ಪ್ರೀತಿ ಮತ್ತು ಸೂಕ್ಷ್ಮವನ್ನು ಅರಿಯುವ ಕ್ಷಮತೆ ಇರುವ ಸನಾತನದ ಮಂಗಳೂರಿನ ಬಾಲಕಸಂತರಾದ ಪೂ. ಭಾರ್ಗವರಾಮ (೭ ವರ್ಷ)

ಪೂ. ಭಾರ್ಗವರಾಮ ಭರತ ಪ್ರಭು

ಮಾರ್ಚ್ ೨೦೨೩ ರಲ್ಲಿ ನನ್ನ ಶಾರೀರಿಕ ಸ್ಥಿತಿ ಸರಿ ಇರಲಿಲ್ಲ. ಅದರಿಂದ ನಾನು ವೈದ್ಯಕೀಯ ಉಪಚಾರಕ್ಕಾಗಿ ಮತ್ತು ನಾಮಜಪ ಮುಂತಾದ ಉಪಾಯ ಮಾಡಲು ಗೋವಾದ ರಾಮನಾಥಿ ಆಶ್ರಮಕ್ಕೆ ಬಂದಿದ್ದೆನು. ಆಗ ಗುರುಕೃಪೆಯಿಂದ ನನಗೆ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಪ್ರಭು ಇವರ ಸತ್ಸಂಗವು ದೊರಕಿತು. ಆಗ ಪೂ. ಭಾರ್ಗವರಾಮ ಇವರಿಂದ ನನಗೆ ಕಲಿಯಲು ಸಿಕ್ಕಿದ ಅಂಶಗಳನ್ನು ಮತ್ತು ಬಂದ ಅನುಭೂತಿಗಳನ್ನು ಇಲ್ಲಿ ನೀಡುತ್ತಿದ್ದೇನೆ.

ಸುಶ್ರೀ (ಕು.) ಪೂನಂ ಚೌಧರಿ

೧. ಪೂ. ಭಾರ್ಗವರಾಮ ಇವರು ಎಲ್ಲ ಬಾಲಕಸಾಧಕರಿಗಾಗುವಷ್ಟು ಮಾತ್ರ ಚಿಕ್ಕಿಯನ್ನು ತೆಗೆದುಕೊಳ್ಳುವುದು

”ನನ್ನ ಕೈ ಮತ್ತು ಕಾಲಿನಲ್ಲಿ ಗಂಟುಗಳಾಗಿತ್ತು. ಆದ್ದರಿಂದ ನನಗೆ ರಾತ್ರಿ ನಿದ್ದೆ ಬರುತ್ತಿರಲಿಲ್ಲ. ಅದಕ್ಕಾಗಿ ನನಗೆ ಪ್ರತಿದಿನ ಅಗ್ನಿಹೋತ್ರ ಮಾಡಲು ಹೇಳಿದ್ದರು. ನಾನು ಕೋಣೆಯಲ್ಲಿ ಅಗ್ನಿಹೋತ್ರ ಮಾಡುತ್ತಿರುವಾಗ ಪೂ. ಭಾರ್ಗವರಾಮ ಇವರು ಬರುತ್ತಿದ್ದರು. ಒಮ್ಮೆ ನಾನು ಅಗ್ನಿಹೋತ್ರವಾದ ಮೇಲೆ ಚಿಕ್ಕಿ ನೀಡಿದೆನು. ಪೂ. ಭಾರ್ಗವರಾಮ ಇವರಿಗೆ ರಾಜಗಿರಿ ಲಾಡು ಮತ್ತು ಚಿಕ್ಕಿ ಇಷ್ಟವಾಗುತ್ತದೆ. ಅದರನಂತರ ನಾನು ಪೂ. ಭಾರ್ಗವರಾಮ ಇವರಲ್ಲಿ ”ನೀವು ಉಳಿದ ಎಲ್ಲ ಚಿಕ್ಕಿಗಳನ್ನು ತೆಗೆದುಕೊಳ್ಳಿ’ ಎಂದು ಹೇಳಿದೆ.’ ಆಗ ಅವರು ”ಎಲ್ಲ ಬಾಲಸಾಧಕರನ್ನು ಬಿಟ್ಟು ನಾನೊಬ್ಬನೇ ಹೇಗೆ ಚಿಕ್ಕಿ ತಿನ್ನಲಿ ?’’ ಎಂದರು ಮತ್ತು ಉಳಿದ ಎಲ್ಲ ಚಿಕ್ಕಿಗಳನ್ನು ಎಲ್ಲರಿಗೂ ಹಂಚಿದರು ಮತ್ತು ಪ್ರತಿಯೊಬ್ಬ ಬಾಲಸಾಧಕರಿಗೆ ಎಷ್ಟು ಚಿಕ್ಕಿ ನೀಡಿದರೋ ಅಷ್ಟೇ ಚಿಕ್ಕಿಯನ್ನು ತಾವೂ ತೆಗೆದುಕೊಂಡರು,

೨. ಪ್ರೇಮಭಾವ

ಒಮ್ಮೆ ಓರ್ವ ಬಾಲಸಾಧಕನು ನನ್ನ ಕೋಣೆಗೆ ಬಂದನು. ಅವನು ಇತರ ಬಾಲಸಾಧಕರ ಜೊತೆ ಬೆರೆಯುತ್ತಿರಲಿಲ್ಲ. ಇದು ಪೂ. ಭಾರ್ಗವರಾಮ ಇವರ ಗಮನಕ್ಕೆ ಬಂದ ಮೇಲೆ ಅವರು ತನ್ನ ಆಟದ ವಾಹನವನ್ನು ಆ ಬಾಲಸಾಧಕನಿಗೆ ಆಟವಾಡಲು ನೀಡಿದರು. ಅದರ ನಂತರ ಆ ಬಾಲಸಾಧಕನು ಎಲ್ಲರೊಂದಿಗೆ ಆಡಲು ಆರಂಭಿಸಿದನು.

೩. ಸೂಕ್ಷ್ಮವನ್ನು ಅರಿಯುವ ಕ್ಷಮತೆ

ಒಮ್ಮೆ ಅಗ್ನಿಹೋತ್ರದ ಸಮಯದಲ್ಲಿ ಪೂ. ಭಾರ್ಗವರಾಮ ಇವರು ”ಈಗ ಭಗವಾನ ಪರಶುರಾಮ ಮತ್ತು ಅವರೊಂದಿಗೆ ಇತರ ದೇವತೆಗಳು ಇಲ್ಲಿ ಉಪಸ್ಥಿತರಿದ್ದಾರೆ’’ ಎಂದು ಹೇಳಿದರು.

೪. ಬಂದ ಅನುಭೂತಿ

೪ ಅ. ಪೂ. ಭಾರ್ಗವರಾಮ ತೊಡೆಯ ಮೇಲೆ ಕುಳಿತಾಗ ಕೆಟ್ಟ ಶಕ್ತಿಯ ತೊಂದರೆ ದೂರವಾಗಿ ಆನಂದ ದೊರೆಯುವುದು : ನಾನು ಆಗ್ನಿಹೋತ್ರ ಮಾಡುವಾಗ ಪೂ. ಭಾರ್ಗವರಾಮ ನನ್ನ ತೊಡೆಯ ಮೇಲೆ ಕುಳಿತುಕೊಳ್ಳುತ್ತಿದ್ದರು. (ಪೂಜ್ಯ ಭಾರ್ಗವರಾಮ ಇವರ ತಾಯಿ ಸೌ. ಭವಾನಿ ಪ್ರಭು ಇವರು ”ಪೂ. ಭಾರ್ಗವರಾಮ ಇವರು ಸಾಮಾನ್ಯವಾಗಿ ಯಾರ ತೊಡೆಯಲ್ಲಿ ಕುಳಿತುಕೊಳ್ಳುವುದಿಲ್ಲ’’ ಎಂದು ಹೇಳಿದರು.) ಆಗ ನನಗೆ ಆಗುತ್ತಿದ್ದ ಕೆಟ್ಟ ಶಕ್ತಿಯ ತೊಂದರೆಯು ಪೂ. ಭಾರ್ಗವರಾಮ ಇವರಿಂದ ದೂರವಾಗಿ ನನಗೆ ತುಂಬಾ ಆನಂದ ದೊರೆಯುತ್ತಿತ್ತು.

೪ ಆ. ಒಮ್ಮೆ ನನಗೆ ‘ಅಗ್ನಿಹೋತ್ರದ ಕುಂಡ ಮಂದಿರದಂತೆ’ ಕಾಣಿಸಿತು.

೪ ಇ. ಪೂ. ಭಾರ್ಗವರಾಮ ಇವರ ಚರಣಗಳಿಗೆ ದೈವೀ ಸುಗಂಧ ಬರುತ್ತದೆ.

೪ ಈ. ಅಗ್ನಿಹೋತ್ರದ ಅಗ್ನಿ ಪೂ. ಭಾರ್ಗವರಾಮ ಇವರ ದಿಕ್ಕಿನಲ್ಲಿ ಹೋಗುವುದು : ಒಮ್ಮೆ ಪೂ. ಭಾರ್ಗವರಾಮ ಇವರು ನನ್ನಲ್ಲಿ ”ನಾನು ಯಾವ ದಿಕ್ಕಿನಲ್ಲಿ ಕುಳಿತುಕೊಳ್ಳುವೆನೋ ಆ ದಿಕ್ಕಿನಲ್ಲಿ ಅಗ್ನಿಹೋತ್ರದ ಅಗ್ನಿ ಬರುತ್ತದೆ’ ಎಂದು ಹೇಳಿದರು. ಆಗ ಓರ್ವ ಬಾಲಸಾಧಕಿಯು ಅವರಿಗೆ ಬೇರೆ ಜಾಗದಲ್ಲಿ ಕುಳಿತುಕೊಳ್ಳಲು ಹೇಳಿದಳು. ಆಗ ಪೂ. ಭಾರ್ಗವರಾಮ ಇವರು ಅವಳು ಹೇಳಿದ ಜಾಗದಲ್ಲಿ ಕುಳಿತುಕೊಂಡರು. ಆಗ ಪೂ. ಭಾರ್ಗವರಾಮ ಯಾವ ಜಾಗದಲ್ಲಿ ಕುಳಿತುಕೊಂಡಿದ್ದರೋ ಆ ದಿಕ್ಕಿನಲ್ಲಿ ಅಗ್ನಿ ಹೋಗುತ್ತಿತ್ತು.

೪ ಉ. ಅಗ್ನಿಹೋತ್ರ ಮಾಡುತ್ತಿರುವಾಗ ಪೂ. ಭಾರ್ಗವರಾಮ ಇಲ್ಲಿ ಸೂಕ್ಷ್ಮದಿಂದ ಉಪಸ್ಥಿತರಾಗಿರುತ್ತಾರೆ ಎಂದು ಅರಿವಾಗುತ್ತದೆ. ಪ.ಪೂ. ಡಾಕ್ಟರರ ಕೃಪೆಯಿಂದ ನನಗೆ ಪೂ. ಭಾರ್ಗವರಾಮ ಅವರಲ್ಲಿನ ದೇವತ್ವ ಪ್ರಕಟವಾಗುವ ಕ್ಷಣ ಅನುಭವಿಸಲು ದೊರಕಿದ್ದಕ್ಕಾಗಿ ಗುರುದೇವರ (ಪ.ಪೂ. ಡಾಕ್ಟರರ) ಪಾವನ ಚರಣಗಳಲ್ಲಿ ಕೋಟಿ ಕೋಟಿ ಕೃತಜ್ಞತೆ ವ್ಯಕ್ತ ಮಾಡುತ್ತೇನೆ.

– ಸುಶ್ರೀ (ಕು.) ಪೂನಂ ಚೌಧರಿ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೧.೫.೨೦೨೪)