಕೋ (ರಷ್ಯಾ) – ಪ್ರಧಾನಿ ನರೇಂದ್ರ ಮೋದಿ ಪೂರ್ವ ಯುರೋಪ್ ಪ್ರವಾಸದಲ್ಲಿದ್ದಾರೆ. ಅವರು ಆಗಸ್ಟ್ 21 ಮತ್ತು 22 ರಂದು ಪೋಲೆಂಡ್‌ನಲ್ಲಿ ಇರುವರು ಹಾಗೂ ಆಗಸ್ಟ್ 23 ರಂದು ಪ್ರಧಾನಿ ಉಕ್ರೇನ್‌ಗೆ ಹೋಗುವರು. 45 ವರ್ಷಗಳ ನಂತರ ಮೊದಲ ಬಾರಿಗೆ ಭಾರತದ ಪ್ರಧಾನಿ ಉಕ್ರೇನ್‌ನ ಪ್ರವಾಸ ಮಾಡಲಿದ್ದಾರೆ. ಪ್ರಧಾನಿ ಮೋದಿಯವರ ಭೇಟಿಯ 2 ದಿನಗಳ ಮೊದಲೇ ಉಕ್ರೇನ್ ಮಾಸ್ಕೋದ ಮೇಲೆ ಇದುವರೆಗಿನ ಎಲ್ಲಕ್ಕಿಂತ ಅತಿದೊಡ್ಡ ಡ್ರೋನ್ ದಾಳಿಯನ್ನು ನಡೆಸಿದೆ ಎಂದು ರಷ್ಯಾದ ರಾಜಧಾನಿ ಮಾಸ್ಕೋ ನಗರದ ಮೇಯರ್ ಸೆರ್ಗೆಯ್ ಸೊಬಯಾನಿನ್ ಹೇಳಿದ್ದಾರೆ.

ರಷ್ಯಾದ ವಾಯುಪಡೆಯು ಮಾಸ್ಕೋ ಕಡೆಗೆ ಬರುತ್ತಿದ್ದ 10 ಡ್ರೋನ್‌ಗಳನ್ನು ನಾಶಪಡಿಸಿದೆ. ಪೊಡೊಲ್ಸ್ಕ್ ನಗರದ ಮೇಲೆ ಬೀಳಿಸಿದ ಕೆಲವು ಡ್ರೋನ್‌ಗಳನ್ನು ಸಹ ನಾಶಪಡಿಸಲಾಗಿದೆ ಎಂದು ಸೊಬಯಾನಿನ್ ಹೇಳಿದರು. ಇದರಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕಳೆದ ವರ್ಷ ಮೇ ತಿಂಗಳಲ್ಲಿ ನಡೆದ ಡ್ರೋನ್ ದಾಳಿಯ ನಂತರ ನಡೆದ ಎಲ್ಲಕ್ಕಿಂತ ಅತಿ ದೊಡ್ಡ ದಾಳಿ ಇದಾಗಿದೆ. ಮೇ 2023 ರಲ್ಲಿ, ಮಾಸ್ಕೋದಲ್ಲಿ 8 ಡ್ರೋನ್ ಗಳನ್ನು ನಾಶಪಡಿಸಲಾಗಿತ್ತು.