ಬಾಂಗ್ಲಾ ಗೃಹ ಸಚಿವ ಹುಸೇನರಿಂದ ಬೆದರಿಕೆ
ಢಾಕಾ – ಬಾಂಗ್ಲಾದೇಶದ ಮಧ್ಯಂತರ ಸರಕಾರವು ಅಧಿಕಾರವನ್ನು ವಹಿಸಿಕೊಂಡಿದೆ; ಆದರೆ ಕೆಲವು ನಗರಗಳಲ್ಲಿ ಹಿಂಸಾಚಾರದ ಘಟನೆಗಳು ಮುಂದುವರಿದಿವೆ. ಬಾಂಗ್ಲಾದೇಶದ ಗೃಹಸಚಿವ (ಗೃಹಸಚಿವರ ಸಲಹೆಗಾರ) ಬ್ರಿಗೇಡಿಯರ ಜನರಲ್(ನಿವೃತ್ತ) ಎಂ. ಸಖಾವತ ಹುಸೇನ್ ಅವರು ಹಿಂದೂ ಸಹಿತ ಅಲ್ಪಸಂಖ್ಯಾತರ ಭದ್ರತೆಯ ಭರವಸೆ ನೀಡಿದ್ದಾರೆ. ಭಾರತವು ತನ್ನ ನೆರೆಯ ದೇಶವೆಂದು ಬಾಂಗ್ಲಾದೇಶಕ್ಕೆ ಸಹಾಯ ಮಾಡಬೇಕು; ಆದರೆ ನಮ್ಮ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಬಾರದು. ಭಾರತವು ಭಾಂಗ್ಲಾದೇಶದ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಿದರೆ, ಅದರ ಪರಿಸ್ಥಿತಿಯೂ ಚೆನ್ನಾಗಿರುವುದಿಲ್ಲವೆಂದು ಅವರು ಒಂದು ಸಂದರ್ಶನದಲ್ಲಿ ಹೇಳಿದ್ದಾರೆ.
ಹುಸೇನ ಮಾತನ್ನು ಮುಂದುವರಿಸಿ, ಭಾರತವು ಶೇಖ ಹಸೀನಾರಿಗೆ ಸಹಾಯ ಮಾಡುವುದನ್ನು ನಾವು ನಿರೀಕ್ಷಿಸಿರಲಿಲ್ಲ. ಹೀಗಿದ್ದರೂ, ಭಾರತ ಮತ್ತು ಬಾಂಗ್ಲಾದೇಶದ ನಡುವೆ ಕಾಶ್ಮೀರದಂತಹ ವಿಷಯಗಳ ಮೇಲೆ ಯಾವುದೇ ಹೋರಾಟವಿಲ್ಲ. ಮಾಜಿ ಪ್ರಧಾನಿ ಶೇಖ್ ಹಸೀನಾ ಅವರು ಸೇಂಟ್ ಮಾರ್ಟಿನ್ ದ್ವೀಪವನ್ನು ಅಮೇರಿಕೆಗೆ ನೀಡದೇ ಇದ್ದುದರಿಂದ ಅವರು ಬಾಂಗ್ಲಾದೇಶದಲ್ಲಿ ಅರಾಜಕತೆಯನ್ನು ಸೃಷ್ಟಿಸಿದರು ಎಂದು ಆರೋಪಿಸಿದ್ದರು. ಆ ವಿಷಯದ ಕುರಿತು ವಿಚಾರಿಸಿದಾಗ ಹುಸೇನ ಮಾತನಾಡಿ, ಈ ಹೇಳಿಕೆ ಹಾಸ್ಯಾಸ್ಪದವಾಗಿದೆ. ಸೇಂಟ್ ಮಾರ್ಟಿನ್ ದ್ವೀಪದಲ್ಲಿ ಒಂದು ದೊಡ್ಡ ಅಂಟೆನಾವನ್ನು ಕೂಡ ಸ್ಥಾಪಿಸಲು ಉಪಯುಕ್ತವಿಲ್ಲ. ಅದು ಕೇವಲ ಮೂರು ಕಿಲೋಮೀಟರ ಉದ್ದವಾಗಿದೆ. ಇಂತಹ ಹೇಳಿಕೆಗಳಿಂದ ಅವರು ಗಮನವನ್ನು ಬೇರೆಡೆಗೆ ತಿರುಗಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದರು.
ಸಂಪಾದಕೀಯ ನಿಲುವುಪಾಕಿಸ್ತಾನ ಜೊತೆ ಈಗ ಪುಟ್ಟ ಬಾಂಗ್ಲಾದೇಶವೂ ಭಾರತಕ್ಕೆ ಬೆದರಿಕೆ ಹಾಕಲು ಆರಂಭಿಸಿದೆ. ಈ ಎರಡೂ ದೇಶಗಳ ವಿರುದ್ಧ ಭಾರತ ಆಕ್ರಮಣಕಾರಿ ನೀತಿಯನ್ನು ಎಂದಿಗೆ ಅವಲಂಬಿಸುತ್ತದೆಯೇ ? |