ಮಹಿಳಾ ವೈದ್ಯರ ಭದ್ರತೆಗಾಗಿ ರಾಷ್ಟ್ರೀಯ ಕಾರ್ಯಪಡೆ ಸ್ಥಾಪಿಸಿರಿ ! – ಸರ್ವೋಚ್ಚ ನ್ಯಾಯಾಲಯ

  • ಕೋಲಕಾತಾದಲ್ಲಿ ಮಹಿಳಾ ವೈದ್ಯೆಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಪ್ರಕರಣ

  • ರಾಜ್ಯ ಸರಕಾರಕ್ಕೆ ಛೀಮಾರಿ

  • ತನಿಖೆಯ ಸ್ಥಿತಿಗತಿಯ ವರದಿಯನ್ನು ಆಗಸ್ಟ್ 22 ರಂದು ಸಲ್ಲಿಸಲು ಆದೇಶ

ನವ ದೆಹಲಿ – ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಮೂವರು ನ್ಯಾಯಾಧೀಶರ ಪೀಠವು ಕೋಲಕಾತಾದಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಮಹಿಳಾ ವೈದ್ಯರ ಕೆಲಸದ ಸ್ಥಳಗಳಲ್ಲಿ ಭದ್ರತೆಗಾಗಿ ಕಾರ್ಯಪದ್ಧತಿಯನ್ನು ಸಿದ್ಧಪಡಿಸಲು 9 ಸದಸ್ಯರ ರಾಷ್ಟ್ರೀಯ ಕಾರ್ಯಪಡೆಯನ್ನು ಸ್ಥಾಪಿಸಲು ಆದೇಶವನ್ನು ನೀಡಿದೆ. ಆಗಸ್ಟ್ 20 ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.

1. ನ್ಯಾಯಾಲಯವು ವೈದ್ಯರ ಕೆಲಸದ ಸ್ಥಳಗಳಲ್ಲಿ ಅವರ ಭದ್ರತೆಗಾಗಿ ಕಾರ್ಯವಿಧಾನಗಳನ್ನು ಸೂಚಿಸಲು ಈ ಪಡೆಯನ್ನು ಸ್ಥಾಪಿಸಿತು. ಇದರಲ್ಲಿ ವಿವಿಧ ಹಿನ್ನೆಲೆಯುಳ್ಳ ವೈದ್ಯರು ಇರಲಿದ್ದಾರೆ. ಅವರು ಸಾರ್ವತ್ರಿಕ ಮಟ್ಟದಲ್ಲಿ ಅನುಸರಿಸಲು ಸಾಧ್ಯವಾಗುವ ಕೆಲವು ವಿಧಾನಗಳನ್ನು ಸೂಚಿಸುವರು ಎಂದು ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದರು.

2. ನ್ಯಾಯಾಲಯ ಬಂಗಾಳ ಸರಕಾರಕ್ಕೆ ಪ್ರತಿಭಟನಾಕಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದೆ. ವೈದ್ಯರು ಮತ್ತು ಮಹಿಳಾ ವೈದ್ಯರ ಭದ್ರತೆಯು ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಕೆಲವು ಕ್ರಮಗಳನ್ನು ತೆಗೆದುಕೊಳ್ಳಲು ದೇಶವು ಇನ್ನೊಂದು ಬಲಾತ್ಕಾರದ ದಾರಿಯನ್ನು ಕಾಯಬಾರದು ಎಂದೂ ನ್ಯಾಯಾಲಯ ಹೇಳಿದೆ.

3. ಆಗಸ್ಟ್ 14 ರ ರಾತ್ರಿ ಆಸ್ಪತ್ರೆಯಲ್ಲಿ ನಡೆದ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಚಂದ್ರಚೂಡ ಇವರು ರಾಜ್ಯ ಸರಕಾರಕ್ಕೆ ಪ್ರಶ್ನೆಗಳನ್ನು ಕೇಳಿದರು. `ಆಸ್ಪತ್ರೆಯ ಮೇಲೆ ಗುಂಪು ದಾಳಿ ನಡೆಸಿತು. ಇದರಲ್ಲಿ ಉಪಕರಣಗಳ ಧ್ವಂಸವಾಯಿತು’ ಈ ಸಮಯದಲ್ಲಿ ಪೊಲೀಸರು ಏನು ಮಾಡುತ್ತಿದ್ದರು? ಪೊಲೀಸರಿಗೆ ಮೊದಲು ಅಪರಾಧ ನಡೆದ ಸ್ಥಳವನ್ನು ಭದ್ರಪಡಿಸುವುದು ಆವಶ್ಯಕವಾಗಿದೆ’ ಎಂದೂ ನ್ಯಾಯಮೂರ್ತಿಗಳು ಹೇಳಿದರು.

4. ನ್ಯಾಯಾಲಯವು ಬಂಗಾಳ ಸರಕಾರವನ್ನು ಛೀಮಾರಿ ಹಾಕುತ್ತಾ, ಮರಣೋತ್ತರ ಪರೀಕ್ಷೆಯ ವರದಿ ಮೊದಲೇ ಬಂದಿದ್ದರೂ, ಅಪರಾಧವನ್ನು ದಾಖಲಿಸಲು ಏಕೆ ತಡ ಮಾಡಿದರು? ಈ ಸಮಯದಲ್ಲಿ ನ್ಯಾಯಾಲಯವು ಆಗಸ್ಟ್ 14ರ ರಾತ್ರಿ ಆರ್.ಜಿ. ಕರ ಆಸ್ಪತ್ರೆಯ ಮೇಲೆ ಸಾವಿರಾರು ಜನರ ಗುಂಪು ನಡೆಸಿದ ದಾಳಿಯ ತನಿಖೆ ಹಾಗೂ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತನಿಖೆಯ ಸ್ಥಿತಿಗತಿ ವರದಿಯನ್ನು ಆಗಸ್ಟ್ 22ರೊಳಗೆ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ನೀಡಿದೆ.

ರಾಷ್ಟ್ರೀಯ ಕಾರ್ಯ ಪಡೆಯಲ್ಲಿರುವ ಸದಸ್ಯರು !

ರಾಷ್ಟ್ರೀಯ ಕಾರ್ಯ ಪಡೆಯಲ್ಲಿ ಡಾ.ಆರ್. ಸರೀನ, ಡಾ.ಡಿ. ನಾಗೇಶ್ವರ ರೆಡ್ಡಿ, ಡಾ.ಎಂ. ಶ್ರೀನಿವಾಸ, ಡಾ. ಪ್ರತಿಮಾ ಮೂರ್ತಿ, ಡಾ.ಗೋವರ್ಧನ ದತ್ತ ಪುರಿ, ಡಾ. ಸೌಮಿತ್ರ ರಾವತ, ಪ್ರಾ. ಅನಿತಾ ಸಕ್ಸೇನಾ, ಪ್ರಾ. ಪಲ್ಲವಿ ಸಪ್ರೆ ಮತ್ತು ಡಾ. ಪದ್ಮಾ ಶ್ರೀವಾಸ್ತವ ಸೇರಿದ್ದಾರೆ.