ಪ್ಯಾರಿಸ್ ನಲ್ಲಿ ಸಾವಿರಾರು ಹಿಂದುಗಳಿಂದ ಬಾಂಗ್ಲಾದೇಶದ ಹಿಂದುಗಳ ನರಸಂಹಾರದ ವಿರುದ್ಧ ಪ್ರತಿಭಟನೆ !

ಪ್ಯಾರಿಸ್ (ಫ್ರಾನ್ಸ್) – ಇಲ್ಲಿಯ ಐತಿಹಾಸಿಕ ‘ಪ್ಲೇಸ್ ದೇ ಲಾ ರಿಪಬ್ಲಿಕ್’ (ರಿಪಬ್ಲಿಕ್ ಸ್ಕ್ವೇರ್) ಇಲ್ಲಿಯ ಸ್ಥಳೀಯ ಸಮಯದ ಪ್ರಕಾರ ಆಗಸ್ಟ್ ೧೨ ರಂದು ಮಧ್ಯಾಹ್ನ ೩ ಗಂಟೆಗೆ ಸಾವಿರಾರು ಹಿಂದುಗಳು ಒಟ್ಟಾಗಿ ಸೇರಿದ್ದರು. ಅವರು ಬಾಂಗ್ಲಾದೇಶದಲ್ಲಿನ ಹಿಂದೂಗಳ ನರಸಂಹಾರದ ವಿರುದ್ಧ ಧ್ವನಿ ಎತ್ತಿ ಬಲವಾಗಿ ಪ್ರತಿಭಟನೆ ನಡೆಸಿದರು. ಆ ಸಮಯದಲ್ಲಿ ‘ವರ್ಲ್ಡ್ ಹಿಂದೂ ಫೆಡರೇಶನ್’ ಮತ್ತು ‘ಜಸ್ಟೀಸ್ ಮೇಕರ್ಸ್ ಬಾಂಗ್ಲಾದೇಶ’ ಈ ಸಂಘಟನೆಯ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿಭಟನೆಯಲ್ಲಿ ಸಹಭಾಗಿದ್ದರು. ಇದರ ಮಾಹಿತಿ ‘ವರ್ಲ್ಡ್ ಹಿಂದೂ ಫೆಡರೇಶನ್’ನ ಹಿಂದುತ್ವನಿಷ್ಠರು ಸನಾತನ ಪ್ರಭಾತೆಗೆ ತಿಳಿಸಿದರು.

೧. ಈ ಸಮಯದಲ್ಲಿ ಬಾಂಗ್ಲಾದೇಶದಲ್ಲಿನ ಅಲ್ಪಸಂಖ್ಯಾತ ಹಿಂದುಗಳ ಮೇಲೆ ನಡೆಯುತ್ತಿರುವ ಮೊಘಲರ ಅತ್ಯಾಚಾರ, ಅವರ ದೇವಸ್ಥಾನಗಳ ಮೇಲೆ ನಡೆಯುತ್ತಿರುವ ದಾಳಿಗಳು ಮುಂತಾದರ ವಿರುದ್ಧ ತೀವ್ರ ಘೋಷಣೆಗಳು ನೀಡಲಾಯಿತು. ಹಾಗೂ ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆ ಹಾಗೂ ಅಂತರಾಷ್ಟ್ರೀಯ ನಾಯಕರಿಗೂ, ಬಾಂಗ್ಲಾದೇಶದಲ್ಲಿನ ಹಿಂದುಗಳ ಮೇಲಿನ ಅತ್ಯಾಚಾರ ನಿಲ್ಲಿಸಬೇಕು ಮತ್ತು ಅಲ್ಲಿಯ ಹಿಂದುಗಳ ರಕ್ಷಣೆ ಮಾಡಬೇಕು ಎಂದು ಕರೆ ನೀಡಿದ್ದರು.

೨. ಈ ಸಮಯದಲ್ಲಿ ಬಾಂಗ್ಲಾದೇಶದ ಸರಕಾರಕ್ಕೆ ಮನವಿ ನೀಡಲಾಯಿತು. ಇದರಲ್ಲಿ ‘ಅಲ್ಪಸಂಖ್ಯಾತ ಹಿಂದುಗಳ ಮೇಲಿನ ದೌರ್ಜನ್ಯದ ಪ್ರಕರಣಗಳು ತೀವ್ರ ಗತಿಯಲ್ಲಿ ಪರಿಹರಿಸಬೇಕು, ದಾಳಿಕೋರರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಹಾಗೂ ಸಂತ್ರಸ್ತ ಹಿಂದುಗಳಿಗೆ ಧನಸಹಾಯ ನೀಡಬೇಕೆಂದು ಮತ್ತು ಅವರ ಪುನರ್ವಸತಿ ಆಗಬೇಕು. ಅಲ್ಪಸಂಖ್ಯಾತರ ರಕ್ಷಣೆಯ ಸಂದರ್ಭದಲ್ಲಿ ಕಾನೂನು ರೂಪಿಸಿ ಅಲ್ಪಸಂಖ್ಯಾತ ಪ್ರಕರಣಗಳ ಬಗ್ಗೆ ಸಚಿವಾಲಯ ಸ್ಥಾಪನೆ ಆಗಬೇಕು. ಬಾಂಗ್ಲಾದೇಶಕ್ಕೆ ಯಾವುದೇ ಸರಕಾರಿ ಧರ್ಮ ಇರಬಾರದು’, ಈ ಮನವಿಗಳನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.