ಗೋವಾದ ಸನಾತನ ಸಂಸ್ಥೆಯ ರಾಮನಾಥಿ ಆಶ್ರಮದಲ್ಲಿ ಸ್ವಾಗತ ಕಕ್ಷೆಯಲ್ಲಿ ಒಂದು ಶ್ರೀಕೃಷ್ಣನ ಚಿತ್ರವಿದೆ. ೪.೭.೨೦೨೩ ರಂದು ಶ್ರೀಕೃಷ್ಣನ ಚಿತ್ರಕ್ಕೆ ಹಾಕಿದ ಹೂವಿನ ಮಾಲೆಯ ಸುದರ್ಶನಚಕ್ರ ಇರುವಲ್ಲಿನ ಹೂವುಗಳು ತನ್ನಿಂತಾನೇ ಕಳಚಿ ಕೆಳಗೆ ಬಿದ್ದವು. ಉಳಿದ ಮಾಲೆ ಯಥಾಸ್ಥಿತಿಯಲ್ಲಿತ್ತು. ಈ ವಿಷಯದಲ್ಲಿ ಶ್ರೀಕೃಷ್ಣನ ಕೃಪೆಯಿಂದ ನನಗೆ ಸೂಕ್ಷ್ಮದಿಂದ ಲಭಿಸಿದ ಜ್ಞಾನವನ್ನು ಮುಂದೆ ನೀಡಲಾಗಿದೆ.
೧. ರಾಮನಾಥಿ ಆಶ್ರಮದಲ್ಲಿನ ಶ್ರೀಕೃಷ್ಣನ ಚಿತ್ರ ಜಾಗೃತಾವಸ್ಥೆಯಲ್ಲಿರುವುದು
ಆಶ್ರಮದಲ್ಲಿನ ಶ್ರೀಕೃಷ್ಣನ ಚಿತ್ರ ಜಾಗೃತಾವಸ್ಥೆಯಲ್ಲಿದೆ. ಆದ್ದರಿಂದ ಶ್ರೀಕೃಷ್ಣನ ಪ್ರತಿಯೊಂದು ಅವಯವದಿಂದ ಮತ್ತು ಅವನ ಸುದರ್ಶನಚಕ್ರದಿಂದ ತಾರಕ ಮತ್ತು ಮಾರಕ ಕಾರ್ಯ ನಿರಂತರವಾಗಿ ನಡೆಯುತ್ತಿರುತ್ತದೆ.
೨. ಶ್ರೀಕೃಷ್ಣನ ಚಿತ್ರ ಜಾಗೃತಾವಸ್ಥೆಯಲ್ಲಿರುವುದರ ಕಾರಣಗಳು
ಅ. ಆಶ್ರಮದಲ್ಲಿ ಪರಾತ್ಪರ ಗುರು ಡಾ. ಆಠವಲೆಯವರು ಪ್ರತ್ಯಕ್ಷ ಉಪಸ್ಥಿತರಿದ್ದಾರೆ. ಅವರ ‘ನಿಃಸ್ವಾರ್ಥ ಸಾಧನೆ ಮತ್ತು ಭಕ್ತಿ’ಗೆ ಪ್ರಸನ್ನನಾಗಿ ಶ್ರೀಕೃಷ್ಣನಿಗೆ ‘ರಾಮನಾಥಿ ಆಶ್ರಮಕ್ಕಾಗಿ ಕಾರ್ಯವನ್ನು ಮಾಡಬೇಕು’, ಎನ್ನುವ ಇಚ್ಛೆಯಾಗುತ್ತದೆ.
ಆ. ಆಶ್ರಮದಲ್ಲಿ ಸಂತರು ಮತ್ತು ಭಾವವಿರುವ ಕೆಲವು ಸಾಧಕರಿದ್ದಾರೆ. ಅದರಿಂದಾಗಿ ಶ್ರೀಕೃಷ್ಣನ ಅವಸ್ಥೆ ಪ್ರಸನ್ನವಾಗಿರುತ್ತದೆ. ಅದರಿಂದಾಗಿ ಅವನು ತನ್ನ ಸ್ಥಿರ ನಿಲುವನ್ನು ತೊರೆದು ‘ಆಶ್ರಮದ ರಕ್ಷಣೆ ಮತ್ತು ಸಾಧಕರ ಜೋಪಾಸನೆಯ’ ಕಾರ್ಯ ವನ್ನು ಮಾಡುತ್ತಾನೆ.
೩. ಶ್ರೀಕೃಷ್ಣನ ಚಿತ್ರದ ಸುದರ್ಶನಚಕ್ರ ಇರುವ ಭಾಗದ ಹೂವುಗಳೇ ಬೀಳುವುದರ ಹಿಂದಿನ ಕಾರಣ
ರಾಮನಾಥಿ ಆಶ್ರಮದ ಮೇಲೆ ಯಾವಾಗಲೂ ಸೂಕ್ಷ್ಮದಿಂದ ಅಸುರರ ಆಕ್ರಮಣಗಳು ಆಗುತ್ತಿರುತ್ತವೆ. ೪.೭.೨೦೨೩ ರಂದು ಅಸುರರ ಒಂದು ಗುಂಪು ಆಶ್ರಮದ ಮೇಲೆ ಸೂಕ್ಷ್ಮದಿಂದ ಆಕ್ರಮಣ ನಡೆಸುವ ಸಿದ್ಧತೆಯಲ್ಲಿತ್ತು. ಅದರ ಮೂಲಕ ಸಾಧಕರಲ್ಲಿ ವ್ಯಾಧಿಗಳನ್ನು (ರೋಗಗಳನ್ನು) ಉತ್ಪನ್ನ ಮಾಡಿ ಅದನ್ನು ಸಾಧಕರಲ್ಲಿ ಹರಡುವ ನಿಯೋಜನೆಯಿತ್ತು. ಇದನ್ನು ನೋಡಿ ಶ್ರೀಕೃಷ್ಣನಿಗೆ ಕೋಪ ಬಂದಿತು. ಆದ್ದರಿಂದ ಆ ಅಸುರರನ್ನು ತಡೆಯಲು ಶ್ರೀಕೃಷ್ಣನ ಸುದರ್ಶನಚಕ್ರ ಕ್ಷಣಾರ್ಧದಲ್ಲಿ ಕಾರ್ಯ ನಿರತವಾಯಿತು. ಆಗ ಸುದರ್ಶನಚಕ್ರದಲ್ಲಿ ಬೃಹತ್ಪ್ರಮಾಣದಲ್ಲಿ ಮಾರಕ ಶಕ್ತಿ ಕಾರ್ಯನಿರತವಾಗಿ ಅದು ಅಸುರರ ದಿಕ್ಕಿಗೆ ಪ್ರಕ್ಷೇಪಣೆಯಾಯಿತು. ಅದರ ಪರಿಣಾಮವೆಂದು ಸುದರ್ಶನಚಕ್ರದ ಮೇಲಿನ ಹೂಮಾಲೆಯ ಹೂವುಗಳು ಕಳಚಿ ಬಿದ್ದವು ಮತ್ತು ಉಳಿದ ಮಾಲೆ ಯಥಾಸ್ಥಿತಿಯಲ್ಲಿ ಉಳಿಯಿತು.
೪. ಶ್ರೀಕೃಷ್ಣನ ಸುದರ್ಶನಚಕ್ರ ಕಾರ್ಯನಿರತವಾದುದರಿಂದಾದ ಲಾಭ
ಶ್ರೀಕೃಷ್ಣನ ಸುದರ್ಶನಚಕ್ರದಿಂದ ನಿರ್ಮಾಣವಾದ ಅಪಾರ ಮಾರಕ ಶಕ್ತಿಯಿಂದ ಆಶ್ರಮದಲ್ಲಿ ವ್ಯಾಧಿಗಳನ್ನು ಉತ್ಪನ್ನ ಮಾಡಲು ಬರುತ್ತಿದ್ದ ಅಸುರರ ಪ್ರಭಾವ ಕ್ಷಣಾರ್ಧದಲ್ಲಿ ಕಡಿಮೆಯಾಯಿತು ಮತ್ತು ಅವು ಹಿಂತಿರುಗಿ ಪಾತಾಳಕ್ಕೆ ಹೋದವು. ಅದರಿಂದ ಆಶ್ರಮದಲ್ಲಿನ ಸಾಧಕರ ಸಂಕಟ ತಪ್ಪಿಹೋಯಿತು.
೫. ಶ್ರೀಕೃಷ್ಣನ ಸುದರ್ಶನಚಕ್ರದ ವೈಶಿಷ್ಟ್ಯ
ಶ್ರೀಕೃಷ್ಣನ ಸುದರ್ಶನಚಕ್ರದಲ್ಲಿ ಅವನ ‘ಕ್ರೋಧಿಣಿ’ ಎಂಬ ಹೆಸರಿನ ಒಂದು ‘ಪರಾಶಕ್ತಿ’ಯ ಅಂದರೆ ಉಚ್ಚ ಶಕ್ತಿಯ ವಾಸವಿರುತ್ತದೆ.
೫ ಅ. ಶ್ರೀಕೃಷ್ಣನ ‘ಕ್ರೋಧಿಣಿ’ ಶಕ್ತಿಯ ವರ್ಣನೆ : ಈ ಶಕ್ತಿ ದೇವೀಸ್ವರೂಪವಾಗಿದೆ. ‘ಕ್ರೋಧ’ವು ಅವಳ ಮೂಲ ಸ್ವಭಾವ ಆಗಿದೆ. ಆದ್ದರಿಂದ ಅವಳಿಗೆ ‘ಕ್ರೋಧಿಣಿ’, ಎನ್ನುತ್ತಾರೆ. ಅವಳ ರೂಪ ಉಗ್ರವಾಗಿದ್ದು ಕಣ್ಣುಗಳು ಕೆಂಪು ಮತ್ತು ದೊಡ್ಡ ಆಕಾರದ್ದಾಗಿವೆ. ಅವಳ ಶರೀರ ಯಾವಾಗಲೂ ಬಿಸಿಯಾಗಿರುತ್ತದೆ. ‘ಅಸುರರಲ್ಲಿ ಭಯ ಉತ್ಪನ್ನ ಮಾಡುವುದು ಅಥವಾ ಅವರನ್ನು ಭಸ್ಮ ಮಾಡುವುದು’ ಅವಳ ಧರ್ಮ, ಅಂದರೆ ಕಾರ್ಯವಾಗಿದೆ.
೫ ಆ. ಶ್ರೀಕೃಷ್ಣನ ‘ಕ್ರೋಧಿಣಿ’ ಶಕ್ತಿಯು ಅಗ್ನಿದೇವನ ಪತ್ನಿ ‘ಜ್ವಾಲಿನಿ’ ಇವಳ ಸಖಿಯಾಗಿದ್ದಾಳೆ : ಅಗ್ನಿದೇವನ ಪತ್ನಿಯ ಹೆಸರು ‘ಜ್ವಾಲಿನಿ’ ಎಂದಾಗಿದೆ. ಅವಳು ಜ್ವಲನಕ್ಕೆ ಸಂಬಂಧಿಸಿದ ಕಾರ್ಯವನ್ನು ಮಾಡುತ್ತಾಳೆ. ಶ್ರೀಕೃಷ್ಣನ ”ಕ್ರೋಧಿಣಿ” ಶಕ್ತಿಯು ಅಗ್ನಿದೇವನ ಪತ್ನಿ ‘ಜ್ವಾಲಿನಿ’ಯ ಸಖಿಯಾಗಿದ್ದಾಳೆ. ಅದರ ವಿಶ್ಲೇಷಣೆಯನ್ನು ಮುಂದೆ ನೀಡಲಾಗಿದೆ. ಶ್ರೀಕೃಷ್ಣನ ”ಕ್ರೋಧಿಣಿ” ಶಕ್ತಿಗೆ ಅಸುರರ ಬಗ್ಗೆ ಕ್ರೋಧ ಬರುತ್ತದೆ. ಆದ್ದರಿಂದ ಅಸುರರ ಪ್ರಭಾವ ಕ್ಷಣಾರ್ಧದಲ್ಲಿ ಕಡಿಮೆಯಾಗುತ್ತದೆ. ಅವಳಿಗೆ ಇನ್ನೂ ಹೆಚ್ಚು ಕೋಪ ಬಂದರೆ ಅವಳು ಅಸುರರನ್ನು ಸುಟ್ಟು ಹಾಕುತ್ತಾಳೆ. ಆಗ ಅಗ್ನಿದೇವನ ಪತ್ನಿ ‘ಜ್ವಾಲಿನಿ’ದೇವಿ ಕಾರ್ಯ ಮಾಡುತ್ತಾಳೆ. ಅಸುರರ ನಾಶಕ್ಕಾಗಿ ಶ್ರೀಕೃಷ್ಣನ ”ಕ್ರೋಧಿಣಿ” ಶಕ್ತಿ ಮತ್ತು ಅಗ್ನಿ ದೇವರ ‘ಜ್ವಾಲಿನಿ’ ಶಕ್ತಿ ಒಟ್ಟಾಗಿ ಕಾರ್ಯ ಮಾಡುತ್ತಾರೆ. ಆದ್ದರಿಂದ ‘ಅವರಿಬ್ಬರೂ ಪರಸ್ಪರ ಸಖಿಯರಾಗಿದ್ದಾರೆ’, ಎನ್ನಲಾಗಿದೆ.’
೬. ಶ್ರೀಕೃಷ್ಣನ ಸುದರ್ಶನಚಕ್ರ ಕಾರ್ಯ ಮಾಡುವುದರ ಹಂತಗಳು
ಯಾವಾಗ ಅಸುರರಿಂದ ಭಕ್ತರ ಮೇಲೆ ಆಕ್ರಮಣವಾಗುವುದಿರು ತ್ತದೆಯೋ, ಆಗ ಶ್ರೀಕೃಷ್ಣನಿಗೆ ಕೋಪ ಬರುತ್ತದೆ. ಅವನ ಇಚ್ಛೆಗನುಸಾರ ಅದೇ ಕ್ಷಣ ಅವನ ಕೈಯ ಬೆರಳಲ್ಲಿರುವ ಸುದರ್ಶನಚಕ್ರ ತಿರುಗಲು ಆರಂಭವಾಗುತ್ತದೆ ಮತ್ತು ಅದರಲ್ಲಿನ ”ಕ್ರೋಧಿಣಿ” ಶಕ್ತಿ ತಕ್ಷಣ ಪ್ರಕಟವಾಗಿ ಮರುಕ್ಷಣವೇ ‘ಕ್ರೋಧಿಣಿ’ ಅಸುರರಲ್ಲಿ ಭಯಂಕರ ಭಯ ಉತ್ಪನ್ನ ಮಾಡುತ್ತಾಳೆ ಅಥವಾ ಅವರನ್ನು ನಾಶ ಮಾಡುತ್ತಾಳೆ. ಶ್ರೀಕೃಷ್ಣನ ಆಜ್ಞೆಗನುಸಾರ ಕ್ರೋಧಿಣಿಯ ಕಾರ್ಯ ಕೆಲವೇ ಕ್ಷಣಗಳಲ್ಲಿ ಪೂರ್ಣವಾಗುತ್ತದೆ.
೭. ರಾಮನಾಥಿ ಆಶ್ರಮದಲ್ಲಿನ ಶ್ರೀಕೃಷ್ಣನ ಚಿತ್ರದಲ್ಲಿ ಪ್ರಕಟವಾಗುವ ವಿವಿಧ ಮಾರಕ ಭಾವ ಮತ್ತು ಅದರಿಂದ ಅಸುರರ ಮೇಲಿನ ಪರಿಣಾಮ
೭ ಅ. ಶ್ರೀಕೃಷ್ಣನ ಚಿತ್ರದಲ್ಲಿನ ಕಣ್ಣುಗಳು ಕೋಪದಿಂದ ಅನಿರೀಕ್ಷಿತವಾಗಿ ದೊಡ್ಡದಾಗುವುದು : ಶ್ರೀಕೃಷ್ಣನ ಚಿತ್ರ ಜಾಗೃತವಾಗಿರುವುದರಿಂದ ಅದರ ಕಣ್ಣುಗಳು ಕೆಲವೊಮ್ಮೆ ದೊಡ್ಡದಾಗುತ್ತವೆ. ಆಗ ಅಸುರರು ರಾಮನಾಥಿ ಆಶ್ರಮದ ಮೇಲೆ ಆಕ್ರಮಣ ಮಾಡುವ ಸಿದ್ಧತೆಯಲ್ಲಿರುತ್ತಾರೆ. ಆಗ ಮನುಷ್ಯರಿಗೆ ಹೇಗೆ ಪ್ರಖರ ಸೂರ್ಯಪ್ರಕಾಶದ ತೇಜವನ್ನು ಸಹಿಸಲು ಸಾಧ್ಯವಾಗುವುದಿಲ್ಲವೋ, ಹಾಗೆಯೆ ಅಸುರರಿಗೆ ರಾಮನಾಥಿ ಆಶ್ರಮದ ಕಡೆಗೆ ನೋಡಿದಾಗ ತೊಂದರೆಯಾಗುತ್ತದೆ. ಆದ್ದರಿಂದ ಅವರು ಆಶ್ರಮದ ಮೇಲೆ ಸೂಕ್ಷ್ಮದಲ್ಲಿ ಆಕ್ರಮಣ ಮಾಡುವುದನ್ನು ನಿಲ್ಲಿಸುತ್ತಾರೆ.
೭ ಆ. ಶ್ರೀಕೃಷ್ಣನ ಚಿತ್ರದಲ್ಲಿನ ಸುದರ್ಶನಚಕ್ರ ಕಾರ್ಯನಿರತವಾಗುವುದು : ಯಾವಾಗ ಶ್ರೀಕೃಷ್ಣನ ಚಿತ್ರದಲ್ಲಿನ ಸುದರ್ಶನಚಕ್ರ ಕಾರ್ಯನಿರತ ವಾಗುತ್ತದೆಯೋ, ಆಗ ಅಸುರರಿಗೆ ರಾಮನಾಥಿ ಆಶ್ರಮದ ಸುತ್ತಲೂ ಸೂಕ್ಷ್ಮದಿಂದ ಸುದರ್ಶನಚಕ್ರ ತಿರುಗುತ್ತಿರುವ ದೃಶ್ಯ ಕಾಣಿಸುತ್ತದೆ. ಆದ್ದರಿಂದ ಇಂತಹ ಪ್ರಸಂಗಗಳಲ್ಲಿ ಅಸುರರು ಆಶ್ರಮದ ಮೇಲೆ ಆಕ್ರಮಣ ಮಾಡಲು ಮುಂದಾಗುವುದಿಲ್ಲ.
೭ ಇ. ಶ್ರೀಕೃಷ್ಣನ ಚಿತ್ರದಲ್ಲಿನ ಕಣ್ಣುಗಳು ಕೋಪದಿಂದ ದೊಡ್ಡದಾಗು ವುದು ಮತ್ತು ಅವನ ಸುದರ್ಶನಚಕ್ರ ಕಾರ್ಯನಿರತವಾಗುವುದು, ಇದರಲ್ಲಿನ ವ್ಯತ್ಯಾಸ : ಯಾವಾಗ ಶ್ರೀಕೃಷ್ಣನ ಚಿತ್ರದಲ್ಲಿನ ಕಣ್ಣುಗಳು ಕೋಪದಿಂದ ದೊಡ್ಡದಾಗುತ್ತವೆಯೋ, ಆಗ ಆಶ್ರಮದ ಮೇಲೆ ಸೂಕ್ಷ್ಮದಿಂದ ಆಕ್ರಮಣ ಮಾಡುವ ಅಸುರರ ಕಪ್ಪುಶಕ್ತಿ ದೊಡ್ಡ ಪ್ರಮಾಣದಲ್ಲಿ ನಾಶವಾಗುತ್ತದೆ ಮತ್ತು ಆಗ ಆ ಅಸುರರಿಗೆ ಸೀಮಿತ ಸ್ವರೂಪದಲ್ಲಿ ವೇದನೆಗಳು ಆಗುತ್ತವೆ ಮತ್ತು ಶ್ರೀಕೃಷ್ಣನ ಚಿತ್ರದಲ್ಲಿನ ಸುದರ್ಶನಚಕ್ರ ಕಾರ್ಯನಿರತವಾದಾಗ ಆಕ್ರಮಣ ಮಾಡುವ ಆ ಅಸುರರ ಕಪ್ಪು ಶಕ್ತಿ ದೊಡ್ದಪ್ರಮಾಣದಲ್ಲಿ ನಾಶವಾಗುತ್ತದೆ ಮತ್ತು ಆಗ ಆ ಅಸುರರಿಗೆ ಹೆಚ್ಚು ಪ್ರಮಾಣದಲ್ಲಿ ವೇದನೆಗಳು ಆಗುತ್ತವೆ.’
– ಶ್ರೀ. ರಾಮ ಹೊನಪ (ಸೂಕ್ಷ್ಮದಿಂದ ಪ್ರಾಪ್ತವಾದ ಜ್ಞಾನ). ಸನಾತನ ಆಶ್ರಮ, ರಾಮನಾಥಿ ಗೋವಾ. (೮.೭.೨೦೨೩)